ಸಂಗ್ರಹ ಚಿತ್ರ  online desk
ರಾಜ್ಯ

3 ಕೋಟಿ ರೂ ಮೌಲ್ಯದ ಗಾಂಜಾ ವಶಕ್ಕೆ; ಮಳೆ: 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್; ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ಭಾಗವಹಿಸದೇ ಇರಲು ಬಾನು ಮುಷ್ತಾಕ್ ನಿರ್ಧಾರ; ಇವು ಇಂದಿನ ಪ್ರಮುಖ ಸುದ್ದಿಗಳು 06-10-2024

ಅಂತರಾಷ್ಟ್ರೀಯ ಡ್ರಗ್ಸ್ ಜಾಲ ಪತ್ತೆ ಮಾಡಿದ ಕೊಡಗು ಪೊಲೀಸ್; 3 ಕೋಟಿ ರೂ ಮೌಲ್ಯದ ಗಾಂಜಾ ವಶಕ್ಕೆ

ಅಂತರಾಷ್ಟ್ರೀಯ ಡ್ರಗ್ಸ್ ಮಾಫಿಯಾ ಜಾಲವನ್ನು ಕೊಡಗು ಪೊಲೀಸರು ಭೇದಿಸಿದ್ದು, ಕಾರ್ಯಾಚರಣೆಯಲ್ಲಿ 3 ಕೋಟಿ ಮೌಲ್ಯದ ಗಾಂಜಾ ವಶ ಪಡಿಸಿಕೊಂಡಿದ್ದಾರೆ.ಈ ಜಾಲದಲ್ಲಿದ್ದ ಸದಸ್ಯರು ಥೈಲ್ಯಾಂಡ್‌ನಲ್ಲಿ ತಯಾರಾರುವ ಹೈಡ್ರೋಪೋನಿಕ್ ಗಾಂಜಾವನ್ನು ದುಬೈಗೆ ಪೂರೈಕೆ ಮಾಡುವುದಕ್ಕೆ ಭಾರತವನ್ನು ಆಧಾರವಾಗಿಟ್ಟುಕೊಂಡಿದ್ದರು.

ಥೈಲ್ಯಾಂಡ್‌ನಿಂದ ವಿಮಾನದ ಮೂಲಕ ಬೆಂಗಳೂರಿಗೆ ತಂದು ನಂತರ ಕೊಡಗು,‌ ಕೇರಳದಲ್ಲಿ ಇಟ್ಟು ಅಂತಿಮವಾಗಿ ದುಬೈಗೆ ಸಾಗಣೆ ಮಾಡುತ್ತಿದ್ದರು. ಥೈಲ್ಯಾಂಡ್ ದೇಶದ ಬ್ಯಾಂಕಾಕ್ ನಗರದಲ್ಲಿ ಕೆಫೆ ಇಟ್ಟುಕೊಂಡಿದ್ದ. ಕೇರಳ ಮೂಲದ ಮಹಮ್ಮದ್ ಅನೂಫ್ ಈ ಡ್ರಗ್ಸ್ ಜಾಲದ ಕಿಂಗ್ ಪಿನ್ ಆಗಿದ್ದು ಕೇರಳದ ಕಾಸರಗೋಡಿನ ಮೆಹರೂಫ್, ವಿರಾಜಪೇಟೆಯ ರವೂಫ್, ನಾಸೀರುದ್ದೀನ್, ವಾಜೀದ್, ನಾಪೋಕ್ಲುವಿನ ಯಾಹಿಯಾ, ಅಕನಾಸ್, ಅಜ್ಜಲ್, ಕೇರಳದ ರಿಯಾಜ್ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯದಲ್ಲಿ ಧಾರಾಕಾರ ಮಳೆ; ಓರ್ವ ವೃದ್ಧ ಸಾವು, 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ರಾಜ್ಯದಲ್ಲಿ ನೆನ್ನೆ ಸುರಿದ ಭಾರಿ ಮಳೆಗೆ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ದಾವಣಗೆರೆಯಲ್ಲಿ ಮನೆ ಕುಸಿದು ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ರಸ್ತೆಗಳ ಮೇಲೆ ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಮುಂದಿನ 4 ದಿನ ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು, 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರದಲ್ಲೂ ಭಾರಿ ಮಳೆ ಸುರಿದಿದ್ದು, 33 ಮಿ.ಮೀ ಮಳೆಯಾಗಿದೆ. ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ್ದು ನೀರು ಹೊರ ಹಾಕುವ ಕೆಲಸದಿಂದ ಜನ ಹೈರಾಣಾಗಿದ್ದಾರೆ. ಬಿನ್ನಿಪೇಟೆಯಲ್ಲಿ ಅಪಾರ್ಟ್ ಮೆಂಟ್ ನ ಕಾಂಪೌಂಡ್ ಗೋಡೆ ಕುಸಿದು ವಿದ್ಯುತ್ ಕಂಬ ವಾಲಿದೆ. ಇದರಿಂದ ಅಪಾರ್ಟ್ ಮೆಂಟ್ ಒಳಗೆ ಸಿಲುಕಿದ್ದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

#MysuruDasara: ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ಭಾಗವಹಿಸದೇ ಇರಲು ಬಾನು ಮುಷ್ತಾಕ್ ನಿರ್ಧಾರ

ಈ ಬಾರಿಯ ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ಭಾಗವಹಿಸದಿರುವ ಲೇಖಕಿ ಬಾನು ಮುಷ್ತಾಕ್ ನಿರ್ಧರಿಸಿದ್ದಾರೆ. ತಮ್ಮ ನಿರ್ಧಾರವನ್ನು ಬಾನು ಮುಷ್ತಾಕ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ಹಿಂದೆ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದೆ. ಆದರೆ, ಇತ್ತೀಚಿನ ಕೆಲವು ಸಂವಾದಗಳನ್ನು ಗಮನಿಸಿದಾಗ, ಬೇರೆಯವರಿಗೆ ಅವಕಾಶ ಕೊಡುವುದು ಅಗತ್ಯವೆಂದು ಅನಿಸಿದೆ. ಹೀಗಾಗಿ 2024ರ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ಕವಿಗೋಷ್ಠಿಯಲ್ಲಿ ಈ ಹಿಂದೆ ಪಾಲ್ಗೊಂಡಿದ್ದವರಿಗೆ ಮತ್ತೆ ಅವಕಾಶ ಕೊಟ್ಟಿರುವುದು, ದಕ್ಷಿಣ ಕರ್ನಾಟಕದವರಿಗೆ ಹೆಚ್ಚಿನ ಆದ್ಯತೆ ನೀಡಿರುವ ಉಪ ಸಮಿತಿ ನಡೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪವಾದ ಹಿನ್ನೆಲೆಯಲ್ಲಿ ಅವರು ಈ ಬಾರಿಯ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮಂಗಳೂರು: ದ್ವೇಷ ಭಾಷಣ ಮಾಡಿದ ಶಿಕ್ಷಕನ ವಿರುದ್ಧ FIR ದಾಖಲು

ಅಲ್ಪಸಂಖ್ಯಾತ ಸಮುದಾಯದವರು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸದಂತೆ ಹಿಂದೂಗಳಿಗೆ ಸಲಹೆ ನೀಡಿದ ಮಂಗಳೂರಿನ ಖಾಸಗಿ ಕಾಲೇಜಿನ ಉಪನ್ಯಾಸಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.ಮಂಗಳೂರು ನಗರದ ಹೊರವಲಯದ ಕಿನ್ಯದ ಕೇಶವ ಶಿಶು ಮಂದಿರದಲ್ಲಿ ಇತ್ತೀಚಿಗೆ ನಡೆದ ನವ ದಂಪತಿಗಳ ಸಮಾವೇಶದಲ್ಲಿ ಮಾತನಾಡಿದ್ದ ಡಾ. ಅರುಣ್ ಉಳ್ಳಾಲ್ ವಿರುದ್ಧ ದ್ವೇಷ ಭಾಷಣ ಮಾಡಿರುವ ಆರೋಪ ಕೇಳಿಬಂದಿದೆ. ಹಿಂದುಗಳು, ಹಿಂದು ಮಾಲಿಕತ್ವದ ಸಭಾಂಗಣದಲ್ಲೆ ಮದುವೆ ಆಗಬೇಕು, ಹಿಂದು ಮಾಲಿಕತ್ವದ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಬೇಕು, ಅನ್ಯ ಧರ್ಮೀಯರ ಸಭಾಂಗಣದಲ್ಲಿ ಮದುವೆ ಆಗಬಾರದು, ಅವರ ಶಾಲೆಗಳಿಗೆ ಕಳುಹಿಸಬಾರದು, ಅವರಿಗೆ ನಿಮ್ಮಿಂದ ಸಲ್ಲುವ ಆದಾಯದ ಒಂದು ಪಾಲು ವಿದೇಶಕ್ಕೆ ಸಲ್ಲುತ್ತದೆ ಎಂದು ಭಾಷಣದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

MLA Mohiuddin Bava ಸಹೋದರ ನಾಪತ್ತೆ: ಸೇತುವೆ ಬಳಿ ಕಾರು ಪತ್ತೆ!

ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಸೋದರ ಮುಮ್ತಾಜ್ ಅಲಿ ನಾಪತ್ತೆಯಾಗಿದ್ದು, ಅವರ ಕಾರು ಕೂಳೂರು ಸೇತುವೆ ಬಳಿ ಪತ್ತೆಯಾಗಿದೆ. ಮುಮ್ತಾಜ್ ನಾಪತ್ತೆಯಾಗಿದ್ದು, ಅವರು ನದಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ನದಿಯಲ್ಲಿ ಶೋಧಕಾರ್ಯ ನಡೆಯುತ್ತಿದೆ. ಕೂಳೂರು ನದಿಯ ಸೇತುವೆ ಬಳಿ ಕಪ್ಪು ಬಣ್ಣದ ಬಿಎಂಡಬ್ಲ್ಯು ಕಾರು ಪತ್ತೆಯಾಗಿದೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅದು ಮುಮ್ತಾಜ್ ಅಲಿ ಅವರದ್ದು ಎಂಬುದು ಪತ್ತೆಯಾಗಿದೆ. ಮುಮ್ತಾಜ್ ಗಾಗಿ ಅಗ್ನಿಶಾಮಕ ಮತ್ತು ತುರ್ತು ಸೇವಾ ತಂಡದವರು ಹಾಗೂ ನಮ್ಮ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಪಣಂಬೂರು ಠಾಣೆ ಪೊಲೀಸರು ತಿಳಿಸಿದ್ದಾರೆ.ಕಾರು ಸೇತುವೆಯ ಮಧ್ಯಭಾಗದಲ್ಲಿ ನಿಂತಿದೆ. ವಾಹನ ಸಂಚಾರಕ್ಕೆ ಅಡಚಣೆಯಾಗಬಾರದೆಂದು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು ಅಪಘಾತಕ್ಕೆ ಈಡಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT