ಸಾಂದರ್ಭಿಕ ಚಿತ್ರ  
ರಾಜ್ಯ

ಕೋರ್ಸ್ ಮುಗಿಸಿ 4 ವರ್ಷವಾದ್ರೂ ಕೈಗೆ ಸಿಕ್ಕಿಲ್ಲ ಡಿಗ್ರಿ ಸರ್ಟಿಫಿಕೇಟ್: ಬೆಂಗಳೂರು ವಿ.ವಿ ಕಾಲೇಜಲ್ಲಿ ಓದಿದ ತಮಿಳುನಾಡು ವಿದ್ಯಾರ್ಥಿಗಳ ವ್ಯಥೆ!

ತಿರುಪ್ಪುರ್ ಎಂಬಲ್ಲಿ ವಿಗ್ನೇಶ್ ವಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ತನ್ನ 12ನೇ ತರಗತಿಯ ಪ್ರಮಾಣಪತ್ರವನ್ನು ತೋರಿಸಿ ಕೆಲಸ ಸೇರಿಕೊಂಡಿದ್ದಾರೆ. ರಕ್ಷಿತಾ ಪ್ರಿಯಾಗೆ ಉದ್ಯೋಗ ಸಿಕ್ಕಿಲ್ಲ. ಪದವಿ ಅಗತ್ಯವಿರುವ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ.

ಬೆಂಗಳೂರು: ಇದು ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಬೇಕೆಂದು ಕನಸು ಕಂಡ ಇಬ್ಬರು ವಿದ್ಯಾರ್ಥಿಗಳ ಕಥೆ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಕಾಲೇಜಿನಲ್ಲಿ ಕೋರ್ಸ್ ಮುಗಿಸಿ ನಾಲ್ಕು ವರ್ಷಗಳಾದರೂ ಪದವಿ ಪ್ರಮಾಣಪತ್ರವನ್ನು ಸಿಗದೆ ತಮಿಳು ನಾಡಿನ ಇಬ್ಬರು ವಿದ್ಯಾರ್ಥಿಗಳು ಅಕ್ಷರಶಃ ಆತಂಕಗೊಂಡಿದ್ದಾರೆ. ವಿಶ್ವವಿದ್ಯಾಲಯ ಮತ್ತು ಕಾಲೇಜಿಗೆ ಪದೇ ಪದೇ ಭೇಟಿ ನೀಡಿದರೂ ವ್ಯರ್ಥವಾಗಿದ್ದು, ಹೋದಾಗಲೆಲ್ಲಾ ಶೀಘ್ರದಲ್ಲೇ ಪ್ರಮಾಣಪತ್ರ ನೀಡಲಾಗುವುದು ಎಂದು ಇಬ್ಬರೂ ಸುಳ್ಳು ಭರವಸೆ ನೀಡುತ್ತಾ ಬಂದಿದ್ದಾರೆ.

ತಿರುಪ್ಪುರ್ ಎಂಬಲ್ಲಿ ವಿಗ್ನೇಶ್ ವಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ತನ್ನ 12ನೇ ತರಗತಿಯ ಪ್ರಮಾಣಪತ್ರವನ್ನು ತೋರಿಸಿ ಕೆಲಸ ಸೇರಿಕೊಂಡಿದ್ದಾರೆ. ರಕ್ಷಿತಾ ಪ್ರಿಯಾಗೆ ಉದ್ಯೋಗ ಸಿಕ್ಕಿಲ್ಲ. ಪದವಿ ಅಗತ್ಯವಿರುವ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಸಿಬ್ಬಂದಿಯೊಂದಿಗೆ ತನ್ನ ಸಂಕಷ್ಟ ಹೇಳಿಕೊಂಡ ವಿಗ್ನೇಶ್, ನಾವಿಬ್ಬರೂ 2017 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಹಲಸೂರಿನ RBANMS ಕಾಲೇಜಿನಲ್ಲಿ ಬಿ.ಎಸ್ಸಿ (ಭೌತಶಾಸ್ತ್ರ, ಗಣಿತ ಮತ್ತು ಎಲೆಕ್ಟ್ರಾನಿಕ್ಸ್) ವಿದ್ಯಾರ್ಥಿಗಳು. ಆ ವರ್ಷ ಕೇವಲ ಐವರು ವಿದ್ಯಾರ್ಥಿಗಳಿದ್ದುದರಿಂದ ಆ ಕಾಲೇಜಿನಲ್ಲಿ ಮುಚ್ಚಿ ಎರಡನೇ ವರ್ಷದಿಂದ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಇತರ ಕಾಲೇಜುಗಳಿಗೆ ಸ್ಥಳಾಂತರಿಸಲು ನೋಡಿದರು. ನಾವಿಬ್ಬರೂ ಶೇಷಾದ್ರಿಪುರಂನಲ್ಲಿರುವ ಎಚ್‌ಕೆಇಎಸ್ ಶ್ರೀ ವೀರೇಂದ್ರ ಪಾಟೀಲ್ ಪದವಿ ಕಾಲೇಜಿಗೆ ಶಿಫ್ಟ್ ಆದೆವು.

ನಾವಿಬ್ಬರೂ ತಮಿಳನ್ನು ನಮ್ಮ ದ್ವಿತೀಯ ಭಾಷೆಯಾಗಿ ಆಯ್ಕೆಮಾಡಿಕೊಂಡಾಗ ಸಮಸ್ಯೆ ಆರಂಭವಾಯಿತು. ಹೊಸ ಕಾಲೇಜು ಪ್ರವೇಶ ಸಮಯದಲ್ಲಿ ತಮಿಳು ಭಾಷೆಗೆ ಶಿಕ್ಷಕರಿಲ್ಲ. ಆದರೂ ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು ಎಂದರು.

2018 ರಲ್ಲಿ 3 ನೇ ಸೆಮಿಸ್ಟರ್‌ಗೆ, ನಮ್ಮ ಇಂಟರ್ನಲ್ ಮಾರ್ಕ್ಸ್ ನಲ್ಲಿ ತಮಿಳು ಭಾಷೆಗೆ ಹಾಗೆಯೇ ಬಿಡಲಾಯಿತು. ನಮಗೆ ಆ ಸೆಮಿಸ್ಟರ್‌ನ ಮಾರ್ಕ್‌ಶೀಟ್ ಸಿಗಲೇ ಇಲ್ಲ. ಆದರೆ, ನಾಲ್ಕನೇ ಸೆಮಿಸ್ಟರ್‌ಗೆ ತಮಿಳು ಇಂಟರ್‌ನಲ್ಸ್‌ನಲ್ಲಿ ಉತ್ತಮ ಅಂಕಗಳನ್ನು ಪಡೆದೆವು. ಕೋರ್ಸ್ ಪೂರ್ಣಗೊಳಿಸುವ ಮೊದಲು ಮೂರನೇ ಸೆಮಿಸ್ಟರ್ ಮಾರ್ಕ್‌ಶೀಟ್ ನ್ನು ಪದೇ ಪದೇ ಕೇಳಿದರು. ಫೆಬ್ರವರಿ 2020 ರ ವೇಳೆಗೆ ನಮ್ಮ ಕೋರ್ಸ್ ಪೂರ್ಣವಾಯಿತು. ಆದರೆ ಅಂಕಪಟ್ಟಿ ಕೊಡಲೇ ಇಲ್ಲ ಎಂದು ತಮ್ಮ ಸಮಸ್ಯೆಯನ್ನು ಹೇಳುತ್ತಾ ಹೋದರು.

ಕಾಲೇಜು ಸಿಬ್ಬಂದಿಯಲ್ಲಿ ಜವಾಬ್ದಾರಿ ಕೊರತೆ

"ನಾವು ಪದೇ ಪದೇ ಕಾಲೇಜು ಆಡಳಿತ ಸಿಬ್ಬಂದಿಯನ್ನು ಭೇಟಿ ಮಾಡಿ, ಫೋನ್, ಮೇಲ್ ಮತ್ತು ಸಂದೇಶಗಳ ಮೂಲಕ ಕೇಳುತ್ತಲೇ ಇದ್ದೆವು. ಆದರೆ ಇಂದಿನವರೆಗೆ ನಮಗೆ ಸರ್ಟಿಫಿಕೇಟ್ ಸಿಕ್ಕಿಲ್ಲ ಎನ್ನುತ್ತಾರೆ.

ಇದೇ ರೀತಿ ಸಮಸ್ಯೆ ಹೇಳಿಕೊಂಡ ರಕ್ಷಿತಾ ಪ್ರಿಯಾ, ನಾವು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಾಗ ಕಾಲೇಜಿನ ಮೂಲಕವೇ ಸಂಪರ್ಕ ಮಾಡಿ ಕೇಳಿ ಎಂದರು. ಇಂಟರ್‌ನಲ್ಸ್‌ ಕಾಲಂ ನ್ನು ಕಾಲೇಜು ಖಾಲಿ ಬಿಟ್ಟಿದ್ದು, ಅಲ್ಲಿನ ಸಿಬ್ಬಂದಿ ಭರ್ತಿ ಮಾಡಬೇಕಿದೆ ಎಂದರು. ಕಳೆದ ಜೂನ್ ತಿಂಗಳಲ್ಲಿ ಹೋಗಿ ಕೇಳಿದಾಗ ನಮ್ಮ ಇಂಟರ್ನಲ್ ಅಂಕಪಟ್ಟಿಯನ್ನು ಪಡೆಯಲು ನಾವು ಕಾಲೇಜಿಗೆ 25,000 ಪಾವತಿಸಬೇಕು ಎಂದು ಹೇಳಿದರು.

ಇದೀಗ ವೆಲ್ಲೂರಿಗೆ ಮರಳಿರುವ ರಕ್ಷಿತಾ ಪ್ರಿಯಾಗೆ ಮದುವೆ ನಿಗದಿಯಾಗಿದೆ. ನನಗೆ ಡಿಗ್ರಿಯಾದರೂ ಕೂಡ 12ನೇ ತರಗತಿ ಮಾರ್ಕ್ಸ್ ಶೀಟ್ ನೊಂದಿಗೆ ಕಡಿಮೆ ವೇತನಕ್ಕೆ ಯಾವುದೋ ಕೆಲಸ ಮಾಡಬೇಕಾಗಿದೆ. ನಾನು ಸರ್ಕಾರಿ ಕೆಲಸವನ್ನು ಆಯ್ಕೆ ಮಾಡಲು ಬಯಸಿದ್ದೆ ಆದರೆ ನನಗೆ ಸಿಗದಾಗಿದೆ ಎಂದರು.

ಎಚ್‌ಕೆಇಎಸ್‌ ಕಾಲೇಜು ಪ್ರವೇಶಾತಿ ಪ್ರಭಾರಿ ವಿಎಲ್‌ ಪ್ರಸಾದ್‌ ವಿದ್ಯಾರ್ಥಿಗಳ ಸಮಸ್ಯೆಯನ್ನು ನಾನು ಪ್ರಾಂಶುಪಾಲರ ಗಮನಕ್ಕೆ ತರುತ್ತೇನೆ. ಮುಂದಿನ ವಾರ ವಿವಿಗೆ ಹೋಗುವ ಯೋಜನೆ ಇದೆ. ವಿಶ್ವವಿದ್ಯಾಲಯವು ಸಾಮಾನ್ಯವಾಗಿ ಸಮಸ್ಯೆಗಳನ್ನು ಬಗೆಹರಿಸಲು ಮೇಳಗಳನ್ನು ನಡೆಸುತ್ತದೆ. ಆ ಸಮಯದಲ್ಲಿ ನಾನು ಸಮಸ್ಯೆಯನ್ನು ಎತ್ತಬಹುದು. ಇಂತಹ ಸಮಸ್ಯೆಗೆ ವಿದ್ಯಾರ್ಥಿಗಳೂ ಹೊಣೆಯಾಗುತ್ತಾರೆ. ಕಾಲೇಜು ಬಿಡುವ ಮೊದಲು, ಅವರು ಹೇಗಾದರೂ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

SCROLL FOR NEXT