ಸಾಂದರ್ಭಿಕ ಚಿತ್ರ 
ರಾಜ್ಯ

ಅಪ್ರಾಪ್ತೆ, ಆದ್ರೆ ದಿಟ್ಟ ಹೋರಾಟಗಾರ್ತಿ! ಬೀದರ್ ನಲ್ಲಿ ತನ್ನ ಮದುವೆಯನ್ನೇ ನಿಲ್ಲಿಸಿದ ಬಾಲಕಿ!

ಇತ್ತೀಚಿಗೆ ತನ್ನ ಶಾಲೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೊಸಂಬೆ ಭೇಟಿ ನೀಡಿ, ಒಂದು ವೇಳೆ ಯಾರಾದರೂ ಕಿರುಕುಳ ನೀಡಿದ್ದರೆ ಸಹಾಯವಾಣಿ ಸಂಪರ್ಕಿಸುವಂತೆ ಸಲಹೆ ನೀಡಿದ್ದನ್ನು ನೆನಪಿಸಿಕೊಂಡ ಬಾಲಕಿ ಶನಿವಾರ ಸಹಾಯವಾಣಿಯನ್ನು ಸಂಪರ್ಕಿಸಿದ್ದಾಳೆ.

ಬೀದರ್, ಕಲಬುರಗಿ: ಬಸವಕಲ್ಯಾಣ ತಾಲೂಕಿನ ಹಳ್ಳಿಯೊಂದರಲ್ಲಿ 9ನೇ ತರಗತಿ ಓದುತ್ತಿರುವ 14 ವರ್ಷದ ಈ ಬಾಲಕಿ ತನ್ನ ಮದುವೆಯನ್ನೇ ನಿಲ್ಲಿಸಿ, ಇತರೆ ಅಪ್ರಾಪ್ತ ಬಾಲಕಿಯರಿಗೆ ಮಾದರಿಯಾಗಿದ್ದಾಳೆ.

ಈ ಕುರಿತು ವರದಿಗಾರರೊಂದಿಗೆ ದೂರವಾಣಿಯೊಂದಿಗೆ ಮಾತನಾಡಿರುವ ಬಾಲಕಿ, ಬಡತನದಿಂದಾಗಿ ತಾಯಿ ತನ್ನ ಮೂವರು ಅಕ್ಕಂದಿರಿಗೆ ಕೆಲವು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದಾರೆ. ತನ್ನ ಅಕ್ಕಂದಿರುವ ಅನುಭವಿಸುತ್ತಿರುವ ಆರೋಗ್ಯದ ಸಮಸ್ಯೆಗಳನ್ನು ನೋಡಿದಾಗ, ಅಪ್ರಾಪ್ತ ವಯಸ್ಸಿನ ಹುಡುಗಿಯರಿಗೆ ಬಾಲ್ಯ ವಿವಾಹವು ಕೆಟ್ಟದು ಎಂಬುದು ಅರಿವಾಯಿತು ಎಂದು ಹೇಳಿದ್ದಾಳೆ.

ಆಕೆಯ ತಂದೆ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದು, ಕೃಷಿ ಕೂಲಿ ಕಾರ್ಮಿಕರಾಗಿರುವ ತಾಯಿ ನಾಲ್ಕು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಕುಟುಂಬಕ್ಕೆ ಏಕೈಕ ಆಧಾರವಾಗಿದ್ದಾರೆ. ಸರ್ಕಾರದ ಸವಲತ್ತುಗಳ ಕಾರಣದಿಂದ ಆಕೆಯ ತಾಯಿ ಬಾಲಕಿಯನ್ನು ಓದಲು ಬಿಟ್ಟಿದ್ದಾರೆ. ಆದರೆ ಬಡತನದ ಕಾರಣದಿಂದ ತನ್ನ ತಾಯಿಯ ಒಂಬತ್ತು ಸಹೋದರರ ಪೈಕಿ 25 ವರ್ಷ ವಯಸ್ಸಿನ ಸೋದರ ಮಾವನಿಗೆ ಆಕೆಯನ್ನು ಕೊಟ್ಟು ಮದುವೆ ಮಾಡಲು ಕುಟುಂಬ ನಿರ್ಧರಿಸಿತು.

ಆದರೆ ಬಾಲಕಿ ಇದನ್ನು ವಿರೋಧಿಸಿ ತಾನು ವಯಸ್ಕಳಾಗಿ ತನ್ನ ಸ್ವಂತ ಕಾಲಿನ ಮೇಲೆ ನಿಲ್ಲುವವರೆಗೂ ಮದುವೆಯಾಗುವುದಿಲ್ಲ ಎಂದು ತಾಯಿ ಮತ್ತು ಸೋದರ ಮಾವನಿಗೆ ಹೇಳಿದ್ದಾಳೆ. ಆದರೂ ಅವರು ತಲೆಕೆಡಿಸಿಕೊಳ್ಳದೆ ಮದುವೆ ತಯಾರಿಗೆ ಮುಂದಾಗಿದ್ದಾರೆ.

ಅಪ್ರಾಪ್ತ ಬಾಲಕಿಗೆ ತಿಂಗಳಿಗೆ 4 ಸಾವಿರ ರೂ: ಇತ್ತೀಚಿಗೆ ತನ್ನ ಶಾಲೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೊಸಂಬೆ ಭೇಟಿ ನೀಡಿ, ಒಂದು ವೇಳೆ ಯಾರಾದರೂ ಕಿರುಕುಳ ನೀಡಿದ್ದರೆ ಸಹಾಯವಾಣಿ ಸಂಪರ್ಕಿಸುವಂತೆ ಸಲಹೆ ನೀಡಿದ್ದನ್ನು ನೆನಪಿಸಿಕೊಂಡ ಬಾಲಕಿ ಶನಿವಾರ ಸಹಾಯವಾಣಿಯನ್ನು ಸಂಪರ್ಕಿಸಿದ್ದು, ಕೊಸಾಂಬೆ ಗಮನಕ್ಕೆ ತರಲಾಗಿದೆ.

ಭಾನುವಾರ ತಹಶೀಲ್ದಾರ್ ದತ್ತಾತ್ರೇಯ ಗಡಾದ, ತಾಲ್ಲೂಕು ಪಂಚಾಯಿತಿ ಸಿಇಒ ರಮೇಶ ಸುಲ್ಫಿ, ಸಿಡಿಪಿಒ ಗೌತಮ್ ಸಿಂಧೆ, ಬಿಇಒ ಶಿವರುದ್ರಯ್ಯ, ಪಿಎಸ್‌ಐ ಜಯಶ್ರೀ, ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರತಾಪುರ ಅವರೊಂದಿಗೆ ಗ್ರಾಮಕ್ಕೆ ದೌಡಾಯಿಸಿದ್ದು, ಬಾಲಕಿಯ ತಾಯಿ, ಸೋದರ ಮಾವ ಮತ್ತು ಗ್ರಾಮದ ಹಿರಿಯರನ್ನು ಭೇಟಿ ಮಾಡಿತು.

ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮನೆಯವರಿಗೆ ಮನವರಿಕೆ ಮಾಡಿಕೊಟ್ಟು, ಮದುವೆ ಮಾಡಿದರೆ ಕಾನೂನು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹುಡುಗಿ ವಯಸ್ಕಳಾಗುವವರೆಗೆ ಮದುವೆ ಮಾಡಿಸುವುದಿಲ್ಲ ಎಂದು ತಾಯಿಯಿಂದ ವಾಗ್ದಾನ ಪಡೆದ ಅಧಿಕಾರಿಗಳ ತಂಡ ಬಾಲಕಿಯನ್ನು ಅಭಿನಂದಿಸಿತು. ಆಕೆಗೆ ಪ್ರತಿ ತಿಂಗಳು ಪ್ರತಿ ತಿಂಗಳು 4 ಸಾವಿರ ರೂಪಾಯಿ ನೀಡುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕೊಸಾಂಬೆ ಸೂಚಿಸಿದರು. ನಮ್ಮ ಹಳ್ಳಿಗೆ ಸಹಾಯ ಮಾಡಲು ನಾನು ಪೊಲೀಸ್ ಅಧಿಕಾರಿಯಾಗಲು ಬಯಸುತ್ತೇನೆ ಎಂದು ಬಾಲಕಿ ಹೇಳಿದಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT