ಲಂಡನ್: ಕನ್ನಡ ಮೂಲದ ಬರಹಗಾರ್ತಿ, ಕಾರ್ಯಕರ್ತೆ ಮತ್ತು ವಕೀಲೆ ಬಾನು ಮುಷ್ತಾಕ್ ಅವರ 12 ಸಣ್ಣ ಕಥಾ ಸಂಕಲನ 'ಹಾರ್ಟ್ ಲ್ಯಾಂಪ್' ನ್ನು ದೀಪಾ ಬಸ್ತಿ ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ, ಇದು ಲಂಡನ್‌ನಲ್ಲಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ 2025 ಕಿರುಪಟ್ಟಿಗೆ ಸೇರ್ಪಡೆಯಾಗಿದೆ.
50,000 ಪೌಂಡ್ ಮೌಲ್ಯದ ಸಾಹಿತ್ಯ ಬಹುಮಾನಕ್ಕಾಗಿ ಕನ್ನಡ ಮೂಲದ ಕೃತಿಯೊಂದು ಆಯ್ಕೆಯಾಗಿರುವುದು ಇದೇ ಮೊದಲಾಗಿದ್ದು, ಆಯ್ಕೆಯಾದರೆ ಲೇಖಕ ಮತ್ತು ಅನುವಾದಕರ ನಡುವೆ ಪ್ರಶಸ್ತಿ ಮೊತ್ತ ವಿಂಗಡನೆಯಾಗಲಿದೆ.
ದೀಪಾ ಬಸ್ತಿ ಅನುವಾದಿಸಿರುವ ಹಾರ್ಟ್ ಲ್ಯಾಂಪ್ ಪುಸ್ತಕವು 1990 ಮತ್ತು 2023ರ ನಡುವೆ ಬಾನು ಮುಷ್ತಾಕ್ ಅವರ 12 ಸಣ್ಣ ಕಥೆಗಳ ಸಂಗ್ರಹವಾಗಿದೆ. ವಿಶ್ವಾದ್ಯಂತ ಆರು ಕೃತಿಗಳಿಗೆ ಅಖೈರುಗೊಳಿಸಲಾದ ಪ್ರಶಸ್ತಿಗೆ ಬಾನು ಮುಷ್ತಾಕ್ ಅವರ ಕೃತಿಯು ಕುಟುಂಬ ಮತ್ತು ಸಮುದಾಯದ ಉದ್ವಿಗ್ನತೆಗಳ ಭಾವಚಿತ್ರಗಳನ್ನು ಸೆರೆಹಿಡಿಯುವ "ಚಮತ್ಕಾರಿ, ಎದ್ದುಕಾಣುವ, ಆಡುಮಾತಿನ, ಹೃದಯಸ್ಪರ್ಶಿ ಮತ್ತು ರೋಮಾಂಚನಕಾರಿ" ಶೈಲಿಯನ್ನು ಹೊಂದಿದೆ.
ದಕ್ಷಿಣ ಭಾರತದ ಮುಸ್ಲಿಂ ಮಹಿಳೆಯರ ಜೀವನದ ಮೂಲಕ ಆಧುನಿಕತೆಯನ್ನು ಅತಿಕ್ರಮಿಸುವ ಕಥೆಯನ್ನು ಈ ಕೃತಿಯು ಒದಗಿಸುತ್ತದೆ. ನನ್ನ ಕಥೆಗಳು ಮಹಿಳೆಯರ ಬಗ್ಗೆ - ಧರ್ಮ, ಸಮಾಜ ಮತ್ತು ರಾಜಕೀಯವು ಅವರಿಂದ ಪ್ರಶ್ನಾತೀತ ಅನುಕಂಪವನ್ನು ಹೇಗೆ ಬಯಸುತ್ತದೆ, ಅವರ ಮೇಲೆ ಅಮಾನವೀಯ ಕ್ರೌರ್ಯ ಹೇರುವಿಕೆ, ಅವರನ್ನು ಅಧೀರರನ್ನಾಗಿ ಹೇಗೆ ಮಾಡುತ್ತದೆ ಎಂದು ವಿವರಿಸುತ್ತದೆ ಎನ್ನುತ್ತಾರೆ ಬಾನು ಮುಷ್ತಾಕ್.
ಮಾಧ್ಯಮಗಳಲ್ಲಿ ವರದಿಯಾಗುವ ದೈನಂದಿನ ಘಟನೆಗಳು ಮತ್ತು ನಾನು ಅನುಭವಿಸಿದ ವೈಯಕ್ತಿಕ ಅನುಭವಗಳು ನನಗೆ ಸ್ಫೂರ್ತಿಯಾಗಿವೆ. ಮಹಿಳೆಯರ ನೋವು, ಸಂಕಟ ಮತ್ತು ಅಸಹಾಯಕ ಜೀವನಗಳು ನನ್ನೊಳಗೆ ಆಳವಾದ ಭಾವನಾತ್ಮಕ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ನಾನು ವ್ಯಾಪಕವಾದ ಸಂಶೋಧನೆಯಲ್ಲಿ ತೊಡಗುವುದಿಲ್ಲ; ನನ್ನ ಹೃದಯವೇ ನನ್ನ ಅಧ್ಯಯನ ಕ್ಷೇತ್ರ ಎನ್ನುತ್ತಾರೆ ಅವರು.
ಪುಸ್ತಕದ ಅನುವಾದಕಿ ದೀಪಾ ಬಸ್ತಿ, "ನನಗೆ, ಅನುವಾದವು ಒಂದು ಸಹಜ ಅಭ್ಯಾಸವಾಗಿದೆ, ಪ್ರತಿ ಪುಸ್ತಕವು ಸಂಪೂರ್ಣವಾಗಿ ವಿಭಿನ್ನ ಪ್ರಕ್ರಿಯೆಯನ್ನು ಬಯಸುತ್ತದೆ. ಬಾನು ಅವರ ಕಥೆಗಳೊಂದಿಗೆ, ನಾನು ಮೊದಲು ಅವರು ಪ್ರಕಟಿಸಿದ ಎಲ್ಲಾ ಕಾದಂಬರಿಗಳನ್ನು ಓದಿದ್ದೇನೆ, ಮೊದಲು ನಾನು ಅದನ್ನು 'ಹಾರ್ಟ್ ಲ್ಯಾಂಪ್'ನಲ್ಲಿರುವ ಕಥೆಗಳಿಗೆ ಸಂಕುಚಿತಗೊಳಿಸುತ್ತೇನೆ. ಕಥೆಯೇ ನನ್ನ ಆಸಕ್ತಿ ಕ್ಷೇತ್ರ. ಈ ಸಾಧನೆಯು ಐತಿಹಾಸಿಕ ಕ್ಷಣವನ್ನು ಸೂಚಿಸುತ್ತದೆ, ಹಾರ್ಟ್ ಲ್ಯಾಂಪ್ ಈ ಮಟ್ಟದಲ್ಲಿ ಗುರುತಿಸಲ್ಪಟ್ಟ ಕೆಲವೇ ಕನ್ನಡ ಭಾಷೆಯ ಕೃತಿಗಳಲ್ಲಿ ಒಂದಾಗಿದೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.