ಬಾನು ಮುಷ್ತಾಕ್  
ರಾಜ್ಯ

ಮೈಸೂರು ದಸರಾ 2025: ಉದ್ಘಾಟನೆಗೆ ಆಹ್ವಾನ ಬಂದಿರುವುದು ಸಂತಸ ತಂದಿದೆ- ಬಾನು ಮುಷ್ತಾಕ್

ನನ್ನ ತಂದೆ ಕೃಷ್ಣ ರಾಜ ಸಾಗರದಲ್ಲಿ (ಕೆಆರ್‌ಎಸ್) ಉದ್ಯೋಗದಲ್ಲಿದ್ದರು, ಪ್ರತಿ ವರ್ಷ ದಸರಾ ಸಮಯದಲ್ಲಿ ನಾನು ಕುಟುಂಬದೊಂದಿಗೆ ಹೋಗುತ್ತಿದ್ದೆ. ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ನೋಡಿದ್ದೇನೆ.

ಬೆಂಗಳೂರು: ಪ್ರಸಕ್ತ ಸಾಲಿನ ಮೈಸೂರು ದಸರಾ ಉತ್ಸವವನ್ನು ಉದ್ಘಾಟಿಸಲು ಆಹ್ವಾನ ಸಿಕ್ಕಿದ್ದಕ್ಕಾಗಿ ಬರಹಗಾರ್ತಿ ಮತ್ತು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಇದು ನನಗೆ ಅತ್ಯಂತ ಸಂತೋಷದ ವೈಯಕ್ತಿಕ ಮತ್ತು ಸಾಮಾಜಿಕವಾಗಿ ಮಹತ್ವದ ಕ್ಷಣವಾಗಿದೆ ಎಂದು ಬಾನು ಮುಷ್ತಾಕ್ ಅವರು ಹೇಳಿದ್ದಾರೆ.

ನನ್ನ ತಂದೆ ಕೃಷ್ಣ ರಾಜ ಸಾಗರದಲ್ಲಿ (ಕೆಆರ್‌ಎಸ್) ಉದ್ಯೋಗದಲ್ಲಿದ್ದರು, ಪ್ರತಿ ವರ್ಷ ದಸರಾ ಸಮಯದಲ್ಲಿ ನಾನು ಕುಟುಂಬದೊಂದಿಗೆ ಹೋಗುತ್ತಿದ್ದೆ. ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ನೋಡಿದ್ದೇನೆ. ಒಂದು ದಿನ ನಾನೇ ದಸರಾ ಉತ್ಸವಕ್ಕೆ ಉದ್ಘಾಟನೆ ಮಾಡುತ್ತೇನೆಂದು ಎಂದಿಗೂ ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ.

ದಸರಾವನ್ನು ಕರ್ನಾಟಕದ ನಾಡ ಹಬ್ಬವಾಗಿದ್ದು, ಎಲ್ಲರನ್ನೂ ಒಳಗೊಳ್ಳುವ ಮತ್ತು ಏಕತೆಯ ಸಮಯವಾಗಿದೆ ಹೀಗಾಗಿಯೇ ಈ ಹಬ್ಬ ವಿಶೇಷವಾಗಿದೆ, ಸರ್ಕಾರವು ಕರ್ನಾಟಕದ ಎಲ್ಲಾ ಜನರನ್ನು ಒಳಗೊಳ್ಳುವ ಮನೋಭಾವವನ್ನು ತೋರಿಸಿರುವ ಸಂದರ್ಭ ಇದಾಗಿದೆ.

ವಿವಿಧ ಸರ್ಕಾರಗಳ ಇತ್ತೀಚಿನ ನೀತಿಗಳಿಂದಾಗಿ, ನಿರ್ದಿಷ್ಟ ಗುಂಪುಗಳು, ಸಮುದಾಯಗಳು, ಪಂಗಡಗಳು, ಜಾತಿಗಳು ಮತ್ತು ಧರ್ಮಗಳ ವಿರುದ್ಧ ತಾರತಮ್ಯವನ್ನು ನಾನು ಕಂಡಿದ್ದೇನೆ. ಆದರೆ, ಈಗಿನ ಸರ್ಕಾರದ ಆಯ್ಕೆ ಎಲ್ಲಾ ತಾರತಮ್ಯಗಳನ್ನು ಮೀರಿಸಿದೆ. ಸರ್ಕಾರದ ನಿರ್ಧಾರ ಎಲ್ಲರನ್ನು ಒಳಗೊಳ್ಳುವಿಕೆ. ವೈವಿಧ್ಯಮಯ ಸಮುದಾಯಗಳು ಮತ್ತು ಸ್ತ್ರೀತತ್ವವನ್ನು ಗೌರವಿಸುತ್ತದೆ. ಇದು ಕನ್ನಡ ಸಂಸ್ಕೃತಿಯ ಆಚರಣೆಯಾಗಿದೆ. ಮೈಸೂರು ಮಹಾರಾಜರ ಪರಂಪರೆ ಮೇಲುಗೈ ಸಾಧಿಸುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮುಂದಿನ 24 ಗಂಟೆಯಲ್ಲಿ ಕರ್ನಾಟಕದಲ್ಲಿ ತೀವ್ರ ಶೀತಗಾಳಿ?; IMD ಎಚ್ಚರಿಕೆ

ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ 28 ಕೋಟಿ ರೂ. ಖರ್ಚು, ಯಾವುದಕ್ಕೆ ಎಷ್ಟು ಖರ್ಚು? ಇಲ್ಲಿದೆ ಮಾಹಿತಿ

ಒಡಿಶಾದ ರೂರ್ಕೆಲಾ ಬಳಿ ಸಣ್ಣ ವಿಮಾನ ಪತನ; ಪೈಲಟ್ ಸೇರಿ ಆರು ಜನರಿಗೆ ಗಂಭೀರ ಗಾಯ

ಬಾಂಬ್ ದಾಳಿ ಆತಂಕ: ಮಣಿಪುರ ಕಣಿವೆಯಲ್ಲಿ ಪೆಟ್ರೋಲ್ ಪಂಪ್‌ಗಳು ಅನಿರ್ದಿಷ್ಟಾವಧಿಗೆ ಬಂದ್!

MGNREGA ಕುರಿತು ಚರ್ಚಿಸಲು ವಿಶೇಷ ಅಧಿವೇಶನ; ಜ. 26 ರಿಂದ ಕಾಂಗ್ರೆಸ್​​ನಿಂದ 'ಮನ್ರೇಗಾ ಉಳಿಸಿ' ಪಾದಯಾತ್ರೆ

SCROLL FOR NEXT