ಮೆಮು ರೈಲು ಸೇವೆಗೆ ಸಂಚಾರ  
ರಾಜ್ಯ

ತುಮಕೂರು-ಯಶವಂತಪುರ ಮಧ್ಯೆ ನೂತನ ಮೆಮು ರೈಲು ಸೇವೆ: ಕೇಂದ್ರ ಸಚಿವ ವಿ ಸೋಮಣ್ಣ ಚಾಲನೆ

ತುಮಕೂರು-ಯಶವಂತಪುರ ಜೊತೆಗೆ ಬಾಣಸವಾಡಿ-ತುಮಕೂರು ನಡುವೆ ಹೊಸ ಮೆಮು ರೈಲು ಸೇವೆ ಆರಂಭ ಮಾಡುವುದಾಗಿ ಭರವಸೆ ನೀಡಿದರು.

ತುಮಕೂರು: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (V. Somanna) ಅವರು ಇಂದು ಶುಕ್ರವಾರ ತುಮಕೂರು-ಯಶವಂತಪುರ ಮೆಮು (Tumkur-Yeshwanthpur Memu) ರೈಲಿಗೆ ಚಾಲನೆ ನೀಡಿದರು.

ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತುಮಕೂರು-ಯಶವಂತಪುರ ಜೊತೆಗೆ ಬಾಣಸವಾಡಿ-ತುಮಕೂರು ನಡುವೆ ಹೊಸ ಮೆಮು ರೈಲು ಸೇವೆ ಆರಂಭ ಮಾಡುವುದಾಗಿ ಭರವಸೆ ನೀಡಿದರು.

ಮೆಮು ರೈಲು ಸಂಚಾರ: ತುಮಕೂರು-ಯಶವಂತಪುರ ನಡುವಿನ ಹೊಸ ಮೆಮು ರೈಲು ಇಂದೇ ಕಾರ್ಯಾರಂಭ ಮಾಡುತ್ತಿದ್ದು, ಭಾನುವಾರ ಹೊರತುಪಡಿಸಿ ವಾರದ ಎಲ್ಲ ದಿನ ಸಂಚರಿಸಲಿದೆ.

ರೈಲು ಸಂಖ್ಯೆ 06201: ತುಮಕೂರು-ಯಶವಂತಪುರ ಮೆಮು ರೈಲು ಪ್ರತಿದಿನ ಬೆಳಿಗ್ಗೆ 8.45ಕ್ಕೆ ತುಮಕೂರಿನಿಂದ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ.

ರೈಲು ಸಂಖ್ಯೆ 06202: ಯಶವಂತಪುರ-ತುಮಕೂರು ಮೆಮು ರೈಲು ಸಂಜೆ 5.40ಕ್ಕೆ ಯಶವಂತಪುರದಿಂದ ಹೊರಟು ಸಂಜೆ 7.05ಕ್ಕೆ ತುಮಕೂರು ತಲುಪಲಿದೆ.

ತುಮಕೂರು-ಬಾಣಸವಾಡಿ: ಸೆಪ್ಟೆಂಬರ್​ 30 ರಿಂದ ಆರಂಭವಾಗಲಿರುವ ತುಮಕೂರು-ಬಾಣಸವಾಡಿ ಮೆಮು ರೈಲು ಸಂಚಾರ ಆರಂಭವಾಗಲಿದೆ. ಈ ಮೆಮು ರೈಲು ಸೋಮವಾರ ಮಾತ್ರ ಕಾರ್ಯನಿರ್ವಹಿಸಲಿದೆ.

ರೈಲು ಸಂಖ್ಯೆ 06205: ಬಾಣಸವಾಡಿ-ತುಮಕೂರು ಮೆಮು ರೈಲು ಪ್ರತಿ ಸೋಮವಾರ ಬೆಳಿಗ್ಗೆ 6.15ಕ್ಕೆ ಬಾಣಸವಾಡಿಯಿಂದ ಹೊರಟು ಬೆಳಿಗ್ಗೆ 8.35ಕ್ಕೆ ತುಮಕೂರು ತಲುಪಲಿದೆ.

ರೈಲು ಸಂಖ್ಯೆ 06205: ತುಮಕೂರು-ಬಾಣಸವಾಡಿ ಮೆಮು ರೈಲು ಪ್ರತಿ ಶನಿವಾರ ಸಂಜೆ 7.40ಕ್ಕೆ ತುಮಕೂರಿನಿಂದ ಹೊರಟು ರಾತ್ರಿ 10.05ಕ್ಕೆ ಬಾಣಸವಾಡಿ ತಲುಪಲಿದೆ.

ಇಂದು ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ.ಎಸ್ ಬಸವರಾಜು ಅವರು, ಶಾಸಕರಾದ ಸಿ.ಬಿ ಸುರೇಶ್ ಬಾಬು, ಬಿ. ಸುರೇಶ್ ಗೌಡ, ಎಂ.ಟಿ ಕೃಷ್ಣಪ್ಪ, ಜಿ.ಬಿ ಜ್ಯೋತಿ ಗಣೇಶ್, ವಿಧಾನಪರಿಷತ್ ಸದಸ್ಯರಾದ ಚಿದಾನಂದ ಎಂ ಗೌಡ ಹಾಗೂ ಮಾಜಿ ಶಾಸಕರು, ಇತರೆ ಪ್ರಮುಖರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ವಿವಾದ: 'ಕರ್ನಾಟಕ ಬಂದ್' ಬಗ್ಗೆ ಚರ್ಚಿಸಲು ನಾಳೆ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ ಸಭೆ!

ಜಂತರ್ ಮಂತರ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಕುರಿತು ಅವಹೇಳನಕಾರಿ ಹೇಳಿಕೆ: ನೋಯ್ಡಾದ ಮಹಿಳೆ ವಿರುದ್ಧ FIR ದಾಖಲು!

ಉಭಯ ಸದನಗಳಲ್ಲಿ ಸಾರ್ವಜನಿಕ ಪರೀಕ್ಷೆ ಅಕ್ರಮ ತಡೆ ಕಾಯ್ದೆಗೆ ಅಂಗೀಕಾರ, ರಾಷ್ಟ್ರಪತಿ ಅನುಮೋದನೆಗಾಗಿ ರವಾನೆ

ರಾಮಾಯಣ ಟ್ರೈಲರ್: ಸೀತಾ ಮಾತೆ ಪಾತ್ರಕ್ಕೆ ಸಾಯಿ ಪಲ್ಲವಿ ಬೇಕಿತ್ತಾ? ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ!

ಪಾಕ್ ಸೇನೆ ಇಸ್ರೇಲ್ ಗಿಂತಲೂ ಕೆಟ್ಟದು: ಮುನೀರ್ ಒಬ್ಬ 'Zalim'; ಕ್ಯಾಮರಾ ಮುಂದೆ ಒಂದೇ ಸಮನೆ ಕಣ್ಣೀರಿಟ್ಟ PoK ವ್ಯಕ್ತಿ! ಮನಕಲಕುವ Video