ರಾಜ್ಯ

News Headlines 15-08-25 | ಪಂಚ ಭಾಗ್ಯಗಳಿಗೆ 90 ಸಾವಿರ ಕೋಟಿ ರೂ ಬಳಕೆ: ಕೇಂದ್ರದಿಂದ ಅನ್ಯಾಯ- ಸಿದ್ದರಾಮಯ್ಯ; ಕೋಲಾರದಲ್ಲಿ 10 ಬಾಂಗ್ಲಾದೇಶಿಗರ ಬಂಧನ; ಶಾಸಕ ಸತೀಶ್ ಸೈಲ್ ಗೆ ED ಶಾಕ್!

ಪಂಚಭಾಗ್ಯಗಳಿಗೆ 90 ಸಾವಿರ ಕೋಟಿ ಬಳಕೆ: ಕೇಂದ್ರದಿಂದ ಅನ್ಯಾಯ-ಸಿದ್ದರಾಮಯ್ಯ

79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಮಾಣಿಕ್​ ಷಾ ಪರೇಡ್ ಮೈದಾನದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದ್ದು, ರಾಜ್ಯ ಸರ್ಕಾರದ ಖಾತರಿ ಯೋಜನೆಯನ್ನು ಪ್ರಸ್ತಾಪಿಸಿ, 'ಅನ್ನ ಭಾಗ್ಯ', 'ಶಕ್ತಿ', 'ಗೃಹ ಲಕ್ಷ್ಮಿ', 'ಗೃಹ ಜ್ಯೋತಿ' ಮತ್ತು 'ಯುವ ನಿಧಿ' ಅನುಷ್ಠಾನಕ್ಕಾಗಿ 96,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. "ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಫಿಲೆಮನ್ ಯಾಂಗ್ ಕೂಡ ಈ ಯೋಜನೆಗಳನ್ನು ಶ್ಲಾಘಿಸಿದ್ದಾರೆ" ಎಂದು ಸಿಎಂ ತಿಳಿಸಿದ್ದು, "ಅಸಮಾನತೆಯನ್ನು ನಿವಾರಿಸಲು, ಖಾತರಿಗಳು ಮತ್ತು ಇತರ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಚಯಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿರುವ ಸಿಎಂ, ಐಟಿ, ಇಡಿ, ಸಿಬಿಐ ದಾಳಿಗಳ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ ಹಿನ್ನೆಲೆಯಲ್ಲಿ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ ಅವರು, ಕೇಂದ್ರ ಸರ್ಕಾರ ಯೂರಿಯಾ ಪೂರೈಸುತ್ತಿಲ್ಲ ಎಂದು ಆರೋಪ ಮಾಡಿದರು. ಸಮಸ್ಯೆಯನ್ನು ಕೂಡಲೆ ಪರಿಹರಿಸಬೇಕೆಂದು ಒಕ್ಕೂಟ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಸಿಎಂ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟಗೊಂಡು ಬಾಲಕ ಸಾವು

ಮನೆಯೊಂದರಲ್ಲಿ ಎಲ್'ಪಿಜಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಭಾರೀ ಸ್ಫೋಟ ಸಂಭವಿಸಿದ್ದು, ಪರಿಣಾಮ ಬಾಲಕನೊರ್ವ ಸಾವನ್ನಪ್ಪಿ, 12 ಮಂದಿಗೆ ಗಾಯವಾಗಿರುವ ಘಟನೆ ವಿಲ್ಸನ್ ಗಾರ್ಡನ್​ನ ಚಿನ್ನಯ್ಯನಪಾಳ್ಯದಲ್ಲಿ ಶುಕ್ರವಾರ ನಡೆದಿದೆ. ಮುಬಾರಕ್ ಮೃತ ಬಾಲಕನಾಗಿದ್ದು, ಗಾಯಗೊಂಡವರ ಪೈಕಿ 7 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.ಸ್ಫೋಟದ ತೀವ್ರತೆಗೆ ಮೊದಲನೇ ಮಹಡಿಯ ಮನೆ ಗೋಡೆ ಛಾವಣಿ ಕುಸಿದು ಬಿದ್ದಿದೆ. 10 ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ. ಸ್ಫೋಟದ ಸ್ಥಳ ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದು, ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ತಿಳಿಸಿದ್ದಾರೆ. ಹಾನಿಗೊಳಗಾದ ಮನೆಗಳನ್ನು ದುರಸ್ತಿ ಮಾಡುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದೇನೆ. ಮನೆ ಸಂಪೂರ್ಣವಾಗಿ ಕುಸಿದಿದ್ದರೆ, ನಾವು ಅವುಗಳನ್ನು ನಿರ್ಮಿಸುತ್ತೇವೆ ಎಂದು ಸಿಎಂ ಭರವಸೆ ನೀಡಿದ್ದಾರೆ.

ಶಾಸಕ ಸತೀಶ್ ಸೈಲ್ ಗೆ ಇಡಿ ಶಾಕ್

ಆಗಸ್ಟ್ 13 ಮತ್ತು 14 ರಂದು ಶಾಸಕ ಸತೀಶ್ ಸೈಲ್ ನಿವಾಸದ ಮೇಲೆ ನಡೆದಿದ್ದ ಇಡಿ ದಾಳಿಯ ವಿವರಗಳು ಈಗ ಲಭ್ಯವಾಗಿದ್ದು, ಅಧಿಕಾರಿಗಳು 1.68 ಕೋಟಿ ರೂ. ನಗದು ಮತ್ತು 6.75 ಕೆಜಿ ಚಿನ್ನಾಭರಣ ಮತ್ತು ಬೆಳ್ಳಿಯ ಚಿನ್ನದೊಂದಿಗೆ ಅಪರಾಧ ದಾಖಲೆಗಳು, ಇಮೇಲ್‌ಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಇಡಿ ಅಧಿಕಾರಿಗಳು ಕಾರವಾರ, ಗೋವಾ, ಮುಂಬೈ ಮತ್ತು ನವದೆಹಲಿಯ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿದ್ದರು ಅಕ್ರಮ ಕಬ್ಬಿಣದ ಅದಿರು ರಫ್ತು ಪ್ರಕರಣದಲ್ಲಿ ಬೆಂಗಳೂರಿನ ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಶಾಸಕ ಸತೀಶ್ ಸೈಲ್ ಮತ್ತು ಇತರರ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ನಡೆಯುತ್ತಿರುವ ತನಿಖೆಯ ಭಾಗವಾಗಿ ಈ ದಾಳಿಗಳು ನಡೆದಿತ್ತು.

ಕೋಲಾರದಲ್ಲಿ 10 ಬಾಂಗ್ಲಾದೇಶಿಗರ ಬಂಧನ

ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಐವರು ಅಪ್ರಾಪ್ತರು ಸೇರಿ 12 ಮಂದಿ ಬಾಂಗ್ಲಾ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮುಂದಿನ ಕ್ರಮಕ್ಕಾಗಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಮುಂದೆ ಹಾಜರುಪಡಿಸಲಾಗುತ್ತದೆ. ಶ್ರೀನಿವಾಸಪುರ ಪೊಲೀಸರು ತ್ಯಾಜ್ಯ ಬಾಟಲಿಗಳು ಮತ್ತು ಹತ್ತಿಯನ್ನು ಸಂಗ್ರಹಿಸುತ್ತಿರುವ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರಿಂದ ಸುಳಿವು ಪಡೆದಿದ್ದಾರೆ. ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಈ ಚಟುವಟಿಕೆಯಲ್ಲಿ ತೊಡಗಿದ್ದ ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ.

ಎಸ್.ಎಸ್ ಮಲ್ಲಿಕಾರ್ಜುನ ಕುಟುಂಬ ಸದಸ್ಯರಿಗೆ ದಂಡ

ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಕುಟುಂಬ ಸದಸ್ಯರಿಗೆ ಸೇರಿದ ಸಂಸ್ಥೆ ಸೇರಿ 26 ಕ್ವಾರಿ ಗುತ್ತಿಗೆದಾರರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ತಲಾ 25,000 ರೂ ದಂಡ ವಿಧಿಸಿದೆ. 3 ಸ್ಥಳಗಳಲ್ಲಿ, ಪರಿಸರ ಅನುಮತಿ ಸೇರಿದಂತೆ ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಗಾಂಧಿ ಜಯಂತಿ 2025: ರಾಜ್‌ಘಾಟ್‌ನಲ್ಲಿ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಪುಷ್ಪ ನಮನ

ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗದು: ಸಿಎಂ ಸಿದ್ದರಾಮಯ್ಯ

RSS ಶತಮಾನೋತ್ಸವ: ಈ ಅದ್ಭುತ ಪಯಣ ಭಾರತದ ದಿಕ್ಕನ್ನೇ ಬದಲಾಯಿಸಿದೆ; BJP

ದ್ವೇಷ, ಹಿಂಸೆ, ಅನ್ಯಾಯವೆಂಬ ಅಂಧಕಾರ ಆವರಿಸಿದಂತೆಲ್ಲಾ ಅದರಿಂದ ಹೊರಬರಲು ಮತ್ತೆ ಮತ್ತೆ ನೆನಪಾಗುವುದು ಬಾಪು: ಸಿಎಂ ಸಿದ್ದರಾಮಯ್ಯ

ಗೃಹಲಕ್ಷ್ಮಿ ಹಣದಿಂದ ವಾಷಿಂಗ್ ಮಷಿನ್ ಖರೀದಿ: ನವರಾತ್ರಿ ವೇಳೆ ಮಹಿಳೆಯೊಬ್ಬರ ಸಂಭ್ರಮಕ್ಕೆ ಯೋಜನೆ ಕಾರಣವಾಗಿರುವುದು ಸಾರ್ಥಕ ತರಿಸಿದೆ ಎಂದ ಸಿಎಂ

SCROLL FOR NEXT