ಹೈಕೋರ್ಟ್‌ 
ರಾಜ್ಯ

ಕೇಂದ್ರದ ಆನ್‌ಲೈನ್ ಗೇಮಿಂಗ್ ನಿಷೇಧ ಮಸೂದೆ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಗೇಮಿಂಗ್ ಆಪರೇಟರ್

ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದ ಈ ಮಸೂದೆಗೆ ಆಗಸ್ಟ್ 22 ರಂದು ರಾಷ್ಟ್ರಪತಿಗಳು ಸಹಿ ಹಾಕಿದ್ದಾರೆ.

ಬೆಂಗಳೂರು: ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಲಾದ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ ವಿರುದ್ಧ ಗೇಮಿಂಗ್ ಆಪರೇಟರ್ ಒಬ್ಬರು ಗುರುವಾರ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕೇಂದ್ರ ಸರ್ಕಾರದ ಕಾಯ್ದೆಯ ವಿರುದ್ಧ ಕಂಪನಿಯೊಂದು ನ್ಯಾಯಾಂಗದ ಬಾಗಿಲು ತಟ್ಟಿರುವುದು ಇದೇ ಮೊದಲು.

'ಎ23 ರಮ್ಮಿ'ಯ ಆಪರೇಟರ್ ಆಗಿರುವ ಡಿಜಿಟಲ್ ವರ್ಕ್ಸ್ ಮುಖ್ಯಸ್ಥರು ಇಂದು ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ 2025 ರ ಸಿಂಧುತ್ವವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಆಗಸ್ಟ್ 30 ರಂದು ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಈ ವಿಷಯವನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ಮುಂದೆ ಉಲ್ಲೇಖಿಸಲಾಗಿದ್ದು, ಅವರು ಇದನ್ನು ಶನಿವಾರ ವಿಚಾರಣೆಗೆ ಪಟ್ಟಿ ಮಾಡುವಂತೆ ನಿರ್ದೇಶಿಸಿದ್ದಾರೆ.

ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದ ಈ ಮಸೂದೆಗೆ ಆಗಸ್ಟ್ 22 ರಂದು ರಾಷ್ಟ್ರಪತಿಗಳು ಸಹಿ ಹಾಕಿದ್ದಾರೆ.

ಮುಂಗಾರು ಅಧಿವೇಶನದಲ್ಲಿ ಅಂಗೀಕರಿಸಿದ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025, ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳು ಮತ್ತು ರಿಯಲ್ ಮನಿ ಗೇಮ್‌ಗಳ ಮೂಲಕ ಹಣವನ್ನು ಪಣಕ್ಕಿಟ್ಟು ಆಡುವ ಆಟ- ಅದು ಕೌಶಲ್ಯದ ಆಟವೇ ಆಗಿರಲಿ ಅಥವಾ ಅದೃಷ್ಟದ ಆಟವೇ ಆಗಿರಲಿ- ಅಂತಹ ಆಟಗಳನ್ನು ನಿಷೇಧಿಸುತ್ತದೆ. ಇಂತಹ ಆಟಗಳ ಪರ ಸೆಲೆಬ್ರಿಟಿಗಳ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಟಿವಿ, ಡಿಜಿಟಲ್, ಮುದ್ರಣ ಮಾಧ್ಯಮಗಳಲ್ಲಿ ಇನ್ನುಮುಂದೆ ಆನ್‌ಲೈನ್‌ ಮನಿ ಗೇಮ್‌ಗಳ ಪ್ರಚಾರ ಮಾಡದಂತೆ ಎಚ್ಚರಿಸಲಾಗಿದೆ. ಜೊತೆಗೆ ಬ್ಯಾಂಕ್‌ಗಳು ಇತರ ಹಣಕಾಸು ಸಂಸ್ಥೆಗಳ ಮೂಲಕ ಅಕ್ರಮ ಹಣ ವರ್ಗಾವಣೆಗೂ ನಿಯಂತ್ರಣ ಹೇರಲಾಗಿದೆ. ಕಾನೂನನ್ನು ಉಲ್ಲಂಘಿಸಿದವರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಕೋಟಿ ರೂಪಾಯಿವರೆಗೆ ದಂಡ ವಿಧಿಸಬಹುದು ಎಂದು ಕಾನೂನು ಹೇಳುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ: Donald Trump

ಡಿಸಿಎಂ ಆಗುತ್ತೀರೋ, ಜೈಲಿಗೆ ಹೋಗುತ್ತೀರೋ ಎಂದು ಬಿಜೆಪಿಯಿಂದ ಆಫರ್ ಬಂದಿತ್ತು, ಪಕ್ಷನಿಷ್ಠೆಗೆ ಜೈಲುವಾಸ ಆಯ್ಕೆ ಮಾಡಿಕೊಂಡೆ: ರಹಸ್ಯ ಬಿಚ್ಚಿಟ್ಟ ಡಿಕೆಶಿ

ಮಾರ್ಕೆಟಿಂಗ್ ಮಾಡಿಕೊಳ್ಳಲು ಮಾತನಾಡುತ್ತಾರೆ: ಬೆಂಗಳೂರಿಗೆ ಸರಿಸಮನಾದ ನಗರ ದೇಶದಲ್ಲಿಲ್ಲ: ನಾರಾ ಲೋಕೇಶ್ ಗೆ DCM ತಿರುಗೇಟು

2030 ಕಾಮನ್ವೆಲ್ತ್ ಕ್ರೀಡಾಕೂಟ ಅಹಮದಾಬಾದ್‌ನಲ್ಲಿ ಆಯೋಜಿಸಲು ಶಿಫಾರಸು; ನವೆಂಬರ್ 26 ರಂದು ಅಂತಿಮ ನಿರ್ಧಾರ

ಕೆಮ್ಮಿನ ಸಿರಪ್ ದುರಂತ: ಮಧ್ಯಪ್ರದೇಶದಲ್ಲಿ 3 ವರ್ಷದ ಬಾಲಕಿ ಸಾವು, ಮಕ್ಕಳ ಸಾವಿನ ಸಂಖ್ಯೆ 24ಕ್ಕೆ ಏರಿಕೆ!

SCROLL FOR NEXT