ಅನುರಾಧ 
ರಾಜ್ಯ

ರಿಕಿ ರೈ ಹತ್ಯೆ ಯತ್ನ ಪ್ರಕರಣ: ಬಿಡದಿ ಪೊಲೀಸರ ಮುಂದೆ ಮುತ್ತಪ್ಪರೈ ಎರಡನೇ ಪತ್ನಿ ಅನುರಾಧ ಹೇಳಿಕೆ ದಾಖಲು

ಭಾನುವಾರ ಬೆಳಗ್ಗೆ 11 ಗಂಟೆಗೆ ಅನುರಾಧ ತನಿಖಾ ಅಧಿಕಾರಿ (ಐಒ) ಎದುರು ಸೂಕ್ತ ದಾಖಲೆಗಳೊಂದಿಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ನಾಲ್ಕು ಗಂಟೆಗೂ ಹೆಚ್ಚು ಕಾಲ ಆಕೆಯನ್ನು ವಿಚಾರಣೆ ನಡೆಸಿದರು.

ಬೆಂಗಳೂರು: ಮುತ್ತಪ್ಪ ರೈ ಪುತ್ರ ರಿಕಿ ರೈ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಾನ್ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ ಬಿಡದಿ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಬಿಡದಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಅನುರಾಧ ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ. ಏಪ್ರಿಲ್ 19 ರಂದು ಬೆಂಗಳೂರಿನ ಹೊರವಲಯದ ಬಿಡದಿಯಲ್ಲಿ ಕಾರಿನ ಮೇಲೆ ಗುಂಡು ಹಾರಿಸಿದ ನಂತರ 35 ವರ್ಷದ ರಿಕಿ ಅಪಾಯದಿಂದ ಪಾರಾಗಿದ್ದಾರೆ.

ಭಾನುವಾರ ಬೆಳಗ್ಗೆ 11 ಗಂಟೆಗೆ ಅನುರಾಧ ತನಿಖಾ ಅಧಿಕಾರಿ (ಐಒ) ಎದುರು ಸೂಕ್ತ ದಾಖಲೆಗಳೊಂದಿಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ನಾಲ್ಕು ಗಂಟೆಗೂ ಹೆಚ್ಚು ಕಾಲ ಆಕೆಯನ್ನು ವಿಚಾರಣೆ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅನುರಾಧ, "ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ಆದರೂ, ನನ್ನ ವಿರುದ್ಧ ಏಕೆ ದೂರು ದಾಖಲಿಸಲಾಗಿದೆ ಎಂದು ನನಗೆ ತಿಳಿದಿಲ್ಲ, ವಿಚಾರಣೆಯ ಸಮಯದಲ್ಲಿ ನಾನು ಪೊಲೀಸರಿಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸಿದ್ದೇನೆ" ಎಂದು ಹೇಳಿದರು.

ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ರಿಕಿ ಮತ್ತು ತನ್ನ ನಡುವಿನ ಭೂ ವಿವಾದ ಪ್ರಕರಣವನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಕೋರ್ಟ್ ಗೆ ಪತ್ರಗಳಿಗೆ ಸಹಿ ಹಾಕಲು ಬಂದಾಗ ನಾನು ರಿಕಿಯನ್ನು ನೋಡಿದೆ. ಅಂದಿನಿಂದ, ನಾನು ಅವನೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

ಸದ್ಯ, ಘಟನೆಗೆ ಸಂಬಂಧಿಸಿದಂತೆ ರಿಕಿ ಜೊತೆ ಕೆಲಸ ಮಾಡುತ್ತಿದ್ದ ವಿಟ್ಟಲ್ ಮೋನಪ್ಪನನ್ನು ಬಂಧಿಸಲಾಗಿದೆ. ಅಪರಾಧದಲ್ಲಿ ಬೇರೆಯವರ ಪಾಲ್ಗೊಳ್ಳುವಿಕೆ ಮತ್ತು ಹತ್ಯೆ ಯತ್ನದ ಹಿಂದಿನ ಉದ್ದೇಶ ಏನು ಎಂಬುದನ್ನು ತಿಳಿದುಕೊಳ್ಳಲು ತನಿಖೆ ನಡೆಯುತ್ತಿದೆ.

ಮುತ್ತಪ್ಪ ರೈ ಮೊದಲ ಪತ್ನಿ ರೇಖಾ ರೈ ಅವರು 2013 ರಲ್ಲಿ ನಿಧನರಾದರು. ನಂತರ ರೈ ಅವರು ಅನುರಾಧ ಅವರನ್ನು ವಿವಾಹವಾದರು. 2020 ರಲ್ಲಿ ರೈ ನಿಧನರಾದ ನಂತರ, ರೈ ಅವರ ಮಕ್ಕಳು ಮತ್ತು ಅನುರಾಧ ಅವರ ನಡುವೆ ಆಸ್ತಿ ವಿವಾದ ಉಂಟಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯಾದ್ಯಂತ ವೈಕುಂಠ ಏಕಾದಶಿ ಸಂಭ್ರಮ: ತಿಮ್ಮಪ್ಪನ ದರ್ಶನಕ್ಕೆ ದೇವಸ್ಥಾನಗಳಲ್ಲಿ ಭಕ್ತ ಸಾಗರ; ಹಲವೆಡೆ ವಾಹನ ಸಂಚಾರ ನಿರ್ಬಂಧ

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದ ಖಲೀದಾ ಜಿಯಾ ನಿಧನ

ನಮಗೆ ಶಕ್ತಿ ಇಲ್ಲ ಅದಕ್ಕೆ NDA ಜತೆ ಹೋಗಿದ್ದೀವಿ. ನೀವ್ಯಾಕೆ ಸ್ಟಾಲಿನ್‌ ಮನೆ ಬಾಗಿಲು ಬಡಿತೀರಾ?

P.Gಯಲ್ಲಿ LPG ಸಿಲಿಂಡರ್ ಸ್ಫೋಟ: ಓರ್ವ ಯುವಕ ಸಾವು, ಮೂವರಿಗೆ ಗಾಯ

ನಮ್ಮತ್ತ ಎಷ್ಟೇ ಬೆರಳು ತೋರಿದರೂ, ಅಲ್ಪಸಂಖ್ಯಾತರ ಮೇಲೆ ನಿಮ್ಮ ದೌರ್ಜನ್ಯ ಮುಚ್ಚಿಡಲು ಸಾಧ್ಯವಿಲ್ಲ- ಪಾಕ್ ಗೆ ಭಾರತದ ತಿರುಗೇಟು!

SCROLL FOR NEXT