ಮೈಸೂರು: ಸಿದ್ದರಾಮಯ್ಯನವರೇ ಗಣೇಶೋತ್ಸವ ಮೆರವಣಿಗೆಗೆ ದುಷ್ಕರ್ಮಿಗಳಿಂದ ನೀವು ರಕ್ಷಣೆ ಒದಗಿಸುವುದಿಲ್ಲ ಎಂದಾದಲ್ಲಿ ಹಿಂದೂಗಳು ಸಹ ಪೆಟ್ರೋಲ್ ಬಾಂಬ್, ತಲವಾರ್ ಗಳನ್ನು ಹಿಡಿದುಕೊಂಡು ಬರಬೇಕಾಗುತ್ತದೆ ಎಂದು ಮೈಸೂರು- ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಎಚ್ಚರಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದರು. ಬೇರೆ ಜಿಲ್ಲೆಗಳಲ್ಲಿ ಅದ್ದೂರಿಯಾಗಿ ಗಣೇಶ ಮೆರವಣಿಗೆಗಳು ನಡೆಯುತ್ತವೆ. ಅಷ್ಟರೊಳಗೆ ಸರ್ಕಾರ ಮುಸ್ಲಿಂ ಪುಂಡರ ಮೇಲೆ ನಿಯಂತ್ರಣ ಹೇರಬೇಕು. ನಿಯಂತ್ರಣ ಹೇರದಿದ್ದರೆ ನಮ್ಮ ರಕ್ಷಣೆ ಜವಾಬ್ದಾರಿ ನಮಗೆ ಗೊತ್ತಿದೆ ಎಂದು ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ.
ಕಳೆದ ವರ್ಷವೂ ಕೂಡ ನಾಗಮಂಗಲದಲ್ಲಿರುವ ಮೈಸೂರು ರಸ್ತೆಯಲ್ಲಿರುವ ದರ್ಗಾದ ಬಳಿ ಗಣೇಶ ವಿಸರ್ಜನಾ ಮೆರವಣಿಗೆ ನಡೆಯುತ್ತಿದ್ದ ವೇಳೆ ಗಲಾಟೆ ಸಂಭವಿಸಿತ್ತು. ಈ ವರ್ಷವೂ ಅಲ್ಲಿ ಮೆರವಣಿಗೆ ಹೋಗುತ್ತದೆ ಎಂದ ಮೇಲೆ ಸರ್ಕಾರ, ಜಿಲ್ಲಾಡಳಿತ ಸೂಕ್ತ ಭದ್ರತೆಯನ್ನು ಕೊಡಬೇಕಿತ್ತು. ಆದರೆ ಈ ಸಲ ಕಳೆದ ಸಲಕ್ಕಿಂತಲೂ ವ್ಯವಸ್ಥಿತವಾದಂತಹ ತಯಾರಿಯನ್ನು ಮುಸಲ್ಮಾನರು ಮಾಡಿಕೊಂಡು ಬಂದಿದ್ದರು. ಮನೆ ಮೇಲೆ ಪೆಟ್ರೋಲ್ ಬಾಂಬ್ ಗಳನ್ನು ಇಟ್ಟುಕೊಂಡು ಚಪ್ಪಲಿ ತೂರಾಟ ಮಾಡಿದ್ದಾರೆ. ಕಲ್ಲನ್ನು ತೂರಿದ್ದಾರೆ. ಇದಕ್ಕೆಲ್ಲಾ ಸಿದ್ಧರಾಗಿಯೇ ನಿಂತಿದ್ದರು. ಇದ ಪೊಲೀಸ್ ಇಲಾಖೆಗೆ ಗೊತ್ತಿರಲಿಲ್ಲವೇ? ಜಿಲ್ಲಾಡಳಿತಕ್ಕೆ ಗೊತ್ತಿರಲಿಲ್ಲವೇ ಎಂದು ಪ್ರತಾಪ್ ಸಿಂಹ ಖಾರವಾಗಿ ಪ್ರಶ್ನಿಸಿದ್ದಾರೆ.
ದಯವಿಟ್ಟು ಈಗಲಾದರೂ ಕೂಡ ನಿಮ್ಮ ಈ ಹಿಂದೂ ವಿರೋಧಿ ಧೋರಣೆಯನ್ನು ಬಿಟ್ಟು ಆ ಮುಸಲ್ಮಾನರನ್ನು ಅತಿಯಾಗಿ ಓಲೈಕೆ ಮಾಡುವುದನ್ನು ಬಿಟ್ಟು, ನೀವು ಒಬ್ಬ ಕನ್ನಡಿಗನಾಗಿ, ಕನ್ನಡಿಗರ ರಕ್ಷಣೆ ಮಾಡಬೇಕಿರುವುದು, ಇಲ್ಲಿನ ನೆಲ, ಜಲ, ಸಂಸ್ಕೃತಿಯನ್ನು ರಕ್ಷಣೆ ಮಾಡಬೇಕಾದ್ದು ನಿಮ್ಮ ಕರ್ತವ್ಯವಾಗಿದೆ. ಅದನ್ನು ಮಾಡಿ ಎಂದು ನಿಮ್ಮಲ್ಲಿ ನಾನು ವಿನಮ್ರವಾಗಿ ವಿನಂತಿಸುತ್ತೇನೆ ಎಂದರು.