ಕೆಎನ್ ರಾಜಣ್ಣ 
ರಾಜ್ಯ

ನಮ್ಮ ಸರ್ಕಾರ ಇದ್ದಾಗಲೇ ಮತದಾರರ ಪಟ್ಟಿ ಮಾಡಿದ್ದು, ಆಗೇನು ಕಣ್ಮುಚ್ಚಿ ಕುಳಿತಿದ್ರಾ?: KN Rajanna

ಇದನ್ನೆಲ್ಲಾ ಮಾತನಾಡೋಕೆ ಹೋದ್ರೆ ಏನೇನೋ ಆಗುತ್ತೆ. ವೋಟರ್ ಲಿಸ್ಟ್ ಎಲ್ಲಾ ಯಾವ ಕಾಲದಲ್ಲಿ ಮಾಡಿದ್ದು? ನಮ್ಮದೇ ಸರ್ಕಾರ ಇರುವಾಗ ಮಾಡಿರೋದು ಅಲ್ವಾ?..

ತುಮಕೂರು: ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವ 'ಮತ ಕಳ್ಳತನ' ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಹಕಾರ ಸಚಿವ ಕೆಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದು, 'ನಮ್ಮ ಸರ್ಕಾರ ಇದ್ದಾಗಲೇ Voter List ಮಾಡಿದ್ದು, ಆಗೇನು ಕಣ್ಮುಚ್ಚಿ ಕುಳಿತಿದ್ರಾ?' ಎಂದು ಪ್ರಶ್ನಿಸಿದ್ದಾರೆ.

ತುಮಕೂರಿನಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೆಎನ್ ರಾಜಣ್ಣ, 'ಮತಗಳ್ಳತನ (Vote Theft) ಎಂದು ನಾವು ಹೇಳುತಿದ್ದೇವೆ. ಇದು ನಡೆದಿರೋದು ನಿಜ. ಆದರೆ ನಾವು ಮೊದಲು ನೋಡಿಕೊಳ್ಳದೇ ಈಗ ಹೇಳುತ್ತಿರೋದು ನಮಗೆ ನಾಚಿಕೆ ಆಗಬೇಕು. ನಮ್ಮದೇ ಸರ್ಕಾರ ಇದ್ದಾಗ ವೋಟರ್ ಲಿಸ್ಟ್ ಮಾಡಿದ್ದು, ಆಗೇನು ಕಣ್ಮುಚ್ಚಿ ಕುಳಿತಿದ್ರಾ ಎಂದು ತಮ್ಮದೇ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.

'ಇದನ್ನೆಲ್ಲಾ ಮಾತನಾಡೋಕೆ ಹೋದ್ರೆ ಏನೇನೋ ಆಗುತ್ತೆ. ವೋಟರ್ ಲಿಸ್ಟ್ ಎಲ್ಲಾ ಯಾವ ಕಾಲದಲ್ಲಿ ಮಾಡಿದ್ದು? ನಮ್ಮದೇ ಸರ್ಕಾರ ಇರುವಾಗ ಮಾಡಿರೋದು ಅಲ್ವಾ? ಆವಾಗ ಎಲ್ಲಾ ಕಣ್ಮುಚ್ಚಿ ಕುಳಿತಿದ್ರಾ?. ಈ ಅಕ್ರಮಗಳು ನಡೆದಿರೋ ಸತ್ಯ. ಇದರಲ್ಲಿ ಯಾವುದೇ ಸುಳ್ಳು ಏನಿಲ್ಲ. ಅಕ್ರಮಗಳು ನಮ್ಮ ಕಣ್ಮುಂದೆನೆ ನಡೆದಿದ್ದವಲ್ಲಾ ನಮಗೆ ಅವಮಾನ ಆಗಬೇಕು. ನಾವು ನೋಡಿಕೊಳ್ಳಲಿಲ್ಲವಲ್ಲ ಎಂದು ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ, ಈ ಘಟನೆಗಳಿಂದ ನಾವು ಪಾಠ ಕಲಿತು ಎಚ್ಚರಿಕೆಯಿಂದ ನಡೆಯಬೇಕು ಎಂದು ಹೇಳಿದ ರಾಜಣ್ಣ, 'ಅವರು ಮಾಡಬಾರದ್ದನ್ನ ಮಾಡಿ ವೋಟರ್ ಲಿಸ್ಟ್ (Voter List) ಬದಲಾವಣೆ ಮಾಡಿ ಪ್ರಧಾನ ಮಂತ್ರಿ ಆಗಿದ್ದಾರೆ. ಅದು ನೂರಕ್ಕೆ ನೂರು ಸತ್ಯ. ಆದರೆ ನಮಗೆ ಡ್ರಾಫ್ಟ್ ಎಲೆಕ್ಷನ್ ಕಮಿಷನ್ ನಿಂದ ರೋಲ್ ಮಾಡುವಾಗ ನೋಡಿಕೊಳ್ಳಬೇಕಾ? ಮಹದೇವಪುರದಲ್ಲಂತು ಮೋಸ ಮಾಡಿರೋದು ನಿಜ.

ಒಬ್ಬನೇ ಮೂರು ಮೂರು ಕಡೆಗಳಲ್ಲಿ ವೋಟರ್ ಲಿಸ್ಟ್ ಸೇರಿಕೊಂಡು ವೋಟ್ ಹಾಕಿದ್ರೆ. 10, 15 ಜನ ಇರೋ ಕಡೆಗಳಲ್ಲಿ 60 ಜನ ವೋಟರ್ ಲಿಸ್ಟ್‌ಗೆ ಸೇರಿಸ್ತಾರೆ. ಅಡ್ರೆಸ್ ಗಳಿಲ್ಲ.. ತಂದೆ ಹೆಸರಿಲ್ಲ. ಈತರದ್ದನ್ನೆಲ್ಲಾ ಅಕ್ರಮವಾಗಿ ಮಾಡಿದ್ದಾರೆ. ಆದರೆ ನಾವು ಡ್ರಾಫ್ಟ್ ಎಲೆಕ್ಟ್ರಾನೊ ರೋಲ್ ಮಾಡಿದಾಗ ನಾವು ಅಬ್ಜಕ್ಷನ್ ಹಾಕಬೇಕಿತ್ತು ಎಂದು ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಉಸ್ತುವಾರಿ ಸಿಎಂ ತೀರ್ಮಾನ

ಅಂತೆಯೇ ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, 'ಅದು ಸಿಎಂ ಅವರಿಗೆ ಬಿಟ್ಟ ವಿಚಾರ. ಬದಲಾವಣೆ ಮಾಡುವಂತಹದ್ದು, ಯಾರನ್ನ ಎಲ್ಲಿಗೆ ಹಾಕಬೇಕು ಅನ್ನೋ ತಿರ್ಮಾನ ಮಾಡಿದ್ದಾರೆ. ಆ ತಿರ್ಮಾನದಿಂದ ನನಗೆ ತುಂಬಾ ಸಂತೋಷ ಆಗಿದೆ. ರಾಜಕೀಯ ಯಾರಿಗೂ ಶಾಶ್ವತವಲ್ಲ. ಬೇಕು ಬೇಡ ಪ್ರಶ್ನೆ ಅಲ್ಲ ಸಂದರ್ಭೋಜಿತವಾಗಿ ಒಳ್ಳೆಯ ಸಮಯದಲ್ಲಿ ಮುಖ್ಯಮಂತ್ರಿಗಳು ನಿರ್ಧಾರ ತಗೊಂಡಿದ್ದಾರೆ. ಎರಡು ತಿಂಗಳ ಮುಂಚೆನೆ ನಾನೇ ಮನವಿ ಮಾಡಿದ್ದೆ. ಆ ಮನವಿಯನ್ನ ಪುರಸ್ಕಾರ ಮಾಡಿದ್ದಾರೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Women's World cup 2025: ಪಾಕಿಸ್ತಾನ ವಿರುದ್ಧ ಭಾರತ 88 ರನ್ ಗೆಲುವು

West Bengal: ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆ; ಭೂಕುಸಿತದಲ್ಲಿ ಮಕ್ಕಳು ಸೇರಿ ಕನಿಷ್ಠ 20 ಮಂದಿ ಸಾವು

ರಿಷಬ್ ಶೆಟ್ಟಿ ದೃಶ್ಯಕಾವ್ಯಕ್ಕೆ ಬಹುಪರಾಕ್: 4ನೇ ದಿನಕ್ಕೆ ಜಗತ್ತಿನಾದ್ಯಂತ 300 ಕೋಟಿ ರೂ ಕಲೆಕ್ಷನ್; ದಾಖಲೆ ಬರೆದ 'ಕಾಂತಾರ'!

India-Pakistan ಪಂದ್ಯದ ವೇಳೆ ಹೈಡ್ರಾಮಾ: ಮೊದಲು ನಾಟೌಟ್ ನಂತರ Out ಘೋಷಣೆ; 4ನೇ ಅಂಪೈರ್ ಜೊತೆ Pak ನಾಯಕಿ ವಾಗ್ವಾದ, Video

22 ವರ್ಷಗಳ ನಂತರ ಬಿಹಾರ ಮತದಾರರ ಪಟ್ಟಿ 'ಶುದ್ಧೀಕರಿಸಲಾಗಿದೆ'; ದೇಶಾದ್ಯಂತ ವಿಸ್ತರಣೆ: CEC

SCROLL FOR NEXT