ರಾಜ್ಯ

ತಿರುಪತಿ ಲಡ್ಡು ವಿವಾದ: ಪ್ರಮುಖ ದೇವಾಲಯಗಳಲ್ಲಿ ಭಕ್ತರಿಗೆ ನೀಡುವ ಪ್ರಸಾದ ಪರೀಕ್ಷಿಸಲು ರಾಜ್ಯ ಸರ್ಕಾರ ಮುಂದು!

ಕರ್ನಾಟಕದಲ್ಲಿ 34,000 ದತ್ತಿ ಇಲಾಖೆಯ ಸುಪರ್ದಿಯಲ್ಲಿರುವ ದೇವಾಲಯಗಳಿವೆ, ಅವುಗಳಲ್ಲಿ 205 ವರ್ಗ-ಎ ದೇವಾಲಯಗಳ ವಾರ್ಷಿಕ ಆದಾಯ 25 ಲಕ್ಷಕ್ಕೂ ಹೆಚ್ಚಾಗಿವೆ. 193 ವರ್ಗ-ಬಿ ದೇವಾಲಯಗಳ ವಾರ್ಷಿಕ ಆದಾಯ 5 ಲಕ್ಷದಿಂದ 25 ಲಕ್ಷ ರೂಪಾಯಿಗಳಾಗಿವೆ.

ಬೆಂಗಳೂರು: ತಿರುಪತಿಯ ತಿರುಮಲ ದೇಗುಲದಲ್ಲಿ ನೀಡುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರ ಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ಹೇಳಿಕೆ ನೀಡಿದ ನಂತರ ತೀವ್ರ ವಿವಾದ ಎದ್ದಿದ್ದು, ಇದರ ಬಿಸಿ ರಾಜ್ಯದ ಪ್ರಮುಖ ದೇವಾಲಯಗಳಿಗೆ ತಟ್ಟಿದೆ. ಕರ್ನಾಟಕದ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ಭಕ್ತರಿಗೆ ನೀಡುವ ಪ್ರಸಾದವನ್ನು ಪರೀಕ್ಷೆಗೊಳಪಡಿಸಿಯೇ ಭಕ್ತರಿಗೆ ಹಂಚಲಾಗುವುದು ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಕರ್ನಾಟಕದಲ್ಲಿ 34,000 ದತ್ತಿ ಇಲಾಖೆಯ ಸುಪರ್ದಿಯಲ್ಲಿರುವ ದೇವಾಲಯಗಳಿವೆ, ಅವುಗಳಲ್ಲಿ 205 ವರ್ಗ-ಎ ದೇವಾಲಯಗಳ ವಾರ್ಷಿಕ ಆದಾಯ 25 ಲಕ್ಷಕ್ಕೂ ಹೆಚ್ಚಾಗಿವೆ. 193 ವರ್ಗ-ಬಿ ದೇವಾಲಯಗಳ ವಾರ್ಷಿಕ ಆದಾಯ 5 ಲಕ್ಷದಿಂದ 25 ಲಕ್ಷ ರೂಪಾಯಿಗಳಾಗಿವೆ. ಉಳಿದವು 5 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ವರ್ಗ-ಸಿ ದೇವಾಲಯಗಳಾಗಿ ವರ್ಗೀಕರಿಸಲ್ಪಟ್ಟಿವೆ. ಈ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ನಂತರ ಭಕ್ತರಿಗೆ ಪ್ರಸಾದವನ್ನು ನೀಡಲಾಗುತ್ತದೆ ಎಂದರು.

ಕರ್ನಾಟಕದ ದೇವಾಲಯಗಳಲ್ಲಿ ಅಂತಹ ಯಾವುದೇ ಘಟನೆಗಳು ಅಥವಾ ಕಲಬೆರಕೆಯಾಗಿರುವ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಆದರೆ ಜನರಿಗೆ ಯಾವುದೇ ಅನುಮಾನ ಬೇಡ, ಆದ್ದರಿಂದ ನಾವು ಪರೀಕ್ಷೆಗೆ ಆದೇಶಿಸುತ್ತೇವೆ ಎಂದರು.

ನಂದಿನಿ ತುಪ್ಪ ಕಡ್ಡಾಯ ಬಳಕೆ: ಕರ್ನಾಟಕ ಹಾಲು ಮಹಾಮಂಡಲ (KMF) ಪೂರೈಸುವ ನಂದಿನಿ ತುಪ್ಪವನ್ನು ಮಾತ್ರ ಬಳಸುವಂತೆ ಮತ್ತು ಬೇರೆ ಯಾವುದೇ ಬ್ರಾಂಡ್ ನ ತುಪ್ಪ ಬಳಸದಂತೆ ರಾಜ್ಯ ದತ್ತಿ ಇಲಾಖೆಗೆ ಲಗತ್ತಿಸಲಾದ ಎಲ್ಲಾ ಪ್ರಮುಖ ದೇವಾಲಯಗಳಿಗೆ ಸುತ್ತೋಲೆ ಹೊರಡಿಸಲಾಗುವುದು. ಕರ್ನಾಟಕವು ಹಲವು ವರ್ಷಗಳಿಂದ ತಿರುಪತಿಗೆ ಲಾಡು ತಯಾರಿಕೆಗೆ ನಂದಿನಿ ತುಪ್ಪವನ್ನು ಪೂರೈಸುತ್ತಿದೆ ಎಂದರು.

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಅವರು ಕರ್ನಾಟಕದ ವಿವಿಧ ದೇವಾಲಯಗಳಲ್ಲಿ ನೀಡುವ ಪ್ರಸಾದವನ್ನು ಪರೀಕ್ಷಿಸಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿ.26ರಿಂದ ರೈಲ್ವೆ ಪ್ರಯಾಣ ದರ ಏರಿಕೆ; 500 ಕಿ.ಮೀವರೆಗಿನ ಪ್ರಯಾಣಕ್ಕೆ ನಾನ್ ಎಸಿ ರೈಲುಗಳಲ್ಲಿ 10 ರೂ. ಹೆಚ್ಚಳ!

U-19 Asia Cup ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಹೀನಾಯ ಸೋಲು!

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ನೇತೃತ್ವದ ಮಹಾಯುತಿ ಮ್ಯಾಜಿಕ್; ಅಘಾಡಿ ಗಾಡಿ ಪಂಕ್ಚರ್!

Pakistan: 17 ವರ್ಷ ಜೈಲು ಶಿಕ್ಷೆ ಹಿನ್ನೆಲೆ, ದೇಶಾದ್ಯಂತ ಬೀದಿಗಿಳಿದು ಹೋರಾಟಕ್ಕೆ ಸಜ್ಜಾಗಿ, ಇಮ್ರಾನ್ ಖಾನ್ ಕರೆ!

ಬೆಂಗಳೂರು: ರಾಷ್ಟ್ರೀಯ 'ಪಲ್ಸ್ ಪೋಲಿಯೊ ಲಸಿಕಾ' ಅಭಿಯಾನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

SCROLL FOR NEXT