ಜ್ಯೋತಿ ಕಣಬೂರಮಠ - ರಿಷಭ್ ಪಂತ್ 
ರಾಜ್ಯ

ಬಾಗಲಕೋಟೆ: ವಿದ್ಯಾಭ್ಯಾಸ ಮುಂದುವರಿಸಲು ಕ್ರಿಕೆಟಿಗ ರಿಷಭ್ ಪಂತ್ ಆರ್ಥಿಕ ಸಹಾಯ; ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿನಿ!

ದೂರದ ಹಳ್ಳಿಯೊಂದರ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ನೆರವು ನೀಡುವ ಮೂಲಕ ಪಂತ್ ಈಗ ಎಲ್ಲರ ಹೃದಯ ಗೆದ್ದಿದ್ದಾರೆ.

ಬಾಗಲಕೋಟೆ: ಟೀಂ ಇಂಡಿಯಾದ ಕ್ರಿಕೆಟಿಗ ರಿಷಭ್ ಪಂತ್ ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿನ ಉತ್ತಮ ಪ್ರದರ್ಶನಕ್ಕಾಗಿ ಮೆಚ್ಚುಗೆ ಪಡೆದಿದ್ದಾರೆ. ಈ ಬೆನ್ನಲ್ಲೇ ಅವರೀಗ ಮತ್ತೊಂದು ಉತ್ತಮ ಕಾರ್ಯ ಮಾಡಿರುವುದು ಬೆಳಕಿಗೆ ಬಂದಿದೆ. ಪಂತ್ ಅವರಿಂದ ಆರ್ಥಿಕ ನೆರವು ಪಡೆದಿದ್ದರಿಂದಲೇ ಜಮಖಂಡಿ ಪಟ್ಟಣದ ಖಾಸಗಿ ಕಾಲೇಜಿನಲ್ಲಿ ಬಿಸಿಎ ಓದಲು ಸಾಧ್ಯವಾಗಿದೆ ಎಂದು ಜ್ಯೋತಿ ಕಣಬೂರಮಠ ಹರ್ಷಗೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ರಬಕವಿ ಗ್ರಾಮದ ನಿವಾಸಿ ಜ್ಯೋತಿ, ಪಿಯುನಲ್ಲಿ ಶೇ 83 ರಷ್ಟು ಅಂಕಗಳನ್ನು ಪಡೆದಿದ್ದರೂ, ತನ್ನ ವ್ಯಾಸಂಗವನ್ನು ಮುಂದುವರಿಸಲು ಹಣದ ಕೊರತೆ ಎದುರಿಸುತ್ತಿದ್ದರು. ಜ್ಯೋತಿ ತಂದೆ ತೀರ್ಥಯ್ಯ ಹಳ್ಳಿಯಲ್ಲಿ ಸಣ್ಣ ಚಹಾ ಅಂಗಡಿ ನಡೆಸುತ್ತಿದ್ದು, ಅದರಿಂದ ಕಾಲೇಜು ಶುಲ್ಕವನ್ನು ಭರಿಸುವುದು ಅಸಾಧ್ಯವಾಗಿತ್ತು.

ಆಕೆಯ ಬಲವಾದ ಇಚ್ಛಾಶಕ್ತಿ ಮತ್ತು ತನ್ನ ವ್ಯಾಸಂಗವನ್ನು ಮುಂದುವರಿಸುವ ತುರ್ತು ಅನಿಲ್ ಹುಣಶಿಕಟ್ಟಿ ಎಂಬ ಸ್ಥಳೀಯ ಗುತ್ತಿಗೆದಾರರನ್ನು ಸಂಪರ್ಕಿಸಲು ಕಾರಣವಾಯಿತು. ಕಾಲೇಜಿನ ಆಡಳಿತ ಮಂಡಳಿಯಲ್ಲಿ ಆತನ ಸಂಬಂಧಿಕರು ಕೆಲಸ ಮಾಡುತ್ತಿದ್ದರಿಂದ ಬೆಂಬಲ ಅಥವಾ ಪ್ರವೇಶ ಪಡೆಯಲು ಅವರು ಸಹಾಯ ಮಾಡಬಹುದೆಂದು ಆಕೆ ಆಶಿಸಿದ್ದಳು.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಅವರು, ಆಗ ನನಗೆ ಖ್ಯಾತ ಕ್ರಿಕೆಟಿಗ ರಿಷಭ್ ಪಂತ್ ಅವರಿಂದ ಸಹಾಯ ಪಡೆಯುವ ಆಲೋಚನೆ ಹುಟ್ಟಿಕೊಂಡಿತು. ನನ್ನ ಸಹಪಾಠಿಗಳಲ್ಲಿ ಒಬ್ಬರು ಪಂತ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ನನ್ನ ಸ್ನೇಹಿತ ಕೂಡ ಹಿಂದೆ, ಮತ್ತೊಂದು ವಿದ್ಯಾರ್ಥಿಗಾಗಿ ಕ್ರಿಕೆಟರ್ ಕೆಎಲ್ ರಾಹುಲ್ ಅವರಿಂದ ಆರ್ಥಿಕ ಸಹಾಯ ಪಡೆದಿದ್ದನೆಂದು ನನಗೆ ತಿಳಿದಿತ್ತು. ಪಂತ್ ಅವರ ವ್ಯಾನೇಜರ್ ಆಗಿರುವ ನನ್ನ ಸ್ನೇಹಿತನಿಗೆ ರಾಹುಲ್ ಸಹ ಗೊತ್ತು. ಇದು ನನ್ನ ಸ್ನೇಹಿತನ ಮೂಲಕ ಕ್ರಿಕೆಟಿಗನಿಂದ ಸಹಾಯ ಪಡೆಯಲು ನನ್ನನ್ನು ಪ್ರೋತ್ಸಾಹಿಸಿತು' ಎಂದು ಅವರು ಹೇಳಿದರು.

ಹುಣಶಿಕಟ್ಟಿ ಹೇಳುವಂತೆ, ವಿದ್ಯಾರ್ಥಿನಿಯ ವಿವರಗಳನ್ನು ತನ್ನ ಸ್ನೇಹಿತನೊಂದಿಗೆ ಹಂಚಿಕೊಂಡೆ ಮತ್ತು ಆತ ಪಂತ್ ಅವರಿಗೆ ಈ ಸಂದೇಶವನ್ನು ತಿಳಿಸಿದರು. ನಂತರ, ಪಂತ್ ಅವರ ಕಚೇರಿಯು ಕಾಲೇಜಿನ ಖಾತೆ ವಿವರಗಳನ್ನು ಸಂಗ್ರಹಿಸಿ ಜ್ಯೋತಿ ಪರವಾಗಿ ನೇರವಾಗಿ 40,000 ರೂ.ಗಳನ್ನು ಖಾತೆಗೆ ಜಮಾ ಮಾಡಿತು ಎಂದರು.

ದೂರದ ಹಳ್ಳಿಯೊಂದರ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ನೆರವು ನೀಡುವ ಮೂಲಕ ಪಂತ್ ಈಗ ಎಲ್ಲರ ಹೃದಯ ಗೆದ್ದಿದ್ದಾರೆ.

ಈ ಉದಾರ ಕಾರ್ಯವು ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ಗಳಿಸಿದೆ. ಪಂತ್ ಅವರ ಸಹಾನುಭೂತಿ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಅನೇಕರು ಶ್ಲಾಘಿಸಿದ್ದಾರೆ. ಯಾವುದೇ ಪ್ರಚಾರವಿಲ್ಲದೆ ಅವರು ನೀಡಿದ ಬೆಂಬಲವು ಇತರರಿಗೆ ಮಾದರಿಯಾಗಿದೆ.

'ರಿಷಭ್ ಪಂತ್ ಅವರ ಸಕಾಲಿಕ ಸಹಾಯಕ್ಕಾಗಿ ನಾನು ಅವರಿಗೆ ಶಾಶ್ವತವಾಗಿ ಕೃತಜ್ಞಳಾಗಿರುತ್ತೇನೆ. ಇದು ನನಗೆ ಅಪಾರವಾಗಿ ಸಹಾಯ ಮಾಡಿದೆ' ಎಂದು ಜ್ಯೋತಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT