ಬೆಂಗಳೂರು ವಿಮಾನ ನಿಲ್ದಾಣ 
ರಾಜ್ಯ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದಾಖಲೆಯ 782 ಏರ್ ಟ್ರಾಫಿಕ್ ಮೂಮೆಂಟ್ ದಾಖಲು!

ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ಮತ್ತು ವಿಮಾನಯಾನ ಸಂಸ್ಥೆಗಳ ಹೊಸ ಮಾರ್ಗಗಳ ಆರಂಭದೊಂದಿಗೆ ವಿಮಾನ ನಿಲ್ದಾಣವು ಈ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ(ಕೆಐಎ) ಏರ್ ಟ್ರಾಫಿಕ್ ಕಂಟ್ರೋಲ್(ಎಟಿಸಿ) ಗೋಪುರದಲ್ಲಿ ಗುರುವಾರ ದಾಖಲೆಯ 782 ಏರ್ ಟ್ರಾಫಿಕ್ ಮೂಮೆಂಟ್ ದಾಖಲಾಗಿದ್ದು, ಇದು 16 ವರ್ಷಗಳ ಹಿಂದೆ ಉದ್ಘಾಟನೆಗೊಂಡ ನಂತರ ದಾಖಲಾದ ಅತಿ ಹೆಚ್ಚು ಆಗಮನ ಮತ್ತು ನಿರ್ಗಮನಗಳಿಗೆ ಸಾಕ್ಷಿಯಾಗಿದೆ

ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ಮತ್ತು ವಿಮಾನಯಾನ ಸಂಸ್ಥೆಗಳಿಂದ ಹೊಸ ಮಾರ್ಗಗಳ ಆರಂಭದೊಂದಿಗೆ ವಿಮಾನ ನಿಲ್ದಾಣವು ಈ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಕೋವಿಡ್ ಗೂ ಮುನ್ನ ದಾಖಲಾಗಿದ್ದ ಏರ್ ಟ್ರಾಫಿಕ್ ಮೂಮೆಂಟ್ ದಾಖಲೆಯನ್ನು ಈಗ ಹಿಂದಿಕ್ಕಿಲಾಗಿದೆ.

KIA, ಭಾರತದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದ್ದು, ಮೇ 24, 2008 ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

"ನಮ್ಮ ಅತಿ ಹೆಚ್ಚು ಏಕದಿನ ಎಟಿಎಂ 782 ಅನ್ನು ಅಕ್ಟೋಬರ್ 17, 2024 ರಂದು ದಾಖಲಿಸಲಾಗಿದೆ. ವಿಮಾನಯಾನ ಸಂಸ್ಥೆಗಳ ಸಾಮರ್ಥ್ಯದ ಸೇರ್ಪಡೆಯು ಗುರುವಾರದಂದು ಅತಿ ಹೆಚ್ಚು ಎಟಿಎಂಗಳನ್ನು ದಾಖಲಿಸಲು ಕಾರಣವಾಗಿದೆ. ಹಬ್ಬದ ಋತುವಿನಲ್ಲಿ, ದೀಪಾವಳಿ ವಾರಾಂತ್ಯದಲ್ಲಿ ಈ ದಾಖಲೆಯನ್ನು ಶೀಘ್ರದಲ್ಲೇ ಮುರಿಯಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ವಿಮಾನ ನಿಲ್ದಾಣದ ನಿರ್ವಾಹಕರಾದ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್(BIAL)ನ ಮೂಲಗಳು TNIE ಗೆ ತಿಳಿಸಿವೆ.

ಅಕ್ಟೋಬರ್ 11 ರಂದು 770 ಏರ್ ಟ್ರಾಫಿಕ್ ಮೂಮೆಂಟ್ ದಾಖಲಾಗಿತ್ತು. "ಇದು 750 ಏರ್ ಟ್ರಾಫಿಕ್ ಮೂಮೆಂಟ್ ಗಳ ಪೂರ್ವ ಕೋವಿಡ್ ದಾಖಲೆಯನ್ನು ದಾಟಿದೆ. ಜನವರಿ 11, 2019 ರಂದು 750 ಏರ್ ಟ್ರಾಫಿಕ್ ಮೂಮೆಂಟ್ ದಾಖಲಾಗಿತ್ತು" ಎಂದು ಮೂಲಗಳು ಹೇಳಿವೆ.

ಕೇವಲ ಒಂದು ಟರ್ಮಿನಲ್ ಮತ್ತು ಒಂದು ರನ್‌ವೇಯೊಂದಿಗೆ ಆರಂಭವಾದ KIA ತನ್ನ ಮೊದಲ ವರ್ಷದ ಕಾರ್ಯಾಚರಣೆಯಲ್ಲಿ 9 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸಿದೆ. ಈಗ ಎರಡು ರನ್‌ವೇಗಳು ಮತ್ತು ಎರಡು ಟರ್ಮಿನಲ್‌ಗಳೊಂದಿಗೆ, ಈ ಆರ್ಥಿಕ ವರ್ಷದಲ್ಲಿ ವಿಮಾನ ನಿಲ್ದಾಣವು 40 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುವ ಗುರಿ ಹೊಂದಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT