ಸಾಂದರ್ಭಿಕ ಚಿತ್ರ 
ರಾಜ್ಯ

ಮೊದಲ ಬಾರಿಗೆ ದ್ವೀಪಗಳ ಸಮೀಕ್ಷೆಗೆ 'ದಿ ಸರ್ವೇ ಆಫ್ ಇಂಡಿಯಾ' ಮುಂದು: ಡೇಟಾ ಹಂಚಿಕೊಳ್ಳಲು ಕರ್ನಾಟಕ ವಿಫಲ!

ಈ ವರ್ಷದ ಆಗಸ್ಟ್‌ನಲ್ಲಿ, ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಕರಾವಳಿ ಪ್ರದೇಶಗಳಲ್ಲಿನ ಸಂಶೋಧನಾ ಸಂಸ್ಥೆಗಳು ಮತ್ತು ಜಿಲ್ಲಾ ಆಡಳಿತಗಳಿಗೆ ದ್ವೀಪಗಳ ಹೆಸರುಗಳು, ಸರ್ವೆ ಸಂಖ್ಯೆಗಳು ಮತ್ತು ಭೌಗೋಳಿಕ ನಿರ್ದೇಶಾಂಕಗಳ ಮಾಹಿತಿಯನ್ನು ಕೇಳಿ ಪತ್ರ ಬರೆದಿದೆ.

ಬೆಂಗಳೂರು: ದಿ ಸರ್ವೆ ಆಫ್ ಇಂಡಿಯಾ (ಎಸ್‌ಒಐ) ಕರಾವಳಿಯಲ್ಲಿರುವ ದ್ವೀಪಗಳ ವಿವರಗಳನ್ನು ಕೋರಿದ ಎರಡು ತಿಂಗಳ ನಂತರವೂ ರಾಜ್ಯ ಸರ್ಕಾರ ಮತ್ತು ಕರಾವಳಿ ಏಜೆನ್ಸಿಗಳು ಇನ್ನೂ ಮಾಹಿತಿ ನೀಡಿಲ್ಲ.

ಈ ವರ್ಷದ ಆಗಸ್ಟ್‌ನಲ್ಲಿ, ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಕರಾವಳಿ ಪ್ರದೇಶಗಳಲ್ಲಿನ ಸಂಶೋಧನಾ ಸಂಸ್ಥೆಗಳು ಮತ್ತು ಜಿಲ್ಲಾ ಆಡಳಿತಗಳಿಗೆ ದ್ವೀಪಗಳ ಹೆಸರುಗಳು, ಸರ್ವೆ ಸಂಖ್ಯೆಗಳು ಮತ್ತು ಭೌಗೋಳಿಕ ನಿರ್ದೇಶಾಂಕಗಳ ಮಾಹಿತಿಯನ್ನು ಕೇಳಿ ಪತ್ರ ಬರೆದಿದೆ.

ದ್ವೀಪಗಳ ಬಗ್ಗೆ ಇಂತಹ ವಿವರವಾದ ಅಧ್ಯಯನವನ್ನು ನಡೆಸುತ್ತಿರುವುದು ಇದೇ ಮೊದಲು. ಹೀಗಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ ಮಾಹಿತಿ ಕೋರಲಾಗಿದೆ. ಆದರೆ, ಕರ್ನಾಟಕದ ಸರ್ಕಾರದ ಮಾತ್ರ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ವಾಸ್ತವವಾಗಿ, ಜಿಲ್ಲಾಧಿಕಾರಿಯಿಂದ ಕೇವಲ ಒಂದು ಸ್ವೀಕೃತಿಯ ಪ್ರತಿಕ್ರಿಯೆ ಮಾತ್ರ ಇತ್ತು. ಸಮೀಕ್ಷೆಗೆ ಯಾವ ಏಜೆನ್ಸಿ ಹೊಣೆಗಾರಿಕೆ ನೀಡಲಾಗಿದೆ ಮತ್ತು ಅದನ್ನು ಹೇಗೆ ನಡೆಸಬೇಕು ಎಂಬುದು ಖಚಿತವಾಗದ ಕಾರಣ, ಅಗತ್ಯವಿರುವ ಮಾಹಿತಿಯನ್ನು ಒದಗಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಸರ್ವೆಆಫ್ ಇಂಡಿಯಾ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.

ಬೆಂಗಳೂರಿನ ಎಸ್‌ಒಐ ತಂಡವು ನವೆಂಬರ್‌ನಿಂದ ಮಾರ್ಚ್‌ವರೆಗೆ ಕಾರವಾರದಿಂದ ಮಂಗಳೂರಿನವರೆಗಿನ 370 ಕಿಮೀ ಕರಾವಳಿಯನ್ನು ಒಳಗೊಂಡ ಅಧ್ಯಯನವನ್ನು ನಡೆಸುತ್ತದೆ. ಉಪಗ್ರಹ ಚಿತ್ರಗಳನ್ನು ಪಡೆಯಲಾಗಿದ್ದು, ನೆಲದ ಸಮೀಕ್ಷೆಗಳನ್ನು ನಡೆಸಲಾಗುತ್ತದೆ ಮತ್ತು ಇದನ್ನು ಬೇಸ್ ಮ್ಯಾಪ್‌ಗಳಿಗೆ ಹೋಲಿಸಲಾಗುತ್ತದೆ ಎಂದು ಎಸ್‌ಒಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಭಿವೃದ್ಧಿಯ ಪ್ರದೇಶವನ್ನು ನಿರ್ಣಯಿಸಲು, ಭವಿಷ್ಯದ ಬೆಳವಣಿಗೆಯ ಯೋಜನೆ, ಕರಾವಳಿ ಗಡಿಗಳನ್ನು ನಿರ್ಧರಿಸಲು ಮತ್ತು ಸವೆತದಿಂದಾಗಿ ಎಷ್ಟು ಭೂಮಿ ಕಳೆದುಹೋಗಿದೆ ಅಥವಾ ಗಳಿಸಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ವಿವರವಾದ ಮಾಹಿತಿಯನ್ನು ಸಂಗ್ರಹಿಸುತ್ತಿರುವುದು ಇದೇ ಮೊದಲು.

ಪತ್ರದಲ್ಲಿ,ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ ಅಡಿಯಲ್ಲಿನ ಪ್ರದೇಶಗಳು, ದ್ವೀಪಗಳನ್ನು ನಿರ್ವಹಿಸುವ ಆಡಳಿತ ಸಂಸ್ಥೆಗಳು, ಜನಸಂಖ್ಯೆ, ಅಸ್ತಿತ್ವದಲ್ಲಿರುವ ಸೌಲಭ್ಯಗಳು ಮತ್ತು ಮೂಲಸೌಕರ್ಯ ಮತ್ತು ಪರಿಸರ ಸ್ಥಿತಿಯ ಬಗ್ಗೆ ವಿವರಗಳನ್ನು ಕೋರಿದೆ. ಈ ಮಾಹಿತಿಯು ದ್ವೀಪದ ದತ್ತಾಂಶದ ನವೀಕರಣದಿಂದಾಗಿ ರಾಷ್ಟ್ರೀಯ ಜಿಯೋ ನೀತಿ-2022 ರ ಅಡಿಯಲ್ಲಿ ನಕ್ಷೆಗಳು ಸೇರಿದಂತೆ ಜಿಯೋಸ್ಪೇಷಿಯಲ್ ಡೇಟಾ ಸೇವೆಗಳ ಸ್ವಾಧೀನ ಮತ್ತು ಉತ್ಪಾದನೆಯನ್ನು ಬೆಂಬಲಿಸುವ ಉದ್ದೇಶವನ್ನು ಹೊಂದಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಎಸ್‌ಒಐನ ಕರ್ನಾಟಕ ಭೂ-ಪ್ರಾದೇಶಿಕ ನಿರ್ದೇಶನಾಲಯದ ನಿರ್ದೇಶಕ ವೆಂಕಟೇಶ್ವರ ರಾವ್ ಮಾತನಾಡಿ “ಇಲ್ಲಿಯವರೆಗೆ, ನಮ್ಮ ಬಳಿ ಭೂ ದಾಖಲೆಗಳ ಡೇಟಾ ಇದೆ, ಆದರೆ ಕರಾವಳಿ ಪ್ರದೇಶಗಳ ಬಗ್ಗೆ ಯಾವುದೇ ನವೀಕರಿಸಿದ ಮಾಹಿತಿ ಇಲ್ಲ, ಅದಕ್ಕಾಗಿಯೇ ನಾವು ಈ ವಿವರಗಳನ್ನು ಕೇಳಿದ್ದೇವೆ. ನಾವು ದ್ವೀಪಗಳ ಬಗ್ಗೆ ಕೆಲವು ಮಾಹಿತಿಯನ್ನು ಹೊಂದಿದ್ದರೂ, ಅವುಗಳಲ್ಲಿ ಹಲವು ಹೆಸರುಗಳನ್ನು ಹೊಂದಿಲ್ಲ; ಇದನ್ನು ಸಹ ಸ್ಪಷ್ಟಪಡಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ಇರಾಕ್‌ನಲ್ಲಿ ಅಮೆರಿಕಾದ KC-135 ಸೇನಾ ವಿಮಾನ ಪತನ; ರಕ್ಷಣಾ ಕಾರ್ಯಾಚರಣೆ ಆರಂಭ

ಕಲಬುರಗಿಯಲ್ಲಿ ಪತ್ತೆಯಾದ ಪ್ರಾಚೀನ ಬೌದ್ಧ ಮಠದ ವಿಸ್ತೃತ ಉತ್ಖನನ ಕೈಗೊಳ್ಳಿ: ಕೇಂದ್ರಕ್ಕೆ ಖರ್ಗೆ ಒತ್ತಾಯ

ಆಪರೇಷನ್‌ ಕಮಲದ ಆತಂಕ: ಅಸ್ಸಾಂ ಕಾಂಗ್ರೆಸ್‌ ಶಾಸಕರು ಬಿಡದಿ ರೆಸಾರ್ಟ್‌ಗೆ ಶಿಫ್ಟ್‌; ಅಖಾಡಕ್ಕಿಳಿದ ಡಿಕೆ ಶಿವಕುಮಾರ್

ರಾಜ್ಯದ 470 ಹಳ್ಳಿಗಳಿಗೆ ಮೊಬೈಲ್ ನೆಟ್​ವರ್ಕೇ ಇಲ್ಲ..!

ಮೋದಿ ನಿಜವಾದ ಮುತ್ಸದ್ದಿ: ದೂರದೃಷ್ಟಿ ಹೊಂದಿರುವ ಅದ್ಭುತ ನಾಯಕ; ನಟ ಮೋಹನ್‌ ಲಾಲ್ ಶ್ಲಾಘನೆ

SCROLL FOR NEXT