ಚಾಮರಾಜನಗರ: ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಮುಂದಾದ ಪ್ರವಾಸಿಗನನ್ನು ಕಾಡಾನೆಯೊಂದು ಅಟ್ಟಾಡಿಸಿ ತುಳಿಯಲು ಯತ್ನಿಸಿದ ಘಟನೆ ಬಂಡೀಪುರದ ಕೆಕ್ಕನಹಳ್ಳ ಚೆಕ್‌ಪೋಸ್ಟ್ ನಡುವಿನ ಕಾಡಿನ ರಸ್ತೆಯಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಕೇರಳದ ಪ್ರವಾಸಿಗನೊಬ್ಬನ ಮೇಲೆ ಕಾಡು ಆನೆ ದಾಳಿ ನಡೆಸಿದೆ. ವಾಹನಗಳು ಮತ್ತು ಜನರಿಂದ ತುಂಬಿದ್ದ ರಸ್ತೆಯಲ್ಲಿ ನಿಂತಿದ್ದ ಆನೆ ನಿಂತಿದ್ದು, ಈ ವೇಳೆ ಪ್ರವಾಸಿಗ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದ್ದಾನೆ.
ಈ ವೇಳೆ ಆನೆ ಪ್ರವಾಸಿಗನನ್ನು ಓಡಿಸಿಕೊಂಡು ಹೋಗಿದ್ದು, ಕೆಲಕಾಲ ಅಟ್ಟಾಡಿಸಿದೆ. ಓಡುವ ವೇಳೆ ಪ್ರವಾಸಿಗ ಕಾಲು ಜಾರಿ ಬಿದ್ದಿದ್ದು, ಆನೆಯ ಕಾಲಿನ ಕೆಳಗೆ ಸಿಲುಕಿಕೊಂಡಿದ್ದಾನೆ. ಬಳಿಕ ಆನೆ ತುಳಿಯಲು ಯತ್ನಿಸಿ ಸ್ಥಳದಿಂದ ಹೊರಟು ಹೋಗಿದೆ. ಪರಿಣಾಮ ಅದೃಷ್ಟವಶಾತ್ ಪ್ರವಾಸಿಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೀಡಿಯೋ ವೈರಲ್ ಆಗಿದೆ.