ಕಾರ್ಮಿಕರನ್ನು ಭೇಟಿ ಮಾಡಿದ ಬಿಜೆಪಿ ಶಾಸಕ ಟಿಎಸ್ ಶ್ರೀವತ್ಸ 
ರಾಜ್ಯ

KSIC ಕಾರ್ಖಾನೆ ಗೇಟ್‌ಗಳಿಗೆ ಬೀಗ: ಹೊರಗುತ್ತಿಗೆ ಕಾರ್ಮಿಕರ ಆಕ್ರೋಶ

ಹೊರಗುತ್ತಿಗೆ ಸಂಸ್ಥೆಯೊಂದಿಗೆ ಆಡಳಿತ ಮಂಡಳಿಯು ಶಾಮೀಲಾಗಿ ತಮ್ಮ ನಿರಂತರ ಸೇವೆಗೆ ಉದ್ದೇಶಪೂರ್ವಕವಾಗಿ ಬ್ರೇಕ್ ಹಾಕಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಮೈಸೂರು: ಕರ್ನಾಟಕ ರೇಷ್ಮೆ ಉದ್ಯಮ ನಿಗಮ (ಕೆಎಸ್‌ಐಸಿ) ಮಂಗಳವಾರ ಮಾನಂದವಾಡಿ ರಸ್ತೆಯಲ್ಲಿರುವ ತನ್ನ ಕಾರ್ಖಾನೆಯ ಪ್ರವೇಶ ದ್ವಾರಕ್ಕೆ ಬೀಗ ಹಾಕಿದ್ದು, 800 ಕ್ಕೂ ಹೆಚ್ಚು ಹೊರಗುತ್ತಿಗೆ ಕಾರ್ಮಿಕರನ್ನು ಆವರಣಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿದೆ.

ಹೊರಗುತ್ತಿಗೆ ಸಂಸ್ಥೆಯೊಂದಿಗೆ ಆಡಳಿತ ಮಂಡಳಿಯು ಶಾಮೀಲಾಗಿ ತಮ್ಮ ನಿರಂತರ ಸೇವೆಗೆ ಉದ್ದೇಶಪೂರ್ವಕವಾಗಿ ಬ್ರೇಕ್ ಹಾಕಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ, ನಮಗೆ ಗ್ರಾಚ್ಯುಟಿ, ಪ್ರಯೋಜನಗಳು ಮತ್ತು ಹಕ್ಕುಗಳನ್ನು ನಿರಾಕರಿಸಲಾಗಿದೆ ಎಂದು ದೂರಿದ್ದಾರೆ.

ಒಂದು ದಶಕಕ್ಕೂ ಹೆಚ್ಚು ಕಾಲ ಕಾರ್ಖಾನೆಯಲ್ಲಿ ನೇಕಾರರು, ಸಹಾಯಕರು, ರೀಲರ್‌ಗಳು, ಕಾಂಟ್ರಾಸ್ಟ್ ಡೈಯರ್‌ಗಳು ಮತ್ತು ಕೋನ್ ವೈಂಡರ್‌ಗಳಾಗಿ ಕೆಲಸ ಮಾಡುತ್ತಿರುವ ಸುಮಾರು 300 ಮಹಿಳೆಯರು ಸೇರಿದಂತೆ ಕಾರ್ಮಿಕರು ಪ್ರವೇಶ ದ್ವಾರಕ್ಕೆ ಬೀಗ ಹಾಕಿರುವುದನ್ನು ಕಂಡು ಆಶ್ಚರ್ಯಚಕಿತರಾದರು. ಕಾಂಟ್ರಾಕ್ಟ್ ರಿನೀವಲ್ ಆದ ನಂತರ ಬುಧವಾರ ಕೆಲಸಕ್ಕೆ ಮರಳಲು ಅಧಿಕಾರಿಗಳು ಅವರಿಗೆ ತಿಳಿಸಿದ್ದರು. ಆದರೆ ಒಳಗೆ ಬಿಡುವಂತೆ ಪದೇ ಪದೇ ವಿನಂತಿಸಿದರೂ, ಅಧಿಕಾರಿಗಳು ಗೇಟ್ ತೆರೆಯಲು ಮತ್ತು ಕಾರ್ಮಿಕರಿಗೆ ಕಾರ್ಖಾನೆಯೊಳಗೆ ಬಿಡಲು ನಿರಾಕರಿಸಿದರು.

ಆಡಳಿತ ಮಂಡಳಿಯ ವಿರುದ್ಧಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಹತ್ತು ವರ್ಷಗಳಿಂದಲೂ ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮ (ಕೆಎಸ್‌ಐಸಿ)ದ ವಿವಿಧ ಉತ್ಪಾದನಾ ಘಟಕಗಳಲ್ಲಿ ಹೊರಗುತ್ತಿಗೆ ನೌಕರರಾಗಿ ದುಡಿಯುತ್ತಿರುವವರ ಸೇವಾ ಅವಧಿಯನ್ನು ಮೊಟಕುಗೊಳಿಸುವ ಹುನ್ನಾರ ನಡೆದಿದೆ.

ಗುತ್ತಿಗೆದಾರರು ಹಾಗೂ ಕೆಎಸ್‌ಐಸಿ ಆಡಳಿತ ಮಂಡಳಿಯವರು, ಇಲ್ಲಿನ ಕಾರ್ಮಿಕರ ಖಾಯಮಾತಿ, ವೇತನ ಹೆಚ್ಚಳ, ದುಪ್ಪಟ್ಟು ಕೂಲಿ(ಓಟಿ) ಮುಂತಾದ ಬೇಡಿಕೆಗಳನ್ನು ಈಡೇರಿಸದ ಕಾರಣ ಗುತ್ತಿಗೆ ಕಾರ್ಮಿಕರು 2023ರಲ್ಲಿ ಮೈಸೂರಿನ ಸಹಾಯಕ ಕಾರ್ಮಿಕ ಆಯುಕ್ತರಿಗೆ ದೂರು ನೀಡಿದ್ದರು.

ಮನವಿ ಪತ್ರವನ್ನು ಸ್ವೀಕರಿಸಿದ ನಂತರ, ಉಪ ಆಯುಕ್ತ ಜಿ ಲಕ್ಷ್ಮಿಕಾಂತ ರೆಡ್ಡಿ ಕಾರ್ಮಿಕರಿಗೆ ವರದಿಯನ್ನು ಸಲ್ಲಿಸಲು ಮತ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸುವುದಾಗಿ ಭರವಸೆ ನೀಡಿದರು.

ಟಿಎನ್‌ಐಇ ಜೊತೆ ಮಾತನಾಡಿದ ಸಂಘದ ಕಾರ್ಯದರ್ಶಿ ಎಸ್ ಧನಂಜಯ, ಕಾರ್ಮಿಕರು 12 ವರ್ಷಗಳಿಗೂ ಹೆಚ್ಚು ಕಾಲ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಎಸ್‌ಎಫ್ 9 ಕಾರ್ಪೊರೇಟ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್‌ನ ಟೆಂಡರ್ ಅವಧಿ ಎರಡು ವರ್ಷಗಳ ಹಿಂದೆ ಮತ್ತು ಕಳೆದ ವರ್ಷ ಕೊನೆಗೊಂಡಿದ್ದರೂ, ಹೈಕೋರ್ಟ್ ಏಜೆನ್ಸಿಗೆ ಟೆಂಡರ್ ಅನ್ನು ನವೀಕರಿಸದಂತೆ ಸ್ಪಷ್ಟವಾಗಿ ನಿರ್ದೇಶಿಸಿದೆ.

ಆದರೆ ಕೆಎಸ್‌ಐಸಿ ನ್ಯಾಯಾಲಯದ ನಿರ್ದೇಶನವನ್ನು ಉಲ್ಲಂಘಿಸಿ ಒಪ್ಪಂದವನ್ನು ನವೀಕರಿಸಿದೆ. ಕಾರ್ಖಾನೆಯು ನಿರಂತರ ಸೇವೆಯನ್ನು ನೀಡಿದ ಕಾರ್ಮಿಕರಿಗೆ ಗ್ರಾಚ್ಯುಟಿ ನೀಡಬೇಕಾಗಿರುವುದರಿಂದ, ಆಡಳಿತ ಮಂಡಳಿಯು ಗ್ರಾಚ್ಯುಟಿ ಮತ್ತು ಇತರ ಪ್ರಯೋಜನಗಳನ್ನು ನಿರಾಕರಿಸಲು ಸಂಚು ರೂಪಿಸಿದ್ದು, ಮಂಗಳವಾರ ಕಾರ್ಖಾನೆಯ ಗೇಟ್‌ಗಳಿಗೆ ಬೀಗ ಹಾಕಿತು ಎಂದು ಹೇಳಿದ್ದಾರೆ.

ಕಳೆದ ವರ್ಷ ರಾಜ್ಯ ಸರ್ಕಾರವು ಗ್ರಾಚ್ಯುಟಿ ಸೌಲಭ್ಯಗಳಿಗೆ ಹೊರಗುತ್ತಿಗೆ ಕಾರ್ಮಿಕರನ್ನು ಸೇರಿಸಿದೆ ಎಂದು ಅವರು ಹೇಳಿದರು. ಕೆಎಸ್ಐಸಿ ಬೆಂಗಳೂರು ಮೂಲದ ಏಜೆನ್ಸಿಗೆ ಏಪ್ರಿಲ್ 2, 2024 ರಿಂದ ಮಾರ್ಚ್ 31, 2027 ರವರೆಗೆ ಎರಡು ವರ್ಷಗಳ ಕಾಲ ಕಾಂಟ್ರಾಕ್ಟ್ ನೀಡಿದೆ. ಹಿಂದೆ, ಏಜೆನ್ಸಿಯಲ್ಲಿನ ಅಕ್ರಮಗಳ ಬಗ್ಗೆ ವಿಚಾರಣೆಗಳು ನಡೆದಿದ್ದವು. ನಾವು ಈ ವಿಷಯವನ್ನು ಜಿಲ್ಲಾಧಿಕಾರಿಗೆ ವಿವರಿಸಿದ್ದೇವೆ ಮತ್ತು ನ್ಯಾಯಕ್ಕಾಗಿ ಒತ್ತಾಯಿಸಿದ್ದೇವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಏನೇ ಆದ್ರೂ, ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

SCROLL FOR NEXT