ವೈರಲ್ ಆಗಿರುವ ವಿಡಿಯೋ 
ರಾಜ್ಯ

ದಾವಣಗೆರೆ: ನಡುರಸ್ತೆಯಲ್ಲೇ ಮಹಿಳೆ ಮೇಲೆ ಹಲ್ಲೆ; 6 ಮಂದಿ ಬಂಧನ

ಮಹಿಳೆ ಮೇಲೆ ಹಲ್ಲೆ ಮಾಡಿದ್ದ ವಿಡಿಯೋ ಏಪ್ರಿಲ್​ 13ರಂದು ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಹಲ್ಲೆಗೊಳಗಾದ ಮಹಿಳೆಯ ಸಂಬಂಧಿಕರೊಬ್ಬರು ಚನ್ನಗಿರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದರು.

ದಾವಣಗೆರೆ: ದಾವಣಗೆರೆಯಲ್ಲಿ ನಡುರಸ್ತೆಯಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು 6 ಮಂದಿಯನ್ನು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ತಾವರೆಕೆರೆಯ ಚಾಲಕ ಮೊಹಮ್ಮದ್ ನಯಾಜ್ (32), ಜ್ಯೂಸ್ ಅಂಗಡಿ ಮಾಲೀಕ ಮೊಹಮ್ಮದ್ ಗೌಸ್‌ಪೀರ್ (45), ಬೈಕ್ ಮೆಕ್ಯಾನಿಕ್ ಚಂದಪೀರ್ (35), ಇನಾಯತುಲ್ಲಾ (51), ಮೀನುಗಾರರಾದ ದಸ್ತಗೀರ್ (24) ಮತ್ತು ರಸೂಲ್ ಟಿಆರ್ (42) ಎಂದು ಗುರ್ತಿಸಲಾಗಿದೆ.

ಮಹಿಳೆ ಮೇಲೆ ಹಲ್ಲೆ ಮಾಡಿದ್ದ ವಿಡಿಯೋ ಏಪ್ರಿಲ್​ 13ರಂದು ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಹಲ್ಲೆಗೊಳಗಾದ ಮಹಿಳೆಯ ಸಂಬಂಧಿಕರೊಬ್ಬರು ಚನ್ನಗಿರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದರು.

ದೂರು ದಾಖಲಿಸಿಕೊಂಡು ಪ್ರಕರಣದ ತನಿಖೆಗೆ ಇಳಿದ ಪೊಲೀಸರು, ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಮತ್ತಷ್ಟು ಆರೋಪಿಗಳನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಹಲ್ಲೆಗೊಳಗಾದ ಸಂತ್ರಸ್ತ ಮಹಿಳೆ ಶಬೀನಾ ಏಪ್ರಿಲ್​ 19ರಂದು ಚನ್ನಗಿರಿ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಲಿದ್ದಾರೆ. ಹೇಳಿಕೆಯಲ್ಲಿ ಸಂಬಂಧಿ ನಸ್ರೀನ್ ಅವರನ್ನು ಮನೆಗೆ ಕರೆದುಕೊಂಡು ಹೋಗಲಾಗಿತ್ತು. ನಸ್ರೀನ್ ನೋಡಲು ಆಕೆಯ ಪತಿ ಫಯಾಸ್ ಬಂದಿದ್ದು, ಇದರಿಂದ ಪತಿ ಜಮೀಲ್ ಅಹ್ಮದ್ ಅಲಿಯಾಸ್ ಶಮೀರ್ ಕೆಂಡಾಮಂಡಲಗೊಂಡಿದ್ದರು. ಬಳಿಕ ತಾವರೆಕೆರೆಯ ಜಾಮೀಯಾ ಮಸೀದಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 9 ರಂದು ಮಸೀದಿಯಲ್ಲಿ ಮಾತುಕತೆ ನಡೆಸಲಾಯಿತು. ಮಾತುಕತೆ ಬಳಿಕ ಹೊರಗೆ ಬಂದಾಗ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ. ಪೈಪ್ ಮತ್ತು ಕೋಲುಗಳಿಂದ ಹಲ್ಲೆ ನಡೆಸಿದ್ದಾರೆಂದು ಹೇಳಿದ್ದಾರೆ.

ಘಟನೆಯ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ವೈರಲ್ ಬಳಿಕ ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿ, ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 109(1), 189(2), 190(2), 191(3), 115(2), 118(1), 76, 352, 351(2) ಮತ್ತು 190 ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Assembly elections: ಪಶ್ಚಿಮ ಬಂಗಾಳದಲ್ಲಿ ಅಂತಿಮ ಹಂತದ ಮತದಾನ: ಸಿಎಂ ಮಮತಾ ಬ್ಯಾನರ್ಜಿ ಸೇರಿ ಪ್ರಮುಖ ನಾಯಕರ ಭವಿಷ್ಯ ಇಂದು ನಿರ್ಧಾರ

‘ನಾವಿಲ್ಲದಿದ್ದರೆ ಅಮೆರಿಕನ್ನರು ಫ್ರೆಂಚ್ ಮಾತನಾಡುತ್ತಿದ್ದರು’: ಹಾಸ್ಯ ಮೂಲಕವೇ ಟ್ರಂಪ್‌ಗೆ ಕಿಂಗ್ ಚಾರ್ಲ್ಸ್ III ಫುಲ್ ರೋಸ್ಟ್..!

ಅಮೆರಿಕಾ ಪಾಸ್‌ಪೋರ್ಟ್‌ನಲ್ಲಿ ಟ್ರಂಪ್ ಫೋಟೋ: 'ಫಾದರ್ ಆಫ್ ನೇಷನ್' ಪಟ್ಟಕ್ಕೇರುವ ತಂತ್ರವೇ..?

‘ಟಾಕ್ಸಿಕ್’ ರಿಲೀಸ್ ಮತ್ತೆ ಮುಂದಕ್ಕೆ; ಜೂನ್ 4ಕ್ಕೆ ಬರ್ತಿಲ್ಲ ಸಿನಿಮಾ, ನಟ ಯಶ್ ಹೇಳಿದ್ದೇನು..?

ಎಸ್‌ಸಿ ಒಳ ಮೀಸಲಾತಿ ಅಧಿಕೃತ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

SCROLL FOR NEXT