ಎಂ.ಸಿ ಸುಧಾಕರ್ 
ರಾಜ್ಯ

ರಾಜ್ಯದ ಆರು ವಿವಿಗಳಿಗೆ ಖಾಯಂ ಕುಲಪತಿಗಳಿಲ್ಲ; ನೀತಿ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬ!

ಹಂಗಾಮಿ ಕುಲಪತಿಗಳು ದಿನನಿತ್ಯದ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಲು ಕಾನೂನುಬದ್ಧ ಅಧಿಕಾರ ಹೊಂದಿದ್ದರೂ, ಅವರು ಹೆಚ್ಚಾಗಿ ದೀರ್ಘಾವಧಿಯ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಬಿಸಿಯು ಮಾಜಿ ವಿಸಿ ಲಿಂಗರಾಜ ಗಾಂಧಿ ಅವರು ಹೇಳಿದ್ದಾರೆ.

ಬೆಂಗಳೂರು: ರಾಜ್ಯದ 32 ವಿಶ್ವವಿದ್ಯಾಲಯಗಳಲ್ಲಿ ಆರು ವಿಶ್ವವಿದ್ಯಾಲಯಗಳು ಖಾಯಂ ಕುಲಪತಿಗಳು ಇಲ್ಲದೆ ಅಲ್ಲಿನ ಶೈಕ್ಷಣಿಕ ಚಟುವಟಿಕೆಗಳು ಸೊರಗಿವೆ.

ಗುಲ್ಬರ್ಗ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ(MCU), ಮಂಡ್ಯ ವಿಶ್ವವಿದ್ಯಾಲಯ, ನೃಪತುಂಗ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯ(BCU) ಪ್ರಸ್ತುತ ಕುಲಪತಿಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಈ ಆರು ವಿವಿಗಳಲ್ಲಿ ಹಂಗಾಮಿ ಕುಲಪತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಹಂಗಾಮಿ ಕುಲಪತಿಗಳು ದಿನನಿತ್ಯದ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಲು ಕಾನೂನುಬದ್ಧ ಅಧಿಕಾರ ಹೊಂದಿದ್ದರೂ, ಅವರು ಹೆಚ್ಚಾಗಿ ದೀರ್ಘಾವಧಿಯ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಬಿಸಿಯು ಮಾಜಿ ವಿಸಿ ಲಿಂಗರಾಜ ಗಾಂಧಿ ಅವರು ಹೇಳಿದ್ದಾರೆ.

"ಅಧ್ಯಾಪಕರ ನೇಮಕಾತಿ, ಹೊಸ ಕೋರ್ಸ್‌ಗಳ ಅನುಮೋದನೆ ಮತ್ತು ಕೆಲವು ಹಣಕಾಸು ನಿರ್ಧಾರಗಳು ವಿಳಂಬವಾಗಬಹುದು. ಯಾವುದೇ ವಿಶ್ವವಿದ್ಯಾಲಯದ ದೀರ್ಘಕಾಲೀನ ಬೆಳವಣಿಗೆಗೆ ತಾತ್ಕಾಲಿಕ ವ್ಯವಸ್ಥೆಗಳು ಉತ್ತಮವಲ್ಲ" ಎಂದು ಅವರು ತಿಳಿಸಿದ್ದಾರೆ.

ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ಪ್ರತಿ ಪ್ರಕರಣದಲ್ಲಿ ವಿಳಂಬಕ್ಕೆ ಕಾರಣಗಳು ವಿಭಿನ್ನವಾಗಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

"ಬಿಸಿಯು ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯಗಳಲ್ಲಿ, ಹುಡುಕಾಟ-ಕಮ್-ಆಯ್ಕೆ ಸಮಿತಿಗಳು ಈಗಾಗಲೇ ತಮ್ಮ ಶಿಫಾರಸುಗಳನ್ನು ಸಲ್ಲಿಸಿವೆ. ಕಡತಗಳು ಈಗ ಮುಖ್ಯಮಂತ್ರಿಯ ಮುಂದೆ ಇದ್ದು, ಶೀಘ್ರದಲ್ಲೇ ಅಂತಿಮ ಅನುಮೋದನೆಗಾಗಿ ರಾಜ್ಯಪಾಲರ ಮುಂದೆ ಇಡಲಾಗುವುದು" ಎಂದು ಅವರು ಹೇಳಿದರು.

ಆದಾಗ್ಯೂ, ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯವು ಹಲವು ಬಾರಿ ಅಧಿಸೂಚನೆಗಳನ್ನು ಹೊರಡಿಸಿದ್ದರೂ ಅರ್ಹ ಅರ್ಜಿದಾರರನ್ನು ಪಡೆಯುವಲ್ಲಿ ವಿಫಲವಾಗಿದೆ. "ನಾವು ಎರಡು-ಮೂರು ಬಾರಿ ಅರ್ಜಿಗಳನ್ನು ಕರೆದಿದ್ದೇವೆ. ಆದರೆ ಅಗತ್ಯ ಅರ್ಹತೆಗಳನ್ನು ಹೊಂದಿರುವ ಯಾರೂ ಈ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ" ಎಂದು ಸಚಿವರು ಒಪ್ಪಿಕೊಂಡಿದ್ದಾರೆ.

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ಮಂಡ್ಯ ವಿಶ್ವವಿದ್ಯಾಲಯ ಮತ್ತು ನೃಪತುಂಗ ವಿಶ್ವವಿದ್ಯಾಲಯಗಳನ್ನು ಸಂಪುಟ ಉಪಸಮಿತಿ ಪರಿಶೀಲಿಸುತ್ತಿದೆ ಎಂದು ಸಚಿವರು ತಿಳಿಸಿದರು.

ಸಂಪುಟ ಉಪಸಮಿತಿ ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ವ್ಯಾಪಕ ಆರ್ಥಿಕ ಮತ್ತು ಆಡಳಿತಾತ್ಮಕ ಸವಾಲುಗಳನ್ನು ಪರಿಶೀಲಿಸುತ್ತಿದೆ. "ಯಾವುದೇ ಸಂಸ್ಥೆಯನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಸ್ತಾಪವಿಲ್ಲ. ಈ ವಿಶ್ವವಿದ್ಯಾಲಯಗಳನ್ನು ಬಲಪಡಿಸುವುದು ಮತ್ತು ಅವುಗಳ ಆರ್ಥಿಕವಾಗಿ ಪುನರುಜ್ಜೀವನಗೊಳಿಸುವುದು ಇದರ ಉದ್ದೇಶವಾಗಿದೆ" ಎಂದು ಅವರು ಸ್ಪಷ್ಟಪಡಿಸಿದರು.

ಈ ಮೂರು ವಿಶ್ವವಿದ್ಯಾಲಯಗಳಲ್ಲಿ, ಕುಲಪತಿ ಹುದ್ದೆಗಳು ನವೆಂಬರ್ 2024 ರಿಂದ ಖಾಲಿ ಇವೆ. ಆದರೆ ಬೆಂಗಳೂರು ನಗರ ವಿಶ್ವವಿದ್ಯಾಲಯ, ಗುಲ್ಬರ್ಗಾ ವಿಶ್ವವಿದ್ಯಾಲಯ ಮತ್ತು ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿವಿಯ ಕುಲಪತಿ ಹುದ್ದೆ ಕಳೆದ ಕೆಲವು ತಿಂಗಳುಗಳಿಂದ ಖಾಲಿ ಇವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಷ್ಯಾ ಅಧ್ಯಕ್ಷ Putin ಗೆ ಮೋದಿ ನಿವಾಸದಲ್ಲಿ ವಿಶೇಷ ಭೋಜನ ಕೂಟ!

ಇನ್ನೂ 2-3 ದಿನ ಅವಾಂತರ; ಫೆ. 10 ರವರೆಗೆ ನಿಯಮಗಳ ವಿನಾಯಿತಿ ಕೋರಿದ IndiGo!

ಭಾರತಕ್ಕೆ ಬಂದ ಆಪ್ತ ಗೆಳೆಯ Putin ಗೆ ಭಗವದ್ಗೀತೆ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ! ವಿಶೇಷ ಏನು?

ನನ್ನ ಸ್ನೇಹಿತ ಪುಟಿನ್‌ರನ್ನು ಸ್ವಾಗತಿಸಲು ತುಂಬಾ ಸಂತೋಷವಾಗುತ್ತಿದೆ: ಪ್ರಧಾನಿ ಮೋದಿ

IndiGo: ಮತ್ತೆ 550 ವಿಮಾನ ರದ್ದು; ಸಂಸ್ಥೆಯ 20 ವರ್ಷದ ಇತಿಹಾಸದಲ್ಲಿ ಇದೇ ಮೊದಲು!

SCROLL FOR NEXT