ಸಾಂದರ್ಭಿಕ ಚಿತ್ರ 
ರಾಜ್ಯ

ಮಡಿಕೇರಿ: ಹೋಂಸ್ಟೇನಲ್ಲಿ ತಾಯಿ, ಮಗಳಿಗೆ ಕಿರುಕುಳ; ಕೇರ್ ಟೇಕರ್ ವಶಕ್ಕೆ ಪಡೆದ ಪೊಲೀಸರು!

ಕೊಠಡಿ ಕಾಯ್ದಿರಿಸಿದ ತಾಯಿ- ಮಗಳು ಏಪ್ರಿಲ್ 5 ರಂದು ಹೋಂಸ್ಟೇಗೆ ಚೆಕ್ ಇನ್ ಮಾಡಿದ್ದಾರೆ.

ಮಡಿಕೇರಿ: ಪ್ರವಾಸಿಗರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮಡಿಕೇರಿಯ ಹೋಂಸ್ಟೇ ಕೇರ್ ಟೇಕರ್ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಡಿಕೇರಿ ನಗರ ವ್ಯಾಪ್ತಿಯ ಈಶ್ವರ ಹೋಂಸ್ಟೇ ಕೇರ್ ಟೇಕರ್ ಪ್ರವೀಣ್ ಎಂಬಾತ ಮಮತಾ ಮತ್ತು ಅವರ ಪುತ್ರಿಗೆ ಕಿರುಕುಳ ನೀಡಿರುವ ಬಗ್ಗೆ ದೂರು ದಾಖಲಾಗಿದೆ.

ಕೊಠಡಿ ಕಾಯ್ದಿರಿಸಿದ ತಾಯಿ- ಮಗಳು ಏಪ್ರಿಲ್ 5 ರಂದು ಹೋಂಸ್ಟೇಗೆ ಚೆಕ್ ಇನ್ ಮಾಡಿದ್ದಾರೆ. ಅವರಿಗೆ ಪ್ರವೀಣ್ ಕೊಠಡಿ ತೋರಿಸಿದ್ದಾರೆ. ಆದರೆ ಏಪ್ರಿಲ್ 6 ರಂದು ಮುಂಜಾನೆ 3 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯೊಂದಿಗೆ ಬಂದ ಪ್ರವೀಣ್, ಮಮತಾ ಮತ್ತು ಅವರ ಮಗಳು ತಂಗಿದ್ದ ಕೊಠಡಿಯ ಬಾಗಿಲು ಬಡಿದಿದ್ದಾರೆ.

ಇಬ್ಬರು ಆರೋಪಿಗಳು ಕುಡಿದ ಮತ್ತಿನಲ್ಲಿದ್ದರು ಎನ್ನಲಾಗಿದೆ. ಕೊಠಿಡಿಯ ಬಾಗಿಲು ತೆರೆಯುವಂತೆ ಮಮತಾ ಅವರನ್ನು ಒತ್ತಾಯಿಸಿದ್ದಾರೆ. ಆದರೆ, ಆಕೆ ಬಾಗಿಲು ತೆರೆಯಲು ನಿರಾಕರಿಸಿದ್ದು, ಹೋಮ್‌ಸ್ಟೇ ಒಳಗೆ ತಾಯಿ-ಮಗಳು ಭಯದಿಂದಲೇ ರಾತ್ರಿ ಕಳೆದಿದ್ದಾರೆ. ಅಲ್ಲಿಂದ ಹೊರಡಲು ಬೇಗನೆ ಎದ್ದಿದ್ದಾರೆ. ಆದರೆ, ಹೋಂಸ್ಟೇನಲ್ಲಿ ನಿಲ್ಲಿಸಿದ್ದ ಅವರ ವಾಹನದ ಎಲ್ಲಾ ಟೈರ್‌ಗಳನ್ನು ಪಂಕ್ಚರ್ ಮಾಡಲಾಗಿದೆ.

ಘಟನೆಯ ನಂತರ ಮಮತಾ ನಗರದ ಟೌನ್ ಪೊಲೀಸ್ ಠಾಣೆಗೆ ಆಗಮಿಸಿ ಕೇರ್‌ಟೇಕರ್ ಪ್ರವೀಣ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ವೇಳೆ ಮಮತಾ ಮಾಲೀಕರಿಂದ ಯಾವುದೇ ಸಹಾಯವನ್ನು ಪಡೆಯದ ಕಾರಣ, ಹೋಂಸ್ಟೇ ಮಾಲೀಕ ಕಾವೇರಪ್ಪನನ್ನು ಸಹ ಎಫ್‌ಐಆರ್‌ನಲ್ಲಿ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, ಬೆಳ್ಳಂಬೆಳಗ್ಗೆ ಹೋಂಸ್ಟೇಗೆ ತೆರಳಿದ್ದ ಪ್ರವೀಣ್ ಜೊತೆಯಲ್ಲಿದ್ದ ಮತ್ತೊಬ್ಬ ಅಪರಿಚಿತ ವ್ಯಕ್ತಿಯನ್ನು ಪ್ರಕರಣದ ಎರಡನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ.

ಪ್ರವೀಣ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಎರಡನೇ ಆರೋಪಿಯ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT