ನ್ಯಾಯಬೆಲೆ ಅಂಗಡಿ  
ರಾಜ್ಯ

ನ್ಯಾಯಬೆಲೆ ಅಂಗಡಿಗಳಲ್ಲಿ ePoS ಸಾಧನ ಅಳವಡಿಕೆ: ಪಡಿತರ ಸಂಗ್ರಹ ಶೇ.6.6ರಷ್ಟು ಹೆಚ್ಚಳ

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿಯೂ 8 ಮಿಲಿಯನ್‌ಗಿಂತಲೂ ಹೆಚ್ಚು ಫಲಾನುಭವಿಗಳನ್ನು ಒಳಗೊಂಡ ಸಂಶೋಧನೆಯನ್ನು ನಡೆಸಲಾಗಿದೆ.

ಬೆಂಗಳೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಅಳವಡಿಸಲಾಗಿರುವ ಇ-ಪಿಒಎಸ್ (ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್) ಸಾಧನವು ಪಡಿತರ ಸಂಗ್ರಹವನ್ನು ಶೇ.6.6ರಷ್ಟು ಹೆಚ್ಚಳವಾಗುವಂತೆ ಮಾಡಿದೆ.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ನಡೆಸಿದ ಅಧ್ಯಯನದಿಂದ ಈ ಮಾಹಿತಿ ತಿಳಿದುಬಂದಿದೆ.

ಹತ್ತಿರದ ಯಾವುದೇ ಅಂಗಡಿಗಳಲ್ಲಿ ಪಡಿತರ ಸಂಗ್ರಹಿಸುವ ಅವಕಾಶ ನೀಡಲಾಗಿದ್ದು, ಜನರು ಎಲೆಕ್ಟ್ರಾನಿಕ್ ಪಾಯಿಂಟ್-ಆಫ್-ಸೇಲ್ (ಇ-ಪೋಸ್) ಸಾಧನದ ಮೂಲಕ ಯಾವ ಅಂಗಡಿ ತೆರೆದಿವೆ ಎಂಬ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ಸಾಧನ ಅಳವಡಿಕೆಯಿಂದ ಪಡಿತರ ಸಂಗ್ರವು ಶೇ.6.6ರಷ್ಟು ಹೆಚ್ಚಳವಾಗಿದೆ ಎಂದು ಅಧ್ಯಯವು ತಿಳಿಸಿದೆ.

ಈ ಹಿಂದೆ ಭಾರತದ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಸಾಮಾನ್ಯವಾಗಿ ತಮ್ಮ ಮಾಸಿಕ ಧಾನ್ಯ ಪಡಿತರಕ್ಕಾಗಿ ಕೇವಲ ಒಂದು ನ್ಯಾಯಯುತ ಬೆಲೆ ಅಂಗಡಿಗೆ (ಎಫ್‌ಪಿಎಸ್) ತೆರಳಬೇಕಿತ್ತು.

ಸಾಕಷ್ಟು ಸಂದರ್ಭದಲ್ಲಿ ಅಂಗಡಿಗಳು ಮುಚ್ಚಿರುವ, ಕೆಲವು ಅಂಗಡಿಯವರು ಜನರನ್ನು ನ್ಯಾಯಯುತವಾಗಿ ನಡೆಸಿಕೊಳ್ಳದ ಬೆಳವಣಿಗೆಗಳು ಕಂಡು ಬರುತ್ತಿದ್ದವು. ಪ್ರಸ್ತುತ ಪರಿಚಯಿಸಲಾಗಿರುವ ವ್ಯವಸ್ಥೆಯು ನಿಯೋಜಿಸಲಾದ ಅಂಗಡಿ ಚೆನ್ನಾಗಿ ಕೆಲಸ ಮಾಡದಿದ್ದರೆ, ಫಲಾನುಭವಿಗಳು ಅದನ್ನು ಸಹಿಸಿಕೊಳ್ಳುವುದು ಅಥವಾ ಪಡಿತರ ಸಂಗ್ರಹಿಸದೆ ಹೋಗುವ ಅಗತ್ಯವಿಲ್ಲ. ಬದಲಿಗೆ ಮತ್ತೊಂದು ಅಂಗಡಿಗೆ ತೆರಳುವ ಅವಕಾಶ ನೀಡಲಾಗುತ್ತದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿಯೂ 8 ಮಿಲಿಯನ್‌ಗಿಂತಲೂ ಹೆಚ್ಚು ಫಲಾನುಭವಿಗಳನ್ನು ಒಳಗೊಂಡ ಸಂಶೋಧನೆಯನ್ನು ನಡೆಸಲಾಗಿದೆ. ಈ ರಾಜ್ಯಗಳಲ್ಲಿ ಅದಾಗಲೇ ಇಪಿಒಎಸ್ ಸಾಧನಗಳನ್ನು ಅಳವಡಿಸಲಾಗಿರುವುದರಿಂದ ಅಲ್ಲಿ ಹೊಸ ವ್ಯವಸ್ಥೆಯ ಅಗತ್ಯತೆ ಕಂಡು ಬಂದಿಲ್ಲ. ಇಲ್ಲಿ ಪಡಿತರ ಸಂಗ್ರಹವು ನಾಲ್ಕು ಪಟ್ಟು ಹೆಚ್ಚಾಗಿರುವುದು ಅಧ್ಯಯನದಲ್ಲಿ ಕಂಡು ಬಂದಿದೆ.

ಹೊಸ ವ್ಯವಸ್ಥೆ ಅಳವಡಿಕೆಯಿಂದ ಅಂಗಡಿಯವರು ತಮ್ಮ ಸೇವೆಯನ್ನು ಸುಧಾರಿಸುವ ಮತ್ತು ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಪಡಿತರ ವಿತರಿಸುವ, ನಿಯಮಗಳನ್ನು ಅನುಸರಿಸುವಂತೆ ಪ್ರೇರೇಪಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾದಿಂದ ತೈಲ ಆಮದು: ಭಾರತದ ಮೇಲೆ ಶೇ.100 ರಷ್ಟು ಸುಂಕ ವಿಧಿಸಲು ಅಮೆರಿಕ ಸಂಸದರ ಪ್ರಸ್ತಾಪ!

'ತೀವ್ರ ಧ್ರುವೀಕರಣಗೊಂಡ ಜಗತ್ತು, ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಬ್ರಿಕ್ಸ್ ಶೃಂಗಸಭೆ ಯಶಸ್ವಿ-ಎಸ್ ಜೈಶಂಕರ್

ಶೇ. 20ರಷ್ಟು ಅಲ್ಪ ಸಂಖ್ಯಾತರು ಸಸ್ಯಾಹಾರಿಗಳು: ಬ್ರಿಕ್ಸ್ ಸಸ್ಯಾಹಾರಿ ಮೆನು ಸಂಬಂದ ಓವೈಸಿ ಪ್ರತಿಕ್ರಿಯೆ

ಸಮುದ್ರ ಅಡ್ಡವಿರದಿದ್ದರೆ ನೆಹರೂ- ಗಾಂಧಿ ಕುಟುಂಬ ಅರಬ್‌ ದೇಶಗಳಲ್ಲೂ ಚುನಾವಣೆಗೆ ನಿಲ್ತಿತ್ತು: ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್!

ಇನ್ಸ್ ಪೆಕ್ಟರ್ ಧನಂಜಯ್ ಧಮ್ಕಿಗೆ ಸೆಡ್ಡು: ಪೊಲೀಸ್ ಠಾಣೆಯ 200 ಮೀಟರ್ ಅಂತರದಲ್ಲೇ ಮಹಾಗಣಪತಿ ಪ್ರತಿಷ್ಠಾಪನೆ! ಶೋಭಾಯಾತ್ರೆಗೆ ಸಜ್ಜು