ಸಿಡಿಲು online desk
ರಾಜ್ಯ

ಸರ್ಕಾರಕ್ಕೆ ಹೊರೆಯಾದ ಸಿಡಿಲು ಬಡಿತ ಪ್ರಕರಣಗಳು; ರಕ್ಷಣೆ ಮಾನದಂಡಗಳ ಬದಲಾವಣೆಗೆ ಹೆಚ್ಚಿದ ಒತ್ತಡ

ಸಿಡಿಲು ಬಡಿದು ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತಾಪಮಾನದಲ್ಲಿ ಪ್ರತಿ ಡಿಗ್ರಿ ಸೆಲ್ಶಿಯಸ್ ಹೆಚ್ಚಳವಾದಂತೆಲ್ಲಾ ಮಿಂಚಿನ ಸಾಂದ್ರತೆ ಶೇ.12 ರಷ್ಟು ಹೆಚ್ಚಳವಾಗುತ್ತಿದ್ದು, ಕಟ್ಟಡ ನಿರ್ಮಾಣದ ನಿಯಮಗಳು ಹಾಗೂ ರಕ್ಷಣಾ ಮಾನದಂಡಗಳ ಪರಿಷ್ಕರಣೆ ಅನಿವಾರ್ಯವಾಗುತ್ತಿದೆ.

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವರದಿಯಾಗುತ್ತಿರುವ ಸಿಡಿಲು- ಮಿಂಚು ಪ್ರಕರಣಗಳು ಸರ್ಕಾರಕ್ಕೆ ಹೊರೆಯಾಗಿ ಪರಿಣಮಿಸಿದೆ.

ಸಿಡಿಲು ಬಡಿದು ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತಾಪಮಾನದಲ್ಲಿ ಪ್ರತಿ ಡಿಗ್ರಿ ಸೆಲ್ಶಿಯಸ್ ಹೆಚ್ಚಳವಾದಂತೆಲ್ಲಾ ಮಿಂಚಿನ ಸಾಂದ್ರತೆ ಶೇ.12 ರಷ್ಟು ಹೆಚ್ಚಳವಾಗುತ್ತಿದ್ದು, ಕಟ್ಟಡ ನಿರ್ಮಾಣದ ನಿಯಮಗಳು ಹಾಗೂ ರಕ್ಷಣಾ ಮಾನದಂಡಗಳ ಪರಿಷ್ಕರಣೆ ಅನಿವಾರ್ಯವಾಗುತ್ತಿದೆ.

ಜುಲೈನಲ್ಲಿ ಬಿಡುಗಡೆಯಾದ ವಾರ್ಷಿಕ ಮಿಂಚಿನ ವರದಿ 2023- 24 ರ ಪ್ರಕಾರ, 2014-2024 ರವರೆಗಿನ ಸಿಡಿಲಿನ ಒಟ್ಟು ಮರಣದ ಆಧಾರದ ಮೇಲೆ ಶ್ರೇಯಾಂಕದ ಪಟ್ಟಿಯಲ್ಲಿ ಕರ್ನಾಟಕ ಒಂಬತ್ತನೇ ಸ್ಥಾನದಲ್ಲಿದೆ. 2023 ರಲ್ಲಿ ಕರ್ನಾಟಕದಲ್ಲಿ 85 ಸಿಡಿಲು ಬಡಿತ ಪ್ರಕರಣಗಳು ಸಂಭವಿಸಿವೆ ಎಂದು ವರದಿ ಹೇಳಿದೆ. ಈ ಅವಧಿಯಲ್ಲಿ 920 ಸಾವುಗಳು ದಾಖಲಾಗಿವೆ.

ಮಿಂಚು ನಿರೋಧಕ ಭಾರತೀಯ ಅಭಿಯಾನ ಎಂಬ ಶೀರ್ಷಿಕೆಯ ವರದಿ ಮಿಂಚನ್ನು ರಾಷ್ಟ್ರೀಯ ವಿಪತ್ತು ಎಂದು ವರ್ಗೀಕರಿಸುವ ಮತ್ತು ಅದನ್ನು ಸೂಚಿಸುವ ಅಗತ್ಯವನ್ನು ಎತ್ತಿ ತೋರಿಸಿದೆ. ಇದನ್ನು ಹವಾಮಾನ ನಿರೋಧಕ ವೀಕ್ಷಣಾ ಪ್ರಮೋಷನ್ ಕೌನ್ಸಿಲ್, ಭಾರತೀಯ ಹವಾಮಾನ ಇಲಾಖೆ ಮತ್ತು ಭೂ ವಿಜ್ಞಾನ ಸಚಿವಾಲಯದ ಜಂಟಿ ಉಪಕ್ರಮವಾಗಿ ಸಿದ್ಧಪಡಿಸಿವೆ. ಮಿಂಚಿನ ಪತ್ತೆ ಮತ್ತು ಮುಂಚಿನ ಎಚ್ಚರಿಕೆ ವ್ಯವಸ್ಥೆಯನ್ನು ಬಲಪಡಿಸುವ ಅವಶ್ಯಕತೆಯಿದೆ, ಮಿಂಚಿನ ತಜ್ಞರ ತಂಡವನ್ನು ಅಭಿವೃದ್ಧಿಪಡಿಸುವುದು ಮತ್ತು ಎಲ್ಲಾ ರಾಜ್ಯಗಳು ಋತು-ಆಧಾರಿತ ನಿರೋಧಕ ತಂತ್ರಗಳನ್ನು ಕೇಂದ್ರೀಕರಿಸುವ ಮಿಂಚಿನ ಕ್ರಿಯಾ ಯೋಜನೆಯನ್ನು ರೂಪಿಸಲು ವರದಿ ಸಲಹೆ ನೀಡಿದೆ.

ಮಿಂಚು ನಿರೋಧಕ ಭಾರತ ಅಭಿಯಾನದ ಸದಸ್ಯ, ಐಎಂಡಿ ಮಾಜಿ ಮಹಾನಿರ್ದೇಶಕ ಡಾ ಕೆ ಜೆ ರಮೇಶ್, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿ, ಮಿಂಚು ಮತ್ತು ಗುಡುಗು ಸಹಿತ ಮಳೆಯಿಂದ ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಜನರು ಸಾವನ್ನಪ್ಪುತ್ತಿದ್ದಾರೆ. ಮತ್ತು ರೈತರು ಮತ್ತು ನಿರ್ಮಾಣ ಕಾರ್ಮಿಕರು ಅವುಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಹಿಂದೆ ಚಂಡಮಾರುತಗಳಿಂದ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ ಎನ್ನಲಾಗುತ್ತಿತ್ತು ಆದರೆ ಈಗ ಆ ಸ್ಥಾನವನ್ನು ಸಿಡಿಲು ಪಡೆದಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT