ಶಿವಾಜಿನಗರ ಮೆಟ್ರೋ ನಿಲ್ದಾಣ ಕಾಮಗಾರಿ 
ರಾಜ್ಯ

ಬೆಂಗಳೂರು: ಶಿವಾಜಿನಗರ ಮೆಟ್ರೋ ರೈಲು ನಿಲ್ದಾಣದ ಮೇಲೆ ಕ್ರೀಡಾ ಸಂಕೀರ್ಣ ನಿರ್ಮಿಸಲು ಸರ್ಕಾರ ಚಿಂತನೆ

ಕ್ರಿಕೆಟ್, ಫುಟ್‌ಬಾಲ್, ಬಾಸ್ಕೆಟ್‌ಬಾಲ್ ಮತ್ತು ಹುಡುಗರು ಮತ್ತು ಹುಡುಗಿಯರಿಗೆ ಸ್ವಿಮ್ಮಿಂಗ್ ಗಾಗಿ ನಿಲ್ದಾಣದ ಮೇಲ್ಭಾಗದಲ್ಲಿ ಕ್ರೀಡಾ ಸಮುಚ್ಚಯ ನಿರ್ಮಿಸಲು ಯೋಜಿಸುತ್ತಿದ್ದೆವೆ.

ಬೆಂಗಳೂರು: ಶಿವಾಜಿನಗರ ಭೂಗತ ಮೆಟ್ರೋ ನಿಲ್ದಾಣದ ಮೇಲಿರುವ ಎರಡು ಎಕರೆ ಜಾಗದಲ್ಲಿ ಆಡಿಟೋರಿಯಂ ಮತ್ತು ಸಾಂಸ್ಕೃತಿಕ ಕೇಂದ್ರದೊಂದಿಗೆ ಒಂದು ರೀತಿಯ ಕ್ರೀಡಾ ಮೈದಾನ ನಿರ್ಮಿಸಲು ಸರ್ಕಾರ ಚಿಂತಿಸುತ್ತಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ತನ್ನ ನಿಲ್ದಾಣದ ಕೆಲಸವನ್ನು ಬಹುತೇಕ ಪೂರ್ಣಗೊಳಿಸಿದೆ ಮತ್ತು ಸರ್ಕಾರದಿಂದ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಹಿಂತಿರುಗಿಸಿದೆ.

ಇತ್ತೀಚೆಗೆ ಬಿಎಂಆರ್‌ಸಿಎಲ್‌ನ ಉನ್ನತ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರು, “ಪಾಶ್ಚಿಮಾತ್ಯ ದೇಶಗಳಲ್ಲಿ, ಮೆಟ್ರೋ ನಿಲ್ದಾಣಗಳ ಬಳಿ ಸಾರ್ವಜನಿಕರಿಗೆ ಮನರಂಜನಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಬೆಂಗಳೂರಿನಲ್ಲೂ ಇಂತಹದೊಂದು ಸೆಟಪ್ ರಚಿಸಲು ನಾವು ಬಯಸುತ್ತೇವೆ. ನಾವು ಕ್ರಿಕೆಟ್, ಫುಟ್‌ಬಾಲ್, ಬಾಸ್ಕೆಟ್‌ಬಾಲ್ ಮತ್ತು ಹುಡುಗರು ಮತ್ತು ಹುಡುಗಿಯರಿಗೆ ಸ್ವಿಮ್ಮಿಂಗ್ ಗಾಗಿ ನಿಲ್ದಾಣದ ಮೇಲ್ಭಾಗದಲ್ಲಿ ಕ್ರೀಡಾ ಸಮುಚ್ಚಯ ನಿರ್ಮಿಸಲು ಯೋಜಿಸುತ್ತಿದ್ದೆವೆ ಎಂದು ಹೇಳಿದ್ದಾರೆ.

ಹೆಚ್ಚುವರಿಯಾಗಿ, ಕಾರ್ಯಕ್ರಮಗಳನ್ನು ಆಯೋಜಿಸಲು ಆಡಿಟೋರಿಯಂ ನಿರ್ಮಿಸಲು ಚಿಂತಿಸಿದ್ದೇವೆ. ಸಂಗೀತ ಕಚೇರಿಗಳು ಅಥವಾ ಇತರ ಕಾರ್ಯಕ್ರಮಗಳನ್ನು ಆಯೋಜಿಸಬಹುದಾದ ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಿಸುವ ಯೋಜನೆಯಿದೆ. ಇದು ಈ ಪ್ರದೇಶದ ಸಾಂಸ್ಕೃತಿಕ ಕೇಂದ್ರವಾಗಿ ವಿಕಸನಗೊಳ್ಳಬೇಕಾಗಿದೆ. ಈ ಕೇಂದ್ರವು ನಗರದ ಇತರ ಪ್ರದೇಶಗಳಿಗೆ ಮಾದರಿಯಾಗಿ ರೂಪುಗೊಳ್ಳಬಹುದು ಎಂದು ಅವರು ಹೇಳಿದರು. ಬಿಎಂಆರ್‌ಸಿಎಲ್, ಬಿಬಿಎಂಪಿ ಮತ್ತು ಸರ್ಕಾರವು ಜಂಟಿಯಾಗಿ ಈ ಉದ್ಯಮಕ್ಕೆ ಧನಸಹಾಯ ನೀಡಲಿದೆ ಎಂದು ಅವರು ಹೇಳಿದರು. ನಿರ್ಮಾಣಕ್ಕಾಗಿ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿರುವುದರಿಂದ ವೆಚ್ಚದ ಬಗ್ಗೆ ಸದ್ಯಕ್ಕೆ ಸ್ಪಷ್ಟತೆಯಿಲ್ಲ ಎಂದು ಅವರು ಹೇಳಿದರು. ಈ ಸಂಕೀರ್ಣ ನಿರ್ಮಿಸಲು ಸುಮಾರು 2.5 ರಿಂದ 3 ವರ್ಷಗಳ ಸಮಯ ತೆಗೆದುಕೊಳ್ಳಬಹುದು ಎಂದು ರಿಜ್ವಾನ್ ಅರ್ಷದ್ ಹೇಳಿದರು.

ಕಟ್ಟಡದ ವಿನ್ಯಾಸವನ್ನು ಸಿದ್ಧಪಡಿಸುವ ಕಾರ್ಯವನ್ನು ಬಿಎಂಆರ್‌ಸಿಎಲ್ ಮತ್ತು ಸರ್ಕಾರ ಎರಡರಲ್ಲೂ ವಾಸ್ತುಶಿಲ್ಪಿಗಳಿಗೆ ಒಂದು ದಿನದ ಹಿಂದೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಿಲ್ದಾಣವನ್ನು ನಿರ್ಮಿಸಲು ಬಿಬಿಎಂಪಿ ಶಾಲೆಗೆ ಸೇರಿದ ಆಟದ ಮೈದಾನವನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ ಎಂದು ಬಿಎಂಆರ್‌ಸಿಎಲ್ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ನಾವು ಸುಮಾರು 2.5 ಎಕರೆಯನ್ನು ಸ್ವಾಧೀನಪಡಿಸಿಕೊಂಡಿದ್ದೇವೆ. ನಿಲ್ದಾಣದ ರಚನೆ ಮತ್ತು ಎಂಟ್ರಿ ಮತ್ತು ಎಕ್ಸಿಟ್ ನಿರ್ಮಾಣ ಪೂರ್ಣಗೊಂಡಿವೆ.

ಸಿಸ್ಟಮ್-ಸಂಬಂಧಿತ ಕೆಲಸವನ್ನು ಮಾಡಿದ ನಂತರವೇ ಫಿನಿಶಿಂಗ್ ಕೆಲಸಗಳನ್ನು ಮಾಡಬಹುದು. ಸುಮಾರು 2 ಎಕರೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಗುವುದು. ಕೆಲವು ವಿದ್ಯುತ್ ಮತ್ತು ಯಾಂತ್ರಿಕ ಉಪಕರಣಗಳನ್ನು ನೆಲಕ್ಕೆ ಇಳಿಸಬೇಕು. ಆದ್ದರಿಂದ, ಅದಕ್ಕೆ ಅನುಕೂಲವಾಗುವಂತೆ ಕೆಲವು ಬಯಲು ಜಾಗಗಳನ್ನು ಬಿಡಲಾಗಿದೆ. ಅದನ್ನು ಬಿಟ್ಟರೆ ಶಿವಾಜಿನಗರ ಮೆಟ್ರೊ ನಿಲ್ದಾಣದ ಮಹತ್ವದ ಕಾಮಗಾರಿ ಪೂರ್ಣಗೊಂಡಿರುವುದರಿಂದ ಉಳಿದ ಭೂಮಿಯನ್ನು ಹಸ್ತಾಂತರಿಸಬಹುದು ಎಂದು ವಿವರಿಸಿದ್ದಾರೆ.

ಈ ಮೆಟ್ರೋ ನಿಲ್ದಾಣದ ಕುತೂಹಲಕಾರಿ ಅಂಶವೆಂದರೆ ಮೆಟ್ರೋ ನಿಲ್ದಾಣವು ಮೆಜೆಸ್ಟಿಕ್ ಮತ್ತು ಕಲಾಸಿಪಾಳ್ಯ ಬಸ್ ನಿಲ್ದಾಣಗಳ ನಂತರ ನಗರದ ಮೂರನೇ ಅತಿ ದೊಡ್ಡದಾದ ಶಿವಾಜಿನಗರದ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್‌ಗೆ ನೇರವಾಗಿ ಕರೆದೊಯ್ಯುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

SCROLL FOR NEXT