ಬೆಂಗಳೂರು: ಬಹು ನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಸಜ್ಜಾಗಿರುವಂತೆಯೇ ಇದರ ಕ್ರೆಡಿಟ್ ವಿಚಾರದಲ್ಲಿ ಇದೀಗ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನಡುವೆ ಜಟಾಪಟಿ ಶುರುವಾಗಿದೆ.
ಮಂಗಳವಾರ ಹಳದಿ ಮಾರ್ಗದಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಇದು ಕೇವಲ ಕೇಂದ್ರ ಸರ್ಕಾರದ ಯೋಜನೆಯಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಶೇ.50 ರಷ್ಟು ಪಾಲನ್ನು ಹೊಂದಿವೆ. ಮುಖ್ಯಮಂತ್ರಿಯವರು ಹಾಗೂ ನಾನು ಉದ್ಘಾಟನೆ ಮಾಡಿ ಎಂದು ಪ್ರಧಾನಿಗಳ ಬಳಿ ಮನವಿ ಮಾಡಿದ್ದೆವು. ಈಗ ಸಮಯ ನೀಡಿದ್ದಾರೆ ಎಂದು ಹೇಳಿದ್ದರು.
ಈ ನಡುವೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರಿನ ಮೆಟ್ರೋ connectivity 100 ಕಿ.ಮೀ ಆಗಿದೆ. ಮೋದಿ ಪ್ರಧಾನಿ ಆಗುವ ಮುನ್ನ 7 ಕಿ.ಮೀ ಇತ್ತು. ಕಳೆದ ಎರಡೂವರೆ ವರ್ಷದಲ್ಲಿ ಈ ಸರ್ಕಾರ ಹಳದಿ ಮೆಟ್ರೋ ಮಾರ್ಗದ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ಹೇಳಿದರು.
2018ರಲ್ಲಿ ಹಳದಿ ಮಾರ್ಗದ ಯೋಜನೆ ಪ್ರಾರಂಭವಾಯಿತು. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ತೊಂದರೆ ಆಯ್ತು. ಆದ್ರೆ ಆಗ ರಾಜ್ಯ ಸರ್ಕಾರ ಸಹಾಯಕ್ಕೆ ಬರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ BMRCL ಗೆ ಪೂರ್ಣವಧಿಯ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಿರಲಲ್ಲ. ವೀಸಾ ಸಮಸ್ಯೆ ಆಯ್ತು ಇವ್ರು ಯಾರೂ ಒಂದು ದಿನವೂ ಮಾತನಾಡಿಲ್ಲ. ಕ್ರಿಕೆಟ್ ಮ್ಯಾಚ್ credit ತಗೋಳೋಕೆ ಮುಂದಾಗೋರು ಈಗ ಮೆಟ್ರೋ ಕ್ರೆಡಿಟ್ ತಗೋಳೋಕೆ ಬರದೇ ಇರ್ತಾರ? ಎಂದು ಟೀಕಾ ಪ್ರಹಾರ ನಡೆಸಿದರು.
ಮೋದಿ ಯವರು ತಕ್ಷಣಕ್ಕೆ ಸಮಯ ಕೊಟ್ರು.. ಆಗಸ್ಟ್ 10 ಕ್ಕೆ ಬರ್ತೀನಿ ಅಂತಾ ಹೇಳಿದ್ದಾರೆ. ಜನ ಸಾಮಾನ್ಯರಿಗೆ ಬೇಕಾಗಿರೋದು ಮೆಟ್ರೋ.. ಇವರೀಗಲ್ಲ ಎಂದು ತಿರುಗೇಟು ನೀಡಿದರು.
2 ಕಿ.ಮೀ ಉದ್ದದ ಈಜಿಪುರ fly over ಮಾಡೋಕೆ 8.5 ವರ್ಷ ಬೇಕಾಯ್ತು.ಹಳದಿ ಮಾರ್ಗ ಶಂಕುಸ್ಥಾಪನೆ ಮಾಡಿದ್ದು,ಮೋದಿ.. ಉದ್ಘಾಟನೆ ಮಾಡ್ತಿರೋದು ಮೋದಿ ನೇ. ಜೆಪಿ ನಗರದ vega ಸಿಟಿಯಿಂದ ಕಡಬಗೆರೆಯ ಮೂರನೇ ಹಂತದ ಮೆಟ್ರೋಗೂ ಪ್ರಧಾನಿ ಚಾಲನೆ ಕೊಡಲಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಹಳ ದಿನಗಳ ಕನಸಾಗಿದ್ದ ಬೆಂಗಳೂರು ಹಳದಿ ಮಾರ್ಗ ಲೈನ್ ನನಸು ಆಗುತ್ತಿದೆ. ಆಗಸ್ಟ್ 10 ರಂದು ಮೋದಿ ಬೆಂಗಳೂರಿಗೆ ಬರ್ತಿದ್ದಾರೆ. ಹಳದಿ ಮಾರ್ಗ ಲೋಕಾರ್ಪಣೆ ಆಗಲಿದೆ. ಇದರಿಂದ ಕನಿಷ್ಠ 8 ಲಕ್ಷ ಜನರಿಗೆ ಅನುಕೂಲವಾಗಲಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ಉದ್ಘಾಟನೆ ಕೂಡಾ ಆ ದಿನ ಇರುತ್ತೆ ಎಂದು ತಿಳಿಸಿದರು.