ಹಾಸನಾಂಬೆ ದೇವಾಲಯ 
ರಾಜ್ಯ

ಹಾಸನಾಂಬ ದೇವಿ ಜಾತ್ರೆ ಉತ್ಸವ: ಆದಾಯದಲ್ಲಿ ಹೊಸ ದಾಖಲೆ ಸೃಷ್ಟಿ!

ಹಾಸನಾಂಬ ದರ್ಶನೋತ್ಸವವು ವರ್ಷಕ್ಕೆ ಒಮ್ಮೆ ಮಾತ್ರ ನಡೆಯುತ್ತದೆ. ಈ ಬಾರಿ ಹಾಸನಾಂಬೆ ದರ್ಶನ ಪಡೆಯಲು ಭಕ್ತಾಧಿಗಳು ಸಾಕಷ್ಟು ಸವಾಲು ಎದುರಿಸಿದ್ದರು. ಸರತಿ ಸಾಲಿನಲ್ಲಿ ಗಂಟೆ ಗಟ್ಟಲೆ ನಿಂತು ಪರದಾಡಿದ್ದರು. ಇದರ ಹೊರತಾಗಿಯೂ ಈ ಬಾರಿ ಕೋಟ್ಯಾಂತರ ರೂಪಾಯಿ ಆದಾಯ ಸಂಗ್ರಹವಾಗಿದೆ.

ಹಾಸನ: ಹಾಸನಾಂಬೆ ದೇವಿ ಜಾತ್ರಾ ಉತ್ಸವ ಪೂರ್ಣಗೊಂಡಿದ್ದು, ಈ ಬಾರಿ ಹಲವು ಕೋಟಿ ರುಪಾಯಿ ಆದಾಯ ಸಂಗ್ರಹವಾಗಿದೆ.

ಹಾಸನಾಂಬೆ ದರ್ಶನೋತ್ಸವವು ವರ್ಷಕ್ಕೆ ಒಮ್ಮೆ ಮಾತ್ರ ನಡೆಯುತ್ತದೆ. ಈ ಬಾರಿ ಹಾಸನಾಂಬೆ ದರ್ಶನ ಪಡೆಯಲು ಭಕ್ತಾಧಿಗಳು ಸಾಕಷ್ಟು ಸವಾಲು ಎದುರಿಸಿದ್ದರು. ಸರತಿ ಸಾಲಿನಲ್ಲಿ ಗಂಟೆ ಗಟ್ಟಲೆ ನಿಂತು ಪರದಾಡಿದ್ದರು. ಇದರ ಹೊರತಾಗಿಯೂ ಈ ಬಾರಿ ಕೋಟ್ಯಾಂತರ ರೂಪಾಯಿ ಆದಾಯ ಸಂಗ್ರಹವಾಗಿದೆ.

ಹಾಸನಾಂಬ ದರ್ಶನೋತ್ಸವದ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ಗುಸ ಈ ಬಾರಿಯ ಹಾಸನಾಂಬೆ ದರ್ಶನೋತ್ಸವದಿಂದ ಬರೋಬ್ಬರಿ 12.64 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಹಾಸನಾಂಬ ದೇವಾಲಯದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಮೊತ್ತದ ದಾಖಲೆಯ ಆದಾಯ ಇದು ಎಂದು ಹೇಳಲಾಗುತ್ತಿದೆ.

ಹಾಸನಾಂಬ ದೇವಸ್ಥಾನ ಸಮಿತಿಯ ಆಡಳಿತಾಧಿಕಾರಿ ಮಾರುತಿ ಅವರು ಮಾತನಾಡಿ, 1000 ಟಿಕೆಟ್ ಮಾರಾಟದಿಂದ 7.41 ಕೋಟಿ ರೂ., 300 ಟಿಕೆಟ್ ಮಾರಾಟದಿಂದ 1.81. ಕೋಟಿ ರೂ., ಲಡ್ಡು ಪ್ರಸಾದ ಮಾರಾಟದಿಂದ 76.77 ಲಕ್ಷ ರೂ., ಆನ್‌ಲೈನ್ ಟಿಕೆಟ್‌ ಮಾರಾಟ ಮೂಲಕ 6.84 ಲಕ್ಷ ರೂ, ಸೀರೆ ಮಾರಾಟದಿಂದ 2 ಲಕ್ಷ ರೂ. ಆದಾಯ ಬಂದಿದ್ದು, ದೇವಾಲಯದ ಹುಂಡಿಗೆ 2,55,97,567 ರೂ. ಸಿದ್ದೇಶ್ವರ ದೇಗುಲದ ಹುಂಡಿಯಲ್ಲಿ 13,47,780 ರೂ ಬಂದಿದ್ದು, ಉಳಿದ ಹಣ ಕಾಣಿಕೆ, ತುಲಾಭಾರ, ಜಾಹೀರಾತಿನ ಮೂಲಕ ಸಂಗ್ರಹವಾಗಿದೆ ಎಂದು ಬಹೇಳಿದ್ದಾರೆ.

ಹುಂಡಿಯಲ್ಲಿ ನಗದು ಹೊರತುಪಡಿಸಿ 51 ಗ್ರಾಂ ಚಿನ್ನಾಭರಣ, 913 ಗ್ರಾಂ ಬೆಳ್ಳಿ ಆಭರಣ ಹಾಗೂ 500 ಗ್ರಾಂ ತಾಮ್ರದ ವಸ್ತುಗಳು ಪತ್ತೆಯಾಗಿವೆ.

ಇದೇ ಮೊದಲ ಬಾರಿಗೆ ದೇವಸ್ಥಾನದ ಆಡಳಿತ ಸಮಿತಿಯು ಭಕ್ತರು ಹುಂಡಿಯಲ್ಲಿ ಹಾಕಿದ್ದ ಪತ್ರಗಳ ವಿಷಯಗಳನ್ನು ಬಹಿರಂಗಪಡಿಸಿಲ್ಲ. ಹುಂಡಿಯಲ್ಲಿ ಹಾಕಿರುವ ಪತ್ರಗಳಲ್ಲಿ ಹೆಚ್ಚಿನ ಭಕ್ತರು ಮದುವೆ, ಜಮೀನು ವಿವಾದ ಇತ್ಯರ್ಥ, ಕೌಟುಂಬಿಕ ಸಮಸ್ಯೆ ಹಾಗೂ ಉದ್ಯೋಗಕ್ಕಾಗಿ ಪ್ರಾರ್ಥಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಹುಂಡಿಯಲ್ಲಿ 1,000 ಕ್ಕೂ ಹೆಚ್ಚು ವಿವಿಧ ಕೈಬರಹದ ಪತ್ರಗಳು, ವಿದೇಶಿ ಕರೆನ್ಸಿಗಳು, ಹಾರ, ಕೈ ಗಡಿಯಾರ, ನಿಷೇಧಿತ 1,000 ಮತ್ತು 2,000 ರೂ ನೋಟು ಹಾಗೂ ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿದ ಪತ್ರವೂ ಹುಂಡಿಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹುಂಡಿಗಳಲ್ಲಿ ಸಂಗ್ರಹವಾದ ನಗದು ಎಣಿಕೆಗೆ ಕಂದಾಯ ಇಲಾಖೆ, ಬ್ಯಾಂಕ್‌ನ 500 ಅಧಿಕಾರಿಗಳು ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರನ್ನು ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

17 ಭಾಷೆಗಳಲ್ಲಿ ಹಾಡಿದರೂ ಕನ್ನಡದ ನೆಲದಲ್ಲೇ ಮಣ್ಣಾದ ಗಾನಕೋಗಿಲೆ: ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಸ್.ಜಾನಕಿ ಅಂತ್ಯಕ್ರಿಯೆ!

ನಿಮ್ಮ ತಲೆ ತೆಗಿತೀವಿ: ಟ್ರಂಪ್, ನೆತನ್ಯಾಹು, ಮೆಲೋನಿ ಹಾಗೂ ಯುರೋಪಿಯನ್ ನಾಯಕರು ನಮ್ಮ ಟಾರ್ಗೆಟ್; ಇರಾನ್ ಪತ್ರಿಕೆ

'96 ' ಚಿತ್ರದಲ್ಲಿ ಜಾನಕಿ ಹೆಸರಿನ ಪಾತ್ರ: ನೆನಪಿಸಿಕೊಂಡ ನಟಿ ತ್ರಿಶಾ ಕೃಷ್ಣನ್, Deleted scene ಹಂಚಿಕೊಂಡ ಅಭಿಮಾನಿಗಳು! ಅದ್ರಲ್ಲಿ ಏನಿದೆ..? Video..

ಅಮೆರಿಕ ಜೊತೆ ಒಪ್ಪಂದ 'ಮುಗಿದಿದೆ': ಹೊಸ ದಾಳಿಗಳ ಬೆನ್ನಲ್ಲೇ ಇರಾನ್ ಘೋಷಣೆ

ಮಾರುವೇಷ ಯಾಕೆ ಸ್ವಾಮಿ... ಇದು ಚಿಲ್ಲರೆ ಕಾಲವಲ್ಲ, ಕ್ಯೂಆರ್ ಕೋಡ್ ಕಾಲ: ಸಚಿವ ಸುರೇಶ್‌ಗೆ ಶಾಸಕ ಸುರೇಶ್ ಕುಮಾರ್ ಪಾಠ