ಬೆಂಗಳೂರು ಟೆಕ್ ಶೃಂಗಸಭೆ 
ರಾಜ್ಯ

Bengaluru Tech Summit 2024: GCC ನೀತಿ ಬಿಡುಗಡೆ; 'ನಿಪುಣ ಕರ್ನಾಟಕ ಯೋಜನೆ'ಗೆ ಟೆಕ್ ಕಂಪನಿಗಳ ಸಾಥ್

ಬೆಂಗಳೂರು ಟೆಕ್ ಸಮಿಟ್ 2024 ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆಯಲಿದೆ. ಇಲ್ಲಿ ಸರ್ಕಾರದ ಜೊತೆಗೆ ಒಪ್ಪಂದಗಳು ಮಾತ್ರವಲ್ಲದೆ, ವಿವಿಧ ವರ್ಕ್​ಶಾಪ್, ಪ್ರಾಡಕ್ಟ್ ಬಿಡುಗಡೆ, ಸೆಮಿನಾರ್ ಇತ್ಯಾದಿ ಹಲವು ಕಾರ್ಯಕ್ರಮಗಳು ನಡೆಯಲಿವೆ.

ಬೆಂಗಳೂರು: ಬೆಂಗಳೂರು ಟೆಕ್ ಶೃಂಗಸಭೆಯ 27 ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಿಸಿಸಿ ನೀತಿಯನ್ನು ಬಿಡುಗಡೆ ಮಾಡಿದರು.

ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಇಲಾಖೆ ಮತ್ತು ಭಾರತ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್‌ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಬೆಂಗಳೂರು ಟೆಕ್ ಶೃಂಗಸಭೆ 2024ರ 27ನೇ ಆವೃತ್ತಿಯನ್ನು ಆಯೋಜಿಸಲಾಗಿದೆ.

ಟೆಕ್ ಶೃಂಗಸಭೆಯಲ್ಲಿ ಉದ್ಯಮಕ್ಕಾಗಿ ಒಂದು ಲಕ್ಷ ಯುವಕರಿಗೆ ತರಬೇತಿ ನೀಡುವ ನಿಪುಣ ಕರ್ನಾಟಕ ಯೋಜನೆಗೂ ಚಾಲನೆ ನೀಡಲಾಯಿತು.

ನಿಪುಣ ಕರ್ನಾಟಕ ಯೋಜನೆಗಾಗಿ ರಾಜ್ಯ ಸರ್ಕಾರವು ಮೈಕ್ರೋಸಾಫ್ಟ್, ಇಂಟೆಲ್, ಆಕ್ಸೆಂಚರ್, ಐಬಿಎಂ ಮತ್ತು ಇತರ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದೇ ವೇಳೆ ಅನ್‌ಬಾಕ್ಸಿಂಗ್ ಬೆಂಗಳೂರು ವರದಿಯನ್ನೂ ಬಿಡುಗಡೆ ಮಾಡಲಾಯಿತು.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ವೇಳೆ ಆದ ಈ ತಿಳಿವಳಿಕೆ ಒಪ್ಪಂದಗಳ ಪ್ರಕಾರ ಮೈಕ್ರೋಸಾಫ್ಟ್ ಸಂಸ್ಥೆ ಡೀಪ್ ಟೆಕ್ ಬಗ್ಗೆ 10,000 ವ್ಯಕ್ತಿಗಳಿಗೆ ಒಂದು ವರ್ಷ ತರಬೇತಿ ಕೊಡಲಿದೆ. ಇನ್ನು, ಇಂಟೆಲ್ ಸಂಸ್ಥೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬಗ್ಗೆ 20,000 ವ್ಯಕ್ತಿಗಳಿಗೆ ತರಬೇತಿ ಕೊಡಲಿದೆ. ಐಬಿಎಂ, ಅಕ್ಸೆಂಚರ್ ಮತ್ತು ಬಿಎಫ್​ಎಸ್​ಐ ಕನ್ಸಾರ್ಟಿಯಂಗಳೂ ಬೇರೆ ಬೇರೆ ಟೆಕ್ ಕೌಶಲ್ಯಗಳ ತರಬೇತಿ ಕೊಡಲಿವೆ. ಐಬಿಎಂ ಸಂಸ್ಥೆ ಎಐ ಮತ್ತು ಕ್ಲೌಡ್ ಟೆಕ್ನಾಲಜಿಯಲ್ಲಿ ಒಂದು ವರ್ಷದಲ್ಲಿ 50,000 ಮಂದಿಗೆ ತರಬೇತಿ ಕೊಡಲಿದೆ. ಅಕ್ಸೆಂಚರ್ ಸಂಸ್ಥೆಯು ಸೈಬರ್ ಸೆಕ್ಯೂರಿಟಿ, ಕ್ವಾಂಟಂ ಕಂಪ್ಯೂಟಿಂಗ್ ಇತ್ಯಾದಿ ಎಮರ್ಜಿಂಗ್ ಟೆಕ್ನಾಲಜಿಗಳಲ್ಲಿ ತರಬೇತಿ ಕೊಡಲಿದೆ.

ಬೆಂಗಳೂರು ಟೆಕ್ ಸಮಿಟ್ 2024 ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆಯಲಿದೆ. ಇಲ್ಲಿ ಸರ್ಕಾರದ ಜೊತೆಗೆ ಒಪ್ಪಂದಗಳು ಮಾತ್ರವಲ್ಲದೆ, ವಿವಿಧ ವರ್ಕ್​ಶಾಪ್, ಪ್ರಾಡಕ್ಟ್ ಬಿಡುಗಡೆ, ಸೆಮಿನಾರ್ ಇತ್ಯಾದಿ ಹಲವು ಕಾರ್ಯಕ್ರಮಗಳು ನಡೆಯಲಿವೆ. ಅಮೆರಿಕ, ರಷ್ಯಾ, ಕೊರಿಯಾ, ಜಪಾನ್, ಇಸ್ರೇಲ್ ಮೊದಲಾದ ಹಲವು ದೇಶಗಳಿಂದ ತಂತ್ರಜ್ಞಾನ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ಅನಾವರಣಗೊಳಿಸಲಿವೆ.

ಕರ್ನಾಟಕವು ನಾವೀನ್ಯತೆಯ ದಾರಿದೀಪವಾಗಿ ನಿಂತಿದ್ದು, 875 ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ)ಗಳನ್ನು ಸ್ಥಾಪಿಸಲು ಮುಂದಾಗಿದ್ದು, ಜಾಗತಿಕ GCC ಹಬ್ ಆಗಿ ಭಾರತದ ಪ್ರಾಮುಖ್ಯತೆಯನ್ನು ಮತ್ತಷ್ಟು ಉತ್ತೇಜನ ನೀಡಲಿದೆ. ರಾಜ್ಯದಲ್ಲಿ GCC ಉದ್ಯೋಗವು ಸರಿಸುಮಾರು ಶೇ.35ರಷ್ಟು ಆರ್ಥಿಕ ಕೊಡುಗೆ ನೀಡುವ ನಿರೀಕ್ಷೆಗಳಿವೆ.

ಟೆಕ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿಗ ಸಚಿವ ಪ್ರಿಯಾಂಕ್ ಖರ್ಗೆಯವರು, ಭಾರತದ ಮೊದಲ ಗ್ಲೋಬಲ್ ಕೆಪೆಬಿಲಿಟಿ ಸೆಂಟರ್ ನೀತಿಯನ್ನು ಕರ್ನಾಟಕ ಜಾರಿಗೆ ತಂದಿದ್ದು, ಈ ಕೇಂದ್ರಗಳನ್ನು ಸಶಕ್ತಹೋಲಿಸಲು ಹಾಗೂ ಬೆಂಬಲಿಸಲು ಉದ್ದೇಶಿಸಿದೆ. ಇದರ ಮುಂದುವರೆದ ಭಾಗವಾಗಿ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿಯಲ್ಲಿ ಮೂರು ಜಾಗತಿಕ ನಾವೀನ್ಯತಾ ಜಿಲ್ಲೆಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದರು.

ರಾಜ್ಯದಲ್ಲಿ ಜಿಸಿಸಿಗಳನ್ನು ಸ್ಥಾಪಿಸಲು ಈ ಪಾರ್ಕ್ ಗಳು ಮೀಸಲಾಗಿರುತ್ತದೆ. ಬೆಂಗಳೂರು ಜಾಗತಿಕ ನಾವೀನ್ಯತಾ ಜಿಲ್ಲೆಯು ಜ್ಞಾನ, ಆರೋಗ್ಯ ಮತ್ತು ನಾವೀನ್ಯತೆಯ ನಗರದ ಭಾಗವಾಗಿರಲಿದೆ(ಕ್ವಿನ್ ಸಿಟಿ). ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 45 ನಿಮಿಷಗಳ ಅಂತರದಲ್ಲಿದ್ದು, ನಾವೀನ್ಯತೆ ಮತ್ತು ಸಂಶೋಧನೆಗೆ ಜಾಗತಿಕ ಕೇಂದ್ರವಾಗಿ ಪರಿಣಮಿಸಲಿದೆ ಎಂದು ತಿಳಿಸಿದರು.

ಭಾರತದ ಡಿಜಿಟಲ್ ಕ್ರಾಂತಿಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದ್ದು, GCCಗಳು ರಾಜ್ಯದ ಅಭಿವೃದ್ಧಿಯ ಹಾದಿಯಲ್ಲಿ ಪ್ರಮುಖ ಚಾಲಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿವೆ. GCCಗಳಿಗೆ ಸ್ಥಿರವಾದ ವ್ಯವಹಾರ ಮತ್ತು ಕಾರ್ಯಾಚರಣೆಯ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ನಾವು ಕಾರ್ಯತಂತ್ರದ ಮಧ್ಯಸ್ಥಿಕೆಗಳು ಮತ್ತು ಆಯೋಜಕರನ್ನು ಜಾರಿಗೆ ತರುತ್ತಿದ್ದೇವೆ. ಕರ್ನಾಟಕದಲ್ಲಿ ಕಾರ್ಯಾಚರಣೆ ಪ್ರಾರಂಭಿಸಲು ಬಯಸುವ GCCಗಳಿಗೆ ಉತ್ತಮ ಬೆಂಬಲ ನೀಡಲು ನಾವು ಭಾರತದಲ್ಲಿ ಮೊದಲ GCC ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ಬೆಂಗಳೂರು ಭಾರತದಲ್ಲಿನ ದೊಡ್ಡ GCC ಮಾರುಕಟ್ಟೆ ಪಾಲನ್ನು ಶೇಕಡಾ 39 ರಷ್ಟು ಹೊಂದಿದೆ, ಇದು GCC ಕಾರ್ಯಾಚರಣೆಗಳ ಮಾರುಕಟ್ಟೆ ನಾಯಕ ಮತ್ತು ಅತಿದೊಡ್ಡ ಕೇಂದ್ರವಾಗಿ ಅದರ ಸ್ಥಾನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಡಿಕೆ ಶಿವಕುಮಾರ್,ಬೆಂಗಳೂರಿನ ಮೂಲಸೌಕರ್ಯವನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ. ಇತರ ನಗರಗಳಲ್ಲೂ ಇದೇ ಪರಿಸ್ಥಿತಿ ಇದೆ ಎಂದರು.

ಇದೇ ವೇಳೆ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ಶಕ್ತಿ ಕರ್ನಾಟಕಕ್ಕಿದೆ ಎಂದ ಅವರು, ಗೇಮಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಮೌಲ್ಯ ಹೆಚ್ಚುತ್ತಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT