ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ) 
ರಾಜ್ಯ

BBMP: ಇ-ಖಾತಾ ಪಡೆಯಲು ಶೀಘ್ರದಲ್ಲೇ ಹೊಸ ಪೋರ್ಟಲ್ ಆರಂಭ!

ಇ-ಖಾತಾ ಪಡೆಯುವವರಿಗೆ ಪಾಲಿಕೆಯು ಶೀಘ್ರದಲ್ಲೇ ಹೊಸ ಪೋರ್ಟಲ್ ಅನ್ನು ಪ್ರಾರಂಭಿಸಲಿದೆ, ಇದರಿಂದ ಯಾವುದೇ ರೀತಿಯ ಖಾತಾ ಹೊಂದಿಲ್ಲದ ಆಸ್ತಿ ಮಾಲೀಕರಿಗೆ ಹೊಸ ಇ-ಖಾತಾವನ್ನು ಪಡೆಯಲು ಅನುಕೂಲವಾಗಲಿದೆ.

ಬೆಂಗಳೂರು: ವಂಚನೆಯನ್ನು ತೊಡೆದುಹಾಕಲು ಹಾಗೂ ವಾರ್ಷಿಕ ತೆರಿಗೆ ಸಂಗ್ರಹಣೆಯನ್ನು ಸುಧಾರಿಸಲು ಸುಮಾರು 22 ಲಕ್ಷ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಇದೀಗ ಖಾತಾಗಳನ್ನು ನೀಡದ 5 ಲಕ್ಷ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಸಿದ್ಥತೆ ನಡೆಸಿದೆ.

ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಬಿಎಂಪಿ ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ಅವರು, ಇ-ಖಾತಾ ಪಡೆಯುವವರಿಗೆ ಪಾಲಿಕೆಯು ಶೀಘ್ರದಲ್ಲೇ ಹೊಸ ಪೋರ್ಟಲ್ ಅನ್ನು ಪ್ರಾರಂಭಿಸಲಿದೆ, ಇದರಿಂದ ಯಾವುದೇ ರೀತಿಯ ಖಾತಾ ಹೊಂದಿಲ್ಲದ ಆಸ್ತಿ ಮಾಲೀಕರಿಗೆ ಹೊಸ ಇ-ಖಾತಾವನ್ನು ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.

ಒಂದು ಅಂದಾಜಿನ ಪ್ರಕಾರ, ನಗರದಲ್ಲಿ ಸುಮಾರು 5 ಲಕ್ಷ ಆಸ್ತಿಗಳು ಖಾತಾ ಹೊಂದಿಲ್ಲ. ಅವರು ಇ-ಖಾತಾವನ್ನು ಪಡೆಯಬೇಕು ಮತ್ತು ನಿಯಮಿತವಾಗಿ ತೆರಿಗೆಗಳನ್ನು ಪಾವತಿಸಬೇಕು ಎಂದು ತಿಳಿಸಿದರು.

ನಗರದಲ್ಲಿನ ಸುಮಾರು 5 ಲಕ್ಷ ಸ್ವತ್ತುಗಳು ಖಾತಾ ಪಡೆದಿಲ್ಲ. ಕೆಲವೊಂದು ಆಸ್ತಿಗಳಿಗೂ ಕ್ರಯಪತ್ರವೂ ಇಲ್ಲ. ತೆರಿಗೆ ಕೂಡ ಪಾವತಿಸಿಲ್ಲ. ನಿವೇಶನಕ್ಕಷ್ಟೇ ಖಾತೆ ಪಡೆದಿದ್ದು, ಅದರಲ್ಲಿ ನಿರ್ಮಿಸಿರುವ ಫ್ಲ್ಯಾಟ್‌ಗಳಿಗೆ ಖಾತಾ ಪಡೆದುಕೊಂಡಿಲ್ಲ. ಹೊಸ ಖಾತಾವನ್ನು ಪಡೆಯುವವರು ನೋಂದಣಿ ದಿನಾಂಕದಿಂದ ತೆರಿಗೆ ಬಾಕಿಯನ್ನು ಪಾವತಿಸಬೇಕಾಗುತ್ತದೆ. ಈಗಾಗಲೇ ಖಾತಾ ಹೊಂದಿರುವ ಜನರು ಪೋರ್ಟಲ್‌ನಲ್ಲಿ ಹೊಸ ಖಾತಾಕ್ಕಾಗಿ ಅರ್ಜಿ ಸಲ್ಲಿಸಬಾರದು. ಏಕೆಂದರೆ ಇದು ನಕಲಿಗೆ ಕಾರಣವಾಗಬಹುದು. ಈ ರೀತಿಯ ಸಂಕೀರ್ಣ ಸಮಸ್ಯೆಗಳು ಸಾಕಷ್ಟಿವೆ. ಇಂತಹ ಗೊಂದಲ ಮತ್ತು ಸಮಯದ ನಷ್ಟವನ್ನು ತಪ್ಪಿಸಲು ಪ್ರತ್ಯೇಕ ಮಾರ್ಗಸೂಚಿಯನ್ನು 2-3 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಆಸ್ತಿ ಮಾಲೀಕರು ನ.30ರೊಳಗೆ ಬಾಕಿ ತೆರಿಗೆ ಪಾವತಿಸದರೆ ದಂಡ ಮತ್ತು ಬಡ್ಡಿ ಮನ್ನಾ ಆಗಲಿದೆ. ಒಂದು ವೇಲೆ ಬಾಕಿ ತೆರಿಗೆ ಪಾವತಿಸದಿದ್ದರೆ ಡಿ.1ರಿಂದ ಬಾಕಿ ತೆರಿಗೆ ಜೊತೆಗೆ ದುಬಾರಿ ದಂಡ ಮತ್ತು ಬಡ್ಡಿ ವಸೂಲಿ ಮಾಡಲಾಗುವುದು. ವಸತಿಯೇತರ ಆಸ್ತಿಗಳಿಗೆ ಬೀಗ ಮುದ್ರ ಹಾಕಲಾಗುವುದು. ಖಾತಾ ಹೊಂದಿಲ್ಲದ ಆಸ್ತಿಗಳ ಮಾಲೀಕರು ಈಗಲೇ ಎಚ್ಚೆತ್ತುಕೊಂಡು ತೆರಿಗೆ ಪಾವತಿಸಬೇಕು. ಇಲ್ಲದಿದ್ದರೆ ದುಬಾರಿ ಮೊತ್ತ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಗರದಲ್ಲಿನ ಪ್ರತಿ ಆಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಜತೆಗೆ ಆಸ್ತಿಗಳನ್ನು ಜಿಪಿಎಸ್ ಮ್ಯಾಪಿಂಗ್ ಮಾಡಲಾಗುತ್ತಿದೆ. ಅದಕ್ಕಾಗಿ ಈ ಹಿಂದೆಯೇ ಡ್ರೋನ್ ಸರ್ವೇ ಮಾಡಿ ನಗರದಲ್ಲಿ ಆಶ್ತಿಗಳ ಚಿತ್ರವನ್ನು ತೆಗೆದುಕೊಂಡು, ನಿರ್ಮಿತ ಪ್ರದೇಶ ಸೇರಿ ಜಿಪಿಎಸ್ ಮ್ಯಾಪಿಂಗ್ ಮಾಡಲಾಗುತ್ತಿದೆ. ಕಾವೇರಿ ತಂತ್ರಾಂಶ, ಬೆಸ್ಕಾಂ, ತೆರಿಗೆ ಪಾವತಿ ರಶೀದಿ, ಆಧಾರ್‌ನೊಂದಿಗೆ ಆಸ್ತಿಗಳನ್ನು ಸಂಯೋಜಿಸಲಾಗುತ್ತಿದೆ. ಹೀಗಾಗಿ, ಯಾರೊಬ್ಬರೂ ಆಸ್ತಿಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು,

ಇ-ಖಾತಾ ದಾಖಲೆಯಲ್ಲಿ ಆಸ್ತಿಯ ವಿಸ್ತೀರ್ಣ, ಮಾಲೀಕರ ಹೆಸರು, ಭಾವಚಿತ್ರ, ನಕ್ಷೆ ಹಾಗೂ ಸ್ವತ್ತಿನ ಛಾಯಾಚಿತ್ರವೂ ಇರಲಿದೆ. ಒಂದೇ ನಿವೇಶನವನ್ನು ಹಲವರಿಗೆ ಮಾರಾಟ ಮಾಡುವಂತಹ ವಂಚನೆಗಳಿಗೂ ಕಡಿವಾಣ ಬೀಳಲಿದೆ ಎಂದು ಹೇಳಿದರು.

ಕರಡು ಇ-ಖಾತಾ ಅಥವಾ ಅಂತಿಮ ಇ-ಖಾತಾ ದಾಖಲೆಗಳಲ್ಲಿ ಹೆಸರು, ವಿಸ್ತೀರ್ಣ ಸೇರಿದಂತೆ ಇತರೆ ನ್ಯೂನತೆಗಳಿದ್ದರೆ ಸರಿಪಡಿಸಿಕೊಳ್ಳಲು ಅವಕಾಶವಿದೆ. ಸಂಬಂಧಪಟ್ಟ ಮಾಲೀಕರು ಸೂಕ್ತ ದಾಖಲೆಗಳೊಂದಿಗೆ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ)ಗಳನ್ನು ಭೇಟಿ ಮಾಡಿ, ದೋಷಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ. ಎಆರ್‌ಒಗಳು ಸ್ಪಂದಿಸದಿದ್ದರೆ, ಮೇಲಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದು.

ಕೆಲವೇ ದಿನಗಳಲ್ಲಿ ಪಾಲಿಕೆಯು ಇ-ಖಾತಾ ಅರ್ಜಿ ಸಲ್ಲಿಸಲು ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಿದ್ದು, ಆ್ಯಪ್ ನಲ್ಲಿ ಆಸ್ತಿಯ ಚಿತ್ರಗಳನ್ನು ಅಪ್‌ಲೋಡ್ ಮಾಡುವುದು, ಸ್ಥಳವನ್ನು ಜಿಯೋ-ಟ್ಯಾಗ್ ಮಾಡುವಂತಹ ವೈಶಿಷ್ಟ್ಯಗಳನ್ನು ಈ ಆ್ಯಪ್ ಹೊಂದಿರುತ್ತದೆ. ಈಗಾಗಲೇ ಬೆಂಗಳೂರು ಒನ್‌ ಕೇಂದ್ರಗಳಲ್ಲೂ ಅಂತಿಮ ಇ-ಖಾತಾ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಮುಂದಿನ 15-30 ದಿನಗಳಲ್ಲಿ ಎಲ್ಲ ಖಾಸಗಿ ಸೇವಾ ಕೇಂದ್ರಗಳಲ್ಲೂ ಅಂತಿಮ ಇ-ಖಾತಾ ಪಡೆಯಲು ಅನುವು ಮಾಡಿಕೊಡಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT