ಜಾರಿ ನಿರ್ದೇಶನಾಲಯ 
ರಾಜ್ಯ

ವಂಚನೆ ಪ್ರಕರಣ: ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಕಂಪನಿ ಮೇಲೆ ಇ.ಡಿ ದಾಳಿ; ಮುಂಬೈನಲ್ಲೂ ಶೋಧ

ಕಂಪನಿಯು ಯೋಜನೆಯನ್ನು ಹಸ್ತಾಂತರಿಸುವಲ್ಲಿ 'ವಿಫಲವಾಗಿದೆ' ಮತ್ತು ಖರೀದಿದಾರರಿಗೆ ಹಣವನ್ನು ಹಿಂದಿರುಗಿಸಿಲ್ಲ ಎಂದು ಆರೋಪಿಸಲಾಗಿದೆ.

ಬೆಂಗಳೂರು: ಫ್ಲಾಟ್‌ಗಳನ್ನು ಮಾರಾಟ ಮಾಡುವ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಯನ್ನು ಮನೆ ಖರೀದಿದಾರರಿಗೆ ವಂಚಿಸಿದ ಆರೋಪ ಹೊತ್ತಿರುವ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಕಂಪನಿ ಮೇಲೆ ಜಾರಿ ನಿರ್ದೇಶನಾಲಯ ಶುಕ್ರವಾರ ದಾಳಿ ನಡೆಸಿದ್ದು, ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬೆಂಗಳೂರು ಮತ್ತು ಮುಂಬೈನಲ್ಲಿ ಓಝೋನ್ ಅರ್ಬಾನಾ ಡೆವಲಪರ್ಸ್ ಪ್ರೈ.ಲಿ.ಗೆ ಸೇರಿದ ಕನಿಷ್ಠ ಹತ್ತು ಆವರಣಗಳು ಮತ್ತು ಅದರ ಪ್ರಮುಖ ನಿರ್ವಹಣಾ ಸಿಬ್ಬಂದಿ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸತ್ಯಮೂರ್ತಿ ವಾಸುದೇವನ್ ಈ ಗುಂಪಿನ ಪ್ರಮೋಟರ್ ಆಗಿದ್ದಾರೆ.

ಬೆಂಗಳೂರಿನ ದೇವನಹಳ್ಳಿ ತಾಲ್ಲೂಕಿನಲ್ಲಿರುವ ಓಝೋನ್ ಅರ್ಬಾನ ಎಂಬ ಕಂಪನಿ ಮತ್ತು ಅದರ ಪ್ರಮೋಟರ್ಸ್ ವಿರುದ್ಧ ದಾಖಲಾಗಿರುವ ಹಲವಾರು ಪೊಲೀಸ್ ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದೆ.

ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆಯನ್ನು 2018 ರಲ್ಲಿ ಖರೀದಿದಾರರಿಗೆ ಹಸ್ತಾಂತರಿಸಬೇಕಿತ್ತು. ಆದರೆ, 2024 ರವರೆಗೆ ಯೋಜನೆಯು ಕೇವಲ ಶೇ 49 ರಷ್ಟು ಮಾತ್ರ ಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಕಂಪನಿಯು ಯೋಜನೆಯನ್ನು ಹಸ್ತಾಂತರಿಸುವಲ್ಲಿ 'ವಿಫಲವಾಗಿದೆ' ಮತ್ತು ಖರೀದಿದಾರರಿಗೆ ಹಣವನ್ನು ಹಿಂದಿರುಗಿಸಿಲ್ಲ ಎಂದು ಆರೋಪಿಸಲಾಗಿದೆ.

ಆರೋಪಿ ಕಂಪನಿ ಮತ್ತು ಅದರ ಪ್ರಮುಖ ನಿರ್ವಹಣಾ ಸಿಬ್ಬಂದಿ, ಯೋಜನೆ ಪೂರ್ಣಗೊಳ್ಳುವವರೆಗೆ ಮನೆ ಖರೀದಿದಾರರ ಬ್ಯಾಂಕ್ ಇಎಂಐ (ಮನೆ ಖರೀದಿಗೆ ತೆಗೆದುಕೊಂಡ) ಅನ್ನು ತಾನೇ ಪಾವತಿಸುವುದಾಗಿ ಭರವಸೆ ನೀಡುವ ಮೂಲಕ 'ವಂಚಿಸಿದ್ದಾರೆ' ಎಂದು ಆರೋಪಿಸಲಾಗಿದೆ.

ಬುಕಿಂಗ್ ಮಾಡುವಾಗ ಪೂರ್ಣ ಮೊತ್ತವನ್ನು ಮುಂಗಡವಾಗಿ ಪಾವತಿಸಿದರೆ ಭಾರಿ ರಿಯಾಯಿತಿ ನೀಡಲಾಗುವುದು ಎಂದು ಕಂಪನಿಯು ಅನೇಕ ಖರೀದಿದಾರರಿಗೆ ಭರವಸೆ ನೀಡಿತು ಮತ್ತು ಅದು ಅವರನ್ನು "ಮರುಖರೀದಿ ಯೋಜನೆ"ಯೊಂದಿಗೆ ಆಕರ್ಷಿಸಿತು ಎಂದು ಆರೋಪಿಸಲಾಗಿದೆ.

ಕಂಪನಿಯ ನಿರ್ದೇಶಕರು ಅದರ ಖರೀದಿದಾರರಿಗೆ ಸಾಮೂಹಿಕವಾಗಿ ನೂರಾರು ಕೋಟಿಗಳಷ್ಟು ವಂಚಿಸಿದ್ದಾರೆ ಮತ್ತು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ED ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT