ಜಾತಿ ಗಣತಿ 
ರಾಜ್ಯ

Karnataka Caste Survey: 'ಮುಸ್ಲಿಮರ ಜನಸಂಖ್ಯೆ ಶೇ.94ರಷ್ಟು ಏರಿಕೆ... ಲಿಂಗಾಯತರು ಕೇವಲ 8.5ರಷ್ಟು ಮಾತ್ರ'; ಜಾತಿ ಗಣತಿ ವರದಿಯ ಮತ್ತಷ್ಟು ಮಾಹಿತಿ ಬಹಿರಂಗ

30 ವರ್ಷಗಳಲ್ಲಿ ಮುಸ್ಲಿಮರ (Muslim) ಜನಸಂಖ್ಯೆ ಶೇ.90ರಷ್ಟು ಏರಿಕೆಯಾಗಿರುವ ಅಂಶ ಸೋರಿಕೆಯಾಗಿದೆ. ಅಂತೆಯೇ ಪರಿಶಿಷ್ಛ ಜಾತಿ ಸಮುದಾಯದ ಜನಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗಿದೆ.

ಬೆಂಗಳೂರು: ಕರ್ನಾಟಕದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಜಾತಿಗಣತಿ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಜಾತಿಗಣತಿಯ ಮತ್ತಷ್ಟು ಮಾಹಿತಿ ಇದೀಗ ಬಹಿರಂಗವಾಗಿದೆ.

2015 ರ ಸಮೀಕ್ಷೆಯಲ್ಲಿ ಈಗಾಗಲೇ ಜನಸಂಖ್ಯೆಗಳ ಲೆಕ್ಕಾಚಾರ ಬಯಲಾಗಿದ್ದು, ಯಾವ್ಯಾವ ಸಮುದಾಯ (Community) ಎಷ್ಟೆಷ್ಟು ಹೆಚ್ಚಾಗಿದೆ ಎಂಬ ಸಂಗತಿ ಬಯಲಾಗಿದೆ. ಅದರಲ್ಲಿಯೂ, 30 ವರ್ಷಗಳಲ್ಲಿ ಮುಸ್ಲಿಮರ (Muslim) ಜನಸಂಖ್ಯೆ ಶೇ.90ರಷ್ಟು ಏರಿಕೆಯಾಗಿರುವ ಅಂಶ ಸೋರಿಕೆಯಾಗಿದೆ. ಅಂತೆಯೇ ಪರಿಶಿಷ್ಛ ಜಾತಿ ಸಮುದಾಯದ ಜನಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗಿದೆ.

ಸೋರಿಕೆಯಾಗಿರುವ ವರದಿಯಲ್ಲಿರುವಂತೆ 1984ರಲ್ಲಿ ವೆಂಕಟಸ್ವಾಮಿ ಆಯೋಗ ನಡೆಸಿದ್ದ ಸಮೀಕ್ಷೆ ಪ್ರಕಾರ 61 ಲಕ್ಷ ಜನರಿದ್ದ ವೀರಶೈವ ಲಿಂಗಾಯತರು ನಂ.1 ಸ್ಥಾನದಲ್ಲಿದ್ದರು. ಆದರೆ, 2015ರ ಕಾಂತರಾಜು ಆಯೋಗದ ಸಮೀಕ್ಷೆ ಪ್ರಕಾರ 66 ಲಕ್ಷ ಜನಸಂಖ್ಯೆ ಇರುವ ವೀರಶೈವ ಲಿಂಗಾಯತರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇವರ ಜನಸಂಖ್ಯೆ ವೃದ್ಧಿ ಕೇವಲ 8.50ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಹಾಗೆಯೇ 57 ಲಕ್ಷವಿದ್ದ ಎಸ್‌ಸಿ ಸಮುದಾಯ 30 ವರ್ಷದಲ್ಲಿ 1 ಕೋಟಿಯಾಗಿದ್ದು ಬರೋಬ್ಬರಿ 90ರಷ್ಟು ಜನಸಂಖ್ಯೆ ವೃದ್ಧಿಯಾಗಿದೆ. ಅಂತೆಯೇ ಮುಸ್ಲಿಮರು ಕೂಡಾ 1984ರಲ್ಲಿ ಕರ್ನಾಟಕದಲ್ಲಿ ಕೇವಲ 39 ಲಕ್ಷ ಜನರಿದ್ದರು. ಆದರೆ, ಇವರ ಸಂಖ್ಯೆ ಕಾಂತರಾಜು ಆಯೋಗದ ವರದಿ ಪ್ರಕಾರ 76 ಲಕ್ಷವಾಗಿದೆ. ಅಂದರೆ, ಬರೋಬ್ಬರಿ ಶೇ 94 ರಷ್ಟು ಜನಸಂಖ್ಯೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.

1984ರಲ್ಲಿ ಇಡೀ ರಾಜ್ಯದಲ್ಲಿ ಶೇಕಡಾ 17ರಷ್ಟು ಜನಸಂಖ್ಯೆ ಹೊಂದಿದ್ದ ಲಿಂಗಾಯತರು ಈಗ ಮೂರನೇ ಸ್ಥಾನಕ್ಕೆ ಕುಸಿದಿರುವುದಾಗಿ ಈಗ ಮಂಡನೆಯಾದ ವರದಿಯಲ್ಲಿ ತಿಳಿಸಲಾಗಿದೆ. 2015ರ ಹೊತ್ತಿಗೆ, ಹೊಸ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಜನಗಣತಿ ಎಂದೂ ಕರೆಯಲ್ಪಡುವ) ಪ್ರಕಾರ, ಅದರ ಪಾಲು ಶೇ. 11ಕ್ಕೆ ಇಳಿದಿದೆ.

ಸರ್ವೇಯಲ್ಲಿ ಲಿಂಗಾಯತರಿಗೆ ಮೂರನೇ ಸ್ಥಾನ ನೀಡಿ ಮುಸ್ಲಿಮರಿಗೆ 2ನೇ ಸ್ಥಾನ, ಪರಿಶಿಷ್ಟ ಜಾತಿಗಳು ಅತಿದೊಡ್ಡ ವರ್ಗ ಎಂದು ವರದಿ ನೀಡಿದ್ದಾರೆ. ಆದರೆ ಈಗ ಉಳಿದ ಸಮುದಾಯಗಳು ನಿಧಾನಗತಿಯಲ್ಲಿ ಏರಿಕೆ ಕಂಡಿದ್ದರೂ, ಮುಸ್ಲಿಮರ ಜನಸಂಖ್ಯೆ ಏಕಾಏಕಿ 30 ವರ್ಷದಲ್ಲಿ ಶೇಕಡಾ 94ರಷ್ಟು ಬೆಳವಣಿಗೆ ಆಗಿದ್ಹೇಗೆ ಎಂದು ವಿಪಕ್ಷಗಳು ಪ್ರಶ್ನಿಸುತ್ತಿವೆ.

ವೆಂಕಟಸ್ವಾಮಿ ಆಯೋಗವು 1984 ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಿತು, ಇದು ರಾಜ್ಯದ 3.61 ಕೋಟಿ ಜನಸಂಖ್ಯೆಯ 91% ರಷ್ಟನ್ನು ಒಳಗೊಂಡಿದೆ. 2015 ರ ಸಮೀಕ್ಷೆಯಲ್ಲಿ, ಪರಿಶಿಷ್ಟ ಜಾತಿಗಳು ಏಕೈಕ ಅತಿದೊಡ್ಡ ಸಮುದಾಯವಾಗಿದ್ದು, ನಂತರದ ಸ್ಥಾನದಲ್ಲಿ ಮುಸ್ಲಿಮರು ಇದ್ದಾರೆ. ವೀರಶೈವ-ಲಿಂಗಾಯತರು ಮೂರನೇ ಸ್ಥಾನ ಪಡೆದಿದ್ದು, ನಂತರದ ಸ್ಥಾನಗಳಲ್ಲಿ ಒಕ್ಕಲಿಗರು, ಕುರುಬರು ಮತ್ತು ಬ್ರಾಹ್ಮಣರು ಇದ್ದಾರೆ. ಈ ಅಂಕಿ ಅಂಶಗಳೇ ಇದರ ಸಂಶೋಧನೆಗಳು 'ಪ್ರಬಲ' ಸಮುದಾಯದ ನಾಯಕರನ್ನು ಬೆಚ್ಚಿಬೀಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT