ರಾಜ್ಯ

'ನಾನು ದರ್ಶನ್ ನೋಡ್ಬೇಕು, ಅವ್ರನ್ನ ಮದುವೆಯಾಗ್ತೀನಿ': ಬಳ್ಳಾರಿ ಸೆಂಟ್ರಲ್ ಜೈಲು ಮುಂದೆ ಮಹಿಳೆ ಹೈಡ್ರಾಮಾ!

ನಾನಿವತ್ತು ದರ್ಶನ್‌ರನ್ನ ನೋಡಲೇಬೇಕು. ಹಣ್ಣು, ತಿಂಡಿ ಕೊಟ್ಟು ಮಾತಾಡಿಸಿಕೊಂಡು ಹೋಗುತ್ತೇನೆ ನನ್ನನ್ನು ಜೈಲೊಳಗೆ ಬಿಡಿ ಎಂದು ಜೈಲು ಮುಂಭಾಗ ಪಟ್ಟು ಹಿಡಿದು ಕುಳಿತಿದ್ದಾಳೆ.

ಬಳ್ಳಾರಿ: ನಟ ದರ್ಶನ್ ನೋಡ್ಬೇಕು, ಮಾತಾಡ್ಬೇಕು ಎಂದು ಜೈಲಿನ ಬಳಿ ಬರುವ ಅಭಿಮಾನಿಗಳು ಬಳ್ಳಾರಿಯಲ್ಲಿಯೂ ಇದ್ದಾರೆ. ಬಳ್ಳಾರಿ ಸೆಂಟ್ರಲ್ ಜೈಲಿಗೆ ಅವರನ್ನು ಶಿಫ್ಟ್ ಮಾಡಿದ ಮೇಲೆ ಅವರ ಕುಟುಂಬ ಸದಸ್ಯರಿಗೆ ಮಾತ್ರ ಭೇಟಿಗೆ ಅವಕಾಶ ನೀಡಲಾಗಿದೆ. ಕಳೆದ ವಾರ ಅವರನ್ನು ಭೇಟಿಯಾಗಿ ಹೋಗಿದ್ದ ಪತ್ನಿ ವಿಜಯಲಕ್ಷ್ಮಿ ಇಂದು ಸಾಯಂಕಾಲ ಮತ್ತೆ ಬರಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಈ ಮಧ್ಯೆ ಬಳ್ಳಾರಿ ಜೈಲಿನ ಬಳಿ ಬೆಂಗಳೂರಿನ ಕೆಂಗೇರಿ ಬಳಿಯ ಅವರ ಅಭಿಮಾನಿ ಮಹಿಳೆ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಬಂದು ಹೈಡ್ರಾಮಾ ಮಾಡಿರುವ ಘಟನೆ ನಡೆದಿದೆ. ದರ್ಶನ್ ನೋಡಲು ಜೈಲೊಳಗೆ ಬಿಡಿ, ಅವರ ಕುಟುಂಬ ಸದಸ್ಯರನ್ನು ಮಾತ್ರ ಬಿಡ್ತೀವಿ ಅಂತ ನೀವು ಹೇಳೊದಾದ್ರೆ ಅವರನ್ನು ಮದುವೆಯಾಗಲೂ ರೆಡಿಯಿದ್ದೇನೆ ಬೇಕಿದ್ರೆ ಎಂದು ಮಹಿಳೆ ಹೇಳಿದಾಗ ಪೊಲೀಸರು ತಬ್ಬಿಬ್ಬಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ರನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದಾಗ ದರ್ಶನ್ ನೋಡಲು ಬಂದಿದ್ದ ಮಹಿಳಾ ಅಭಿಮಾನಿ ಲಕ್ಷ್ಮಿಗೆ ದರ್ಶನ್ ನೋಡಲು ಪೊಲೀಸರು ಅವಕಾಶ ಕೊಟ್ಟಿರಲಿಲ್ಲ. ಇದೀಗ ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಬಂದಿರುವ ಅಭಿಮಾನಿ ಲಕ್ಷ್ಮೀ, ನಾನು ದರ್ಶನ್ ರನ್ನ ನೋಡಬೇಕು ಎಂದು ಜೈಲು ಸಿಬ್ಬಂದಿ ಜೊತೆ ವರಾತ ತೆಗೆದಿದ್ದಾಳೆ.

ಮನೆಯವರಿಗೆ ಮಾತ್ರ ಬಿಡೋದಾದರೆ ನಾನು ದರ್ಶನ್‌ರನ್ನ ಮದುವೆಯಾಗುತ್ತೇನೆ ಎಂದ ಮಹಿಳೆ. ನನಗೆ ದರ್ಶನ್ ಇಷ್ಟ, ವಿಜಯಲಕ್ಷ್ಮೀ ರೀತಿಯಲ್ಲಿ ನಾನು ಮದುವೆಯಾಗುತ್ತೇನೆ. ಒಳಗೆ ಬಿಡಿ ನಾನು ದರ್ಶನ್ ನೋಡಲೇಬೇಕು. ಬೆಂಗಳೂರು ಜೈಲಿಗೆ ಹೋದ್ರೆ ಅಲ್ಲೂ ಬಿಡ್ಲಿಲ್ಲ. ಬಳ್ಳಾರಿಗೆ ಬಂದ್ರೆ ಇಲ್ಲೂ ಬಿಡಲ್ಲ ಅಂದ್ರೆ ಹೇಗೆ? ಎಂದು ಜೈಲು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾಳೆ.

ನಾನಿವತ್ತು ದರ್ಶನ್‌ರನ್ನ ನೋಡಲೇಬೇಕು. ಹಣ್ಣು, ತಿಂಡಿ ಕೊಟ್ಟು ಮಾತಾಡಿಸಿಕೊಂಡು ಹೋಗುತ್ತೇನೆ ನನ್ನನ್ನು ಜೈಲೊಳಗೆ ಬಿಡಿ ಎಂದು ಜೈಲು ಮುಂಭಾಗ ಪಟ್ಟು ಹಿಡಿದು ಕುಳಿತಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!