ಮನೆ ಮಾರಾಟಕ್ಕಿಟ್ಟ ನಿಜಲಿಂಗಪ್ಪ ಕುಟುಂಬಸ್ಥರು 
ರಾಜ್ಯ

ಬೆಂಗಳೂರು: ಸರ್ಕಾರದ ನಿರ್ಲಕ್ಷ್ಯ; ಮಾಜಿ ಮುಖ್ಯಮಂತ್ರಿ ಎಸ್​ ನಿಜಲಿಂಗಪ್ಪ ಮನೆ ಮಾರಾಟಕ್ಕೆ!

ಚಿತ್ರದುರ್ಗ ನಗರದ ವಾರ್ಡ್​ ನಂ 32 ವಿಪಿ ಬಡಾವಣೆಯ ಡಿಸಿ ಬಂಗಲೆಯ ಹತ್ತಿರ ಇರುವ 117 X 130 ಅಡಿ ವಿಸ್ತೀರ್ಣದ ಶ್ವೇತ ಭವನದಲ್ಲಿ ಮಾಜಿ ಮುಖ್ಯಮಂತ್ರಿಗಳು ವಾಸವಾಗಿದ್ದರು.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ಕುಟುಂಬವು ಚಿತ್ರದುರ್ಗ ನಗರದ ಹೃದಯ ಭಾಗದಲ್ಲಿರುವ ಜಿಲ್ಲಾಧಿಕಾರಿ ಬಂಗಲೆಯ ಪಕ್ಕದಲ್ಲಿರುವ 'ವಿನಯಾ' ಬಂಗಲೆಯನ್ನು ಮಾರಾಟಕ್ಕೆ ಇಟ್ಟಿದೆ.

ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ 1937ರಲ್ಲಿ ನಿಜಲಿಂಗಪ್ಪ ವಕೀಲರಾಗಿದ್ದಾಗ ನಿರ್ಮಿಸಿದ ಮನೆಯನ್ನು 10 ಕೋಟಿ ರೂ.ಗೆ ಮಾರಾಟ ಮಾಡಲಾಗುವುದು. ಆಸ್ತಿ 5,000 ಚದರ ಅಡಿ ಭೂಮಿಯಲ್ಲಿ ಹರಡಿದೆ ಎಂದು ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ವಾರ್ಡ್​ ನಂ 32 ವಿಪಿ ಬಡಾವಣೆಯ ಡಿಸಿ ಬಂಗಲೆಯ ಹತ್ತಿರ ಇರುವ 117 X 130 ಅಡಿ ವಿಸ್ತೀರ್ಣದ ಶ್ವೇತ ಭವನದಲ್ಲಿ ಮಾಜಿ ಮುಖ್ಯಮಂತ್ರಿಗಳು ವಾಸವಾಗಿದ್ದರು. ಈ ಮನೆಯನ್ನು ಹತ್ತು ಕೋಟಿ ರೂ .ಗೆ ಮಾರಾಟ ಮಾಡಲು ನಿಜಲಿಂಗಪ್ಪ ಅವರ ಪುತ್ರ ಎಸ್​ಎನ್​ ಕಿರಣಶಂಕರ್​ ಮುಂದಾಗಿದ್ದಾರೆ. ಬಂಗಲೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರಕ್ಕೆ ಮಾರಾಟ ಮಾಡಲು ಕುಟುಂಬವು ನಡೆಸಿದ ಪ್ರಯತ್ನ ವಿಫಲವಾದ ನಂತರ ಖಾಸಗಿಯವರಿಗೆ ಮಾರಾಟಕ್ಕಿಟ್ಟಿದ್ದಾರೆ.

ಈ ಮನೆಯನ್ನು ನಿಜಲಿಂಗಪ್ಪ ಅವರು ತಮ್ಮ ಮೊಮ್ಮಗ ವಿನಯ್​ ಅವರ ಹೆಸರಿಗೆ ವಿಲ್​ ಬರೆದಿದ್ದಾರೆ. ಹೀಗಾಗಿ, ಈ ಮನೆಯನ್ನು ಸಬ್​ರಿಜಿಸ್ಟಾರ್​ ಮೂಲಕ ನೋಂದಣಿ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ನಿಜಲಿಂಗಪ್ಪ ಪುತ್ರ ಈ ಮನೆ ಅನುಭವಿಸಿದ ಬಳಿಕ ವಿನಯ್​ಗೆ ಮನೆ ಸೇರಬೇಕು ಎಂದು ವಿಲ್​ನಲ್ಲಿದೆ. ವಿನಯ್​ ಅವರ ಹೆಸರಿಗೆ ರಿಜಿಸ್ಟ್ರೇಶನ್​ ಆಗದೇ ಸರ್ಕಾರಕ್ಕೆ ಮನೆ ಖರೀದಿಸಲು ಸಾಧ್ಯವಿಲ್ಲ. ಮಾಜಿ ಎಂಎಲ್‌ಸಿ ಹಾಗೂ ನಿಜಲಿಂಗಪ್ಪ ಅವರ ನಿಕಟವರ್ತಿ ಮೋಹನ್‌ಕುಮಾರ್‌ ಕೊಂಡಜ್ಜಿ ಮಾತನಾಡಿ, ‘ಅಂದಿನ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರು ಮನೆ ಖರೀದಿ ಪ್ರಕ್ರಿಯೆ ಆರಂಭಿಸಿ ನೋಂದಣಿಯಾಗದ ಉಯಿಲಿನ ಬಗ್ಗೆ ಕಾನೂನು ಅಭಿಪ್ರಾಯ ಪಡೆದಿದ್ದರು.

ಆದರೆ ಸರಿಯಾಗಿ ಮಾಹಿತಿ ನೀಡದ ಅಂದಿನ ಸಬ್ ರಿಜಿಸ್ಟ್ರಾರ್ ಡೀಲ್ ನಿಲ್ಲಿಸಿ, ಅಮೆರಿಕದಿಂದ ಬಂದಿದ್ದ ನಿಜಲಿಂಗಪ್ಪ ಅವರ ಮೊಮ್ಮಗ ವಿನಯ್ ಕಿರಣಶಂಕರ್ ಸಿದ್ದವ್ವನಹಳ್ಳಿ ವಾಪಸ್ ತೆರಳಿದ್ದರು. ಅದರ ನಂತರ, ಕುಟುಂಬವು ಆಸ್ತಿಯನ್ನು ಸರ್ಕಾರಕ್ಕೆ ಮಾರಾಟ ಮಾಡದಿರಲು ನಿರ್ಧರಿಸಿತು. ಸರ್ಕಾರ ವಿನಯ್​ ಅವರ ಹೆಸರಿಗೆ ರಿಜಿಸ್ಟ್ರೇಶನ್​ ಮಾಡಲು ಮುಂದಾಗುತ್ತಿಲ್ಲ. ಇನ್ನು, ವಿನಯ್​ ವಿದೇಶದಲ್ಲಿದ್ದಾರೆ. ಆದರೆ, ಸರ್ಕಾರ ಮನಸ್ಸು ಮಾಡಿ ಕಾನೂನು ತೊಡಕು ಸರಿಸಿ ಮನೆ ಖರೀದಿಸಿ, ಸ್ಮಾರಕ ಮಾಡಬೇಕು ಎಂದು ಜನರ ಆಗ್ರಹವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT