ಕಾಂಗ್ರೆಸ್ 
ರಾಜ್ಯ

ಅಭಿವೃದ್ಧಿಗೆ ಒಲವು, ಗ್ಯಾರಂಟಿಗೆ ಗೆಲುವು: ಉಪಚುನಾವಣೆ ಫಲಿತಾಂಶಕ್ಕೆ ಕಾಂಗ್ರೆಸ್‌ ಸಂತಸ

ಸಂಡೂರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು ಸಾಧಿಸಿದ್ದರೆ, ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್‌ ಹಾಗೂ ಶಿಗ್ಗಾಂವಿಯಲ್ಲೂ ಯಾಸಿರ್‌ ಖಾನ್‌ ಪಠಾಣ್‌ ಗೆಲುವಿನ ನಗೆ ಬೀರಿದ್ದಾರೆ.

ಬೆಂಗಳೂರು: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಕಾಂಗ್ರೆಸ್ ಸಂತಸ ವ್ಯಕ್ತಪಡಿಸಿದ್ದು, ಅಭಿವೃದ್ಧಿಗೆ ಒಲವು, ಗ್ಯಾರಂಟಿಗೆ ಗೆಲುವು ಎಂದು ಹೇಳಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಅಭಿವೃದ್ಧಿಗೆ ಒಲವು, ಗ್ಯಾರಂಟಿಗೆ ಗೆಲುವು ಎಂದು ಅಭಿಪ್ರಾಯ ಪಟ್ಟಿದೆ.

ಸಂಡೂರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು ಸಾಧಿಸಿದ್ದರೆ, ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್‌ ಹಾಗೂ ಶಿಗ್ಗಾಂವಿಯಲ್ಲೂ ಯಾಸಿರ್‌ ಖಾನ್‌ ಪಠಾಣ್‌ ಗೆಲುವಿನ ನಗೆ ಬೀರಿದ್ದಾರೆ.

ಫಲಿತಾಂಶಕ್ಕೂ ಮುನ್ನ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲ್ಲಲಿದೆ ಎಂದು ಸಿಎಂ, ಡಿಸಿಎಂ ಸೇರಿದಂತೆ ಅನೇಕ ‘ಕೈ’ ನಾಯಕರು ಭವಿಷ್ಯ ನುಡಿದಿದ್ದರು. ಅದರಂತೆ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮುಂಗಾರು ಹಿಂತೆಗೆತ ಆರಂಭ; ‘Arnab’ ಚಂಡಮಾರುತ ಭೀತಿ, ಈ ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ!

ಮುಂಬೈ ಗಣೇಶೋತ್ಸವ ವೇಳೆ ದುರಂತ: ವಿದ್ಯುತ್ ತಗುಲಿ 8 ವರ್ಷದ ಬಾಲಕಿ ಸೇರಿ ಇಬ್ಬರ ಸಾವು!

ಬೆಂಗಳೂರಿಗೆ ಗುಡ್‌ನ್ಯೂಸ್; ಮಾನ್ಸೂನ್ ಅಂತ್ಯವಾದರೂ ಭಾರಿ ವರ್ಷಧಾರೆ, ಮಂಗಳವಾರದಿಂದ ಮತ್ತಷ್ಟು ಚುರುಕು!

ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧ ಭೀತಿ: ಅಮೆರಿಕಕ್ಕೆ Iran 'Deadline'.. Trumpಗೆ ಕತಾರ್ ಮೂಲಕ 7 ಷರತ್ತುಗಳ ರವಾನೆ, ಟೆಹ್ರಾನ್‌ ಇಟ್ಟ ಬೇಡಿಕೆಗಳೇನು..?

ಹೊರಗುತ್ತಿಗೆ, ದಿನಗೂಲಿ ನೌಕರರಿಗೆ ಗುಡ್‌ನ್ಯೂಸ್; ಕನಿಷ್ಠ ವೇತನ ಹೆಚ್ಚಳ ತಡೆದಿದ್ದ ಸರ್ಕಾರದ ಸುತ್ತೋಲೆಗಳಿಗೆ ಹೈಕೋರ್ಟ್ ಬ್ರೇಕ್!