ಬಿಎಂಟಿಸಿ ಬಸ್ ಗಳು BMTC
ರಾಜ್ಯ

Namma Metro ಹಳದಿ ಮಾರ್ಗ ಉದ್ಘಾಟನೆ: ಆಗಸ್ಟ್ 11ರಿಂದ ಫೀಡರ್‌ ಬಸ್‌ಗಳ ಸಂಚಾರ ಆರಂಭ

ಹೊಸ ಬಸ್ ಸೇವೆಗಳು ಎಲೆಕ್ಟ್ರಾನಿಕ್‌ ಸಿಟಿಯಿಂದ ದೊಡ್ಡಕನ್ನಲ್ಲಿ ಬಸ್‌ ನಿಲ್ದಾಣ, ಕೋನಪ್ಪನ ಅಗ್ರಹಾರದಿಂದ ಚಂದಾಪುರ ವೃತ್ತ, ಬೊಮ್ಮಸಂದ್ರದಿಂದ ಹೆಬ್ಬಗೋಡಿ ಹಾಗೂ ಕೋನಪ್ಪನ ಅಗ್ರಹಾರದಿಂದ ಎಲೆಕ್ಟ್ರಾನಿಕ್‌ ಸಿಟಿ ಮಾರ್ಗಗಳಲ್ಲಿ ಸಂಚರಿಸಲಿವೆ.

ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಸುಧಾರಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಆಗಸ್ಟ್ 11 ರಿಂದ ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಪ್ರಾರಂಭಿಸುತ್ತಿದೆ.

ಹೊಸ ಬಸ್ ಸೇವೆಗಳು ಎಲೆಕ್ಟ್ರಾನಿಕ್‌ ಸಿಟಿಯಿಂದ ದೊಡ್ಡಕನ್ನಲ್ಲಿ ಬಸ್‌ ನಿಲ್ದಾಣ, ಕೋನಪ್ಪನ ಅಗ್ರಹಾರದಿಂದ ಚಂದಾಪುರ ವೃತ್ತ, ಬೊಮ್ಮಸಂದ್ರದಿಂದ ಹೆಬ್ಬಗೋಡಿ ಹಾಗೂ ಕೋನಪ್ಪನ ಅಗ್ರಹಾರದಿಂದ ಎಲೆಕ್ಟ್ರಾನಿಕ್‌ ಸಿಟಿ ಮಾರ್ಗಗಳಲ್ಲಿ ಸಂಚರಿಸಲಿವೆ.

ಎಲೆಕ್ಟ್ರಾನಿಕ್‌ ಸಿಟಿಯ ವಿಪ್ರೋ ಗೇಟ್‌ನಿಂದ ಬೆಳಗ್ಗೆ 8.20 ರಿಂದ ಸಂಜೆ 4.55ರವರೆಗೆ ನಾಲ್ಕು ಬಸ್‌ಗಳು 32 ಸುತ್ತುವಳಿಗಳಲ್ಲಿ ಕಾರ್ಯಾಚರಣೆಗೊಳ್ಳಲಿವೆ.

ಈ ಬಸ್‌ಗಳು ಎಲೆಕ್ಟ್ರಾನಿಕ್‌ ಸಿಟಿಯ ವಿಪ್ರೋ ಗೇಟ್‌ನಿಂದ ಕೋನಪ್ಪನ ಅಗ್ರಹಾರ, ಹೊಸ ರೋಡ್‌, ಕಸವನಹಳ್ಳಿ, ಕೈಕೊಂಡ್ರಹಳ್ಳಿ ಮಾರ್ಗದ ಮೂಲಕ ದೊಡ್ಡಕನ್ನಲ್ಲಿ ಬಸ್‌ ನಿಲ್ದಾಣ ತಲುಪಲಿವೆ. ಅದೇ ರೀತಿ ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್‌ ಸಿಟಿ, ಹುಸ್ಕೂರು ಗೇಟ್‌, ಚಿಂತಲ ಮಡಿವಾಳ, ಮುತ್ತಾನಲ್ಲೂರು ವೃತ್ತ, ತಿಮ್ಮಸಂದ್ರ ವೃತ್ತ, ಚಂದಾಪುರ ವೃತ್ತ ಮಾರ್ಗದಲ್ಲಿ ನಾಲ್ಕು ಬಸ್‌ಗಳು 20 ಸುತ್ತುವಳಿಗಳಲ್ಲಿ ಕಾರ್ಯಾಚರಣೆ ನಡೆಸಲಿವೆ.

ಎಲೆಕ್ಟ್ರಾನಿಕ್‌ ಸಿಟಿ ವಿಪ್ರೋ ಗೇಟ್‌ನಿಂದ ಹೊರಡುವ ಬಸ್‌ಗಳು ಬೆಳಗ್ಗೆ 8.40 ರಿಂದ ಸಂಜೆ 4.50ರವರೆಗೆ ಸಂಚರಿಸಲಿವೆ. ಕೊಡತಿ ವಿಪ್ರೋದಿಂದ ಹೊರಡುವ ಬಸ್‌ಗಳು ಬೆಳಗ್ಗೆ 8.05ಕ್ಕೆ ಕಾರ್ಯಾಚರಣೆ ಆರಂಭಿಸಿ, ಸಂಜೆ 5.35ಕ್ಕೆ ಕೊನೆಗೊಳಿಸಲಿವೆ. ಬೊಮ್ಮಸಂದ್ರ (ಚಕ್ರ ಮಾರ್ಗ)ದಿಂದ ತಿರುಪಾಳ್ಯ ವೃತ್ತ, ಎಸ್‌ ಮಾಂಡೋ-3, ಎಲೆಕ್ಟ್ರಾನಿಕ್ಸ್‌ ಸಿಟಿ ವಿಪ್ರೋ ಗೇಟ್‌, ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ಸ್‌ ಸಿಟಿ, ಹೆಬ್ಬಗೋಡಿಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ ಎರಡು ಬಸ್‌ಗಳು 20 ಟ್ರಿಪ್‌ಗಳ ಕಾರ್ಯಾಚರಣೆ ನಡೆಸಲಿವೆ. ಈ ಮಾರ್ಗದಲ್ಲಿ ಬೆಳಗ್ಗೆ 8.30ಕ್ಕೆ ಆರಂಭವಾಗುವ ಬಸ್‌ಗಳ ಸೇವೆ ಸಂಜೆ 6.5ಕ್ಕೆ ಮುಕ್ತಾಯಗೊಳ್ಳಲಿದೆ.

ಕೋನಪ್ಪನ ಅಗ್ರಹಾರ (ಚಕ್ರ ಮಾರ್ಗ)ದಿಂದ ಎಲೆಕ್ಟ್ರಾನಿಕ್‌ ಸಿಟಿ ವಿಪ್ರೋ ಗೇಟ್‌, ಎಸ್‌-ಮಾಂಡೋ-3, ತಿರುಪಾಳ್ಯ ಕ್ರಾಸ್‌, ಬೊಮ್ಮಸಂದ್ರ, ಹೆಬ್ಬಗೋಡಿ, ಎಲೆಕ್ಟ್ರಾನಿಕ್‌ ಸಿಟಿ ಮಾರ್ಗದ ಮೂಲಕ ಪುನಃ ಕೋನಪ್ಪನ ಅಗ್ರಹಾರ ಮಾರ್ಗದಲ್ಲಿ ಎರಡು ಬಸ್‌ಗಳು 20 ಸುತ್ತುವಳಿಗಳಲ್ಲಿ ಕಾರ್ಯಾಚರಿಸಲಿವೆ. ಈ ಮಾರ್ಗದಲ್ಲಿ ಬೆಳಗ್ಗೆ 8.25ರಿಂದ ಸಂಜೆ 6.05ವರೆಗೆ ಬಸ್‌ ಸೇವೆ ಇರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಧ್ಯ ಫಿಲಿಪೈನ್ಸ್ ಪ್ರದೇಶದಲ್ಲಿ ಪ್ರಬಲ ಭೂಕಂಪ: 31 ಮಂದಿ ಸಾವು

ಉಸಿರಾಟದ ಸಮಸ್ಯೆಯಿಂದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು

ಇಂದು ನಾಡಿನಾದ್ಯಂತ ಆಯುಧಪೂಜೆ, ಮಹಾನವಮಿ ಸಂಭ್ರಮ: ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರು

ರಾಜ್ಯದಲ್ಲಿ ಪ್ರವಾಹದಿಂದ ಬೆಳೆಹಾನಿ: ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿ 8,500 ರೂ ಪರಿಹಾರ- ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮಳೆ ಹಾನಿಯಿಂದ 52 ಮಂದಿ ಸಾವು; ವಾರಸುದಾರರಿಗೆ ಪರಿಹಾರ ವಿತರಣೆ: ಸಿಎಂ ಸಿದ್ದರಾಮಯ್ಯ

SCROLL FOR NEXT