ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆ ಅನುಷ್ಠಾನಕ್ಕಾಗಿ 32,572 ಮರಗಳನ್ನು ಕಡಿಯಬೇಕಾಗಿದೆ ಎಂದು ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್) ತಿಳಿಸಿದೆ.
ಕತ್ತರಿಸಿದ ಪ್ರತಿ ಮರಕ್ಕೆ ಕಸಿ ಮಾಡಿದ ಹತ್ತು ಮರಗಳನ್ನು ನೆಡಲಾಗುವುದು ಎಂದು ಪ್ರತಿ ಮರಕ್ಕೆ 10 ಗಿಡ ನೆಡಲಾಗುವುದು ಎಂದು ಕೆ–ರೈಡ್ ತಿಳಿಸಿದೆ. ಈ ಸಂಬಂಧ ಜೂನ್ 14 ರಂದು ಸಾರ್ವಜನಿಕ ಸಮಾಲೋಚನೆ ಸಭೆಯನ್ನು ಸಹ ಆಯೋಜಿಸಿ ಯೋಜನೆಯ ಬಗ್ಗೆ ಮಾಹಿತಿ ಪ್ರಸಾರ ಮಾಡಲಿದೆ.
ಬಿಎಸ್‌ಆರ್‌ಪಿಯ ನಿರ್ಮಾಣ ಮತ್ತು ಕಾರ್ಯಾಚರಣೆಗಾಗಿ ಅದರ ಪರಿಸರ ಮತ್ತು ಸಾಮಾಜಿಕ ಪರಿಣಾಮದ ಮೌಲ್ಯಮಾಪನ ಅಧ್ಯಯನಕ್ಕೆ ಸಂಬಂಧಿಸಿದಂತೆ ಸಭೆ ನಡೆಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಒಟ್ಟು ಕತ್ತರಿಸಬೇಕಾಗಿರುವ ಮರಗಳಲ್ಲಿ 17,505 ಮರಗಳು ದೇವನಹಳ್ಳಿ ಪ್ರದೇಶದ ಅಕ್ಕುಪೇಟೆ ಡಿಪೊ ವ್ಯಾಪ್ತಿಯಲ್ಲಿದ್ದು, ಹೆಚ್ಚಾಗಿ ನೀಲಗಿರಿ ಮತ್ತು ಅಕೇಶಿಯಾ ಆಗಿವೆ. ಉಳಿದ 15,067 ಮರಗಳ ಪೈಕಿ 1071 ಮರಗಳು ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 13,996 ಮರಗಳಲ್ಲಿ 2098 ಮರಗಳನ್ನು ಕತ್ತರಿಸಲು ಹಾಗೂ 178 ಮರಗಳನ್ನು ಕಸಿ ಮಾಡಲು ಬಿಬಿಎಂಪಿಗೆ ಈಗಾಗಲೇ ವಹಿಸಲಾಗಿದೆ.
1 ಮರಕ್ಕೆ 10 ಗಿಡಗಳನ್ನು ನೆಡುವುದಕ್ಕಾಗಿ ಬಿಬಿಎಂಪಿಗೆ ಕೆ–ರೈಡ್ ವತಿಯಿಂದ 8.07ರು. ಕೋಟಿ ಪಾವತಿಸಲಾಗಿದೆ. ಗಿಡಗಳನ್ನು ನೆಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಕೆ–ರೈಡ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಪರಿಸರ ಮತ್ತು ಸಾಮಾಜಿಕ ಪರಿಣಾಮದ ವರದಿಗಳನ್ನು ಸಿದ್ಧಪಡಿಸಲಾಗಿದ್ದು ಮತ್ತು ಕಂಪನಿಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ - kride.in/sub-urban-rail-project/. ನಗರದ ಎಂಜಿ ರೈಲ್ವೆ ಕಾಲೋನಿಯಲ್ಲಿರುವ ಅನುಗ್ರಹ ಸಮುದಾಯ ಭವನದಲ್ಲಿ ಸಾರ್ವಜನಿಕ ಸಮಾಲೋಚನೆ ಸಭೆ ನಡೆಯಲಿದೆ. ಹೆಚ್ಚಿನ ವಿವರಗಳಿಗಾಗಿ : www.kride.in, ವೆಬ್ ಸೈಟ್ ಹಗೆ ಭೇಟಿ ನೀಡಲು ಕೋರಲಾಗಿದೆ.