ಬೆಂಗಳೂರಿನ ಯಲಹಂಕದಲ್ಲಿರುವ ಕೇಂದ್ರೀಯ ವಿಹಾರ ಅಪಾರ್ಟ್ ಮೆಂಟಿನ ದೃಶ್ಯ  
ರಾಜ್ಯ

ಭಾರೀ ಮಳೆ ಎದುರಿಸುವಂತೆ ಬೆಂಗಳೂರು ನಗರವನ್ನು ಸರ್ಕಾರ ಸನ್ನದ್ದುಗೊಳಿಸಿಲ್ಲ: ಕಾಂಗ್ರೆಸ್ ಮೇಲೆ ಬಿಜೆಪಿ ನಾಯಕರ ಆರೋಪ

ಮಾಜಿ ಉಪ ಮುಖ್ಯಮಂತ್ರಿ ಮತ್ತು ಬಿಜೆಪಿ ಶಾಸಕ ಡಾ ಸಿಎನ್ ಅಶ್ವತ್ ನಾರಾಯಣ್, ರಾಜ್ಯ ಸರ್ಕಾರ ಮಳೆಯ ಬಗ್ಗೆ ನಿರ್ಲಕ್ಷ್ಯ ತೋರಿಸಿದ್ದು, ಸರಿಯಾಗಿ ಸನ್ನದವಾಗಿಲ್ಲ ಎಂದು ಆರೋಪಿಸಿದರು.

ಬೆಂಗಳೂರು: ಮೇಘಸ್ಫೋಟ ಮಳೆಯಿಂದ ಐಟಿ ನಗರ ಬೆಂಗಳೂರು ಪ್ರವಾಹ ಪರಿಸ್ಥಿತಿ ನಡುವೆ ಹೋರಾಡುತ್ತಿದ್ದರೆ, ಸರ್ಕಾರ ಮಳೆಯಿಂದ ಉಂಟಾಗಬಹುದಾದ ಅನಾಹುತ ಪರಿಸ್ಥಿತಿಗಳನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಪ್ರತಿಪಕ್ಷ ಬಿಜೆಪಿ ಸರ್ಕಾರವನ್ನು ಟೀಕಿಸಿದೆ.

ಮಾಜಿ ಉಪ ಮುಖ್ಯಮಂತ್ರಿ ಮತ್ತು ಬಿಜೆಪಿ ಶಾಸಕ ಡಾ ಸಿಎನ್ ಅಶ್ವತ್ ನಾರಾಯಣ್, ರಾಜ್ಯ ಸರ್ಕಾರ ಮಳೆಯ ಬಗ್ಗೆ ನಿರ್ಲಕ್ಷ್ಯ ತೋರಿಸಿದ್ದು, ಸರಿಯಾಗಿ ಮವಾಗಿಲ್ಲ ಎಂದು ಆರೋಪಿಸಿದರು.

ಪ್ರಸ್ತುತ ಬಿಕ್ಕಟ್ಟಿನ ಮಧ್ಯೆ ಕಾಂಗ್ರೆಸ್ ಸರ್ಕಾರ ಕಿವುಡ ರೀತಿಯಲ್ಲಿ ವರ್ತಿಸುತ್ತಿದೆ. ಸರ್ಕಾರದ ನಿಷ್ಕ್ರಿಯತೆ ಮತ್ತು ಬೇಜವಾಬ್ದಾರಿತನವು ನಗರವನ್ನು ದುರ್ಬಲಗೊಳಿಸಿದೆ. ಸ್ಲೈಸ್ ಗೇಟ್ ಯೋಜನೆ ಸೇರಿದಂತೆ ಅನೇಕ ಎಚ್ಚರಿಕೆಗಳು ಮತ್ತು ಪರಿಣಾಮಕಾರಿ ನೀರು ನಿರ್ವಹಣೆ ಬಗ್ಗೆ ನಮ್ಮ ಪ್ರಸ್ತಾಪಗಳ ಹೊರತಾಗಿಯೂ, ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದರು.

ಬೆಂಗಳೂರಿನ ನಿವಾಸಿಗಳನ್ನು ಪ್ರವಾಹದಿಂದ ತಪ್ಪಿಸಬಹುದಾಗಿತ್ತು. ಆದರೆ ಯಾವುದೇ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.

ಲಘು ಮಳೆಯ ನಂತರ ನೆರೆಹೊರೆ ಪ್ರದೇಶಗಳಲ್ಲಿ ವಾಟರ್ ಲಾಗಿಂಗ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ಬೆಂಗಳೂರು ಕಂಡಿದೆ, ತಜ್ಞರು ಹೇಳುವ ಪರಿಸ್ಥಿತಿಯು ಯೋಜಿತವಲ್ಲದ ನಗರ ಬೆಳವಣಿಗೆ ಮತ್ತು ನಿಷ್ಪರಿಣಾಮಕಾರಿ ಒಳಚರಂಡಿ ವ್ಯವಸ್ಥೆಗಳಿಂದ ಉಲ್ಬಣಗೊಂಡಿದೆ. ಈ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಆಸ್ಪತ್ರೆಗೆ ಭೇಟಿ ನೀಡಿ ಫ್ಲೈದುಬೈ ಹೀರೋ ಸ್ಮಿತ್ ಮಚ್ಚಾರ್ ಆರೋಗ್ಯ ವಿಚಾರಿಸಿದ ದುಬೈ ಕ್ರೌನ್ ಪ್ರಿನ್ಸ್! ಹೇಳಿದ್ದೇನು?

ವಿಂಡೀಸ್ ವಿರುದ್ಧದ ಪಂದ್ಯದಲ್ಲಿ 9ನೇ ಶತಕ ಸಿಡಿಸಿದ KL Rahul: 10,000 ಅಂತಾರಾಷ್ಟ್ರೀಯ ರನ್!

ಅಂತಿಮ ಹಂತದಲ್ಲಿ 21 ಚಿನ್ನದ ಪದಕಗಳು: 2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಟ್ಟು 85 ಪದಕ!

Asian Games 2026: ಪಾಕಿಸ್ತಾನ ಬಗ್ಗು ಬಡಿದ ಭಾರತಕ್ಕೆ ಮತ್ತೊಂದು ಚಿನ್ನ: ಗೋಲ್ಡ್ ಗೆದ್ದ ಕುಸ್ತಿಪಟು ಅಮನ್!