ಅಪರಾಧ online desk
ರಾಜ್ಯ

ಕಲಬುರಗಿ: ಮಗಳನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ವ್ಯಕ್ತಿ

18 ವರ್ಷದ ಬಾಲಕಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಆಕೆಯ ಅಂತ್ಯಕ್ರಿಯೆ ನಡೆಸಲಾಗಿದೆ, ಆದರೆ ಪ್ರಕರಣದ ಬಗ್ಗೆ ಅನುಮಾನಗಳಿವೆ ಎಂದು ಶರಣಪ್ಪ ತಿಳಿಸಿದ್ದಾರೆ.

ಕಲಬುರಗಿ: ವ್ಯಕ್ತಿಯೊಬ್ಬ ತನ್ನ ಮಗಳನ್ನು ಕತ್ತು ಹಿಸುಕಿ ಕೊಂದು ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಆಕೆಯ ಬಾಯಿಗೆ ಕೀಟನಾಶಕವನ್ನು ಒತ್ತಾಯಪೂರ್ವಕವಾಗಿ ಸೇರಿಸಿರುವ ಘಟನೆ ಕಲಬುರಗಿಯಲ್ಲಿ ವರದಿಯಾಗಿದೆ.

ಆಕೆ ಬೇರೆ ಸಮುದಾಯದ ಯುವಕನೊಂದಿಗೆ ಸಂಬಂಧ ಹೊಂದಿದ್ದ ಕಾರಣ ಈ ಕೃತ್ಯವೆಸಗಿ ಅಂತ್ಯಕ್ರಿಯೆ ನಡೆಸಿದ್ದಾನೆ ಮೇಲಕುಂದ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದೆ ಎಂದು ಕಲಬುರಗಿ ಪೊಲೀಸ್ ಆಯುಕ್ತ ಶರಣಪ್ಪ ಎಸ್ ಡಿ ಶುಕ್ರವಾರ ತಿಳಿಸಿದ್ದಾರೆ.

18 ವರ್ಷದ ಬಾಲಕಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಆಕೆಯ ಅಂತ್ಯಕ್ರಿಯೆ ನಡೆಸಲಾಗಿದೆ, ಆದರೆ ಪ್ರಕರಣದ ಬಗ್ಗೆ ಅನುಮಾನಗಳಿವೆ ಎಂದು ಶರಣಪ್ಪ ತಿಳಿಸಿದ್ದಾರೆ.

ಪೊಲೀಸರು ಹುಡುಗಿಯ ತಂದೆ ಶಂಕರ್ ಅವರನ್ನು ಬಂಧಿಸಿದ್ದಾರೆ. ಆ ವ್ಯಕ್ತಿಗೆ ಇನ್ನೂ ಐದು ಹೆಣ್ಣು ಮಕ್ಕಳಿರುವುದರಿಂದ ಆಕೆಯ ಅಂತರ್ಜಾತಿ ವಿವಾಹವನ್ನು ವಿರೋಧಿಸಿದ್ದರು.

ಅಂತರ್ಜಾತಿ ವಿವಾಹ ತನ್ನ ಇತರ ಮೂವರು ಹೆಣ್ಣುಮಕ್ಕಳ ವಿವಾಹದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಭಯಪಟ್ಟಿದ್ದಾರೆ ಎಂದು ಶರಣಪ್ಪ ಹೇಳಿದರು.

"ಶಂಕರ್ ತನ್ನ ಸಂಬಂಧಿಕರ ಮೂಲಕ ಹುಡುಗಿಯನ್ನು ಅಧ್ಯಯನದತ್ತ ಗಮನಹರಿಸುವಂತೆ ಮನವೊಲಿಸಲು ಪ್ರಯತ್ನಿಸಿದ್ದರು" ಎಂದು ಅವರು ಹೇಳಿದರು, ಆದರೆ ಯುವತಿ ತಂದೆಯ ಮಾತನ್ನು ಕೇಳದೇ "ಅಚಲವಾಗಿದ್ದಳು" ಎಂದು ಅವರು ತಿಳಿಸಿದ್ದಾರೆ.

ಶಂಕರ್ ಅವಳನ್ನು ಕತ್ತು ಹಿಸುಕಿ ಕೊಂದು, ಆಕೆಯ ಬಾಯಿಗೆ ಕೀಟನಾಶಕ ಸುರಿದು ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ. ಗ್ರಾಮಸ್ಥರು ಅದನ್ನು ನಂಬಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು," ಎಂದು ಶರಣಪ್ಪ ಹೇಳಿದರು.

ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವನ್ನು ಕಳುಹಿಸಲಾಯಿತು, ಮತ್ತು ಪೊಲೀಸರು ಕೊಲೆ ಮತ್ತು ಸಾಕ್ಷ್ಯ ನಾಶದ ಪ್ರಕರಣಗಳನ್ನು ದಾಖಲಿಸಿದ್ದಾರೆ. "ಶಂಕರ್ ಅವರ ಸಂಬಂಧಿಕರಾದ ಇನ್ನೂ ಇಬ್ಬರು ಜನರ ಭಾಗಿಯಾಗಿದ್ದಾರೆ ಎಂದು ನಾವು ಶಂಕಿಸುತ್ತೇವೆ. ತನಿಖೆಗಳು ನಡೆಯುತ್ತಿವೆ ಮತ್ತು ತಪ್ಪಿತಸ್ಥರೆಂದು ಕಂಡುಬಂದರೆ, ಅವರನ್ನೂ ಬಂಧಿಸಲಾಗುವುದು" ಎಂದು ಶರಣಪ್ಪ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮುಂಬೈ-ಅಹಮದಾಬಾದ್ ಮಾತ್ರವಲ್ಲ, ಭಾರತದಲ್ಲಿ 7000 ಕಿ.ಮೀ ಬುಲೆಟ್ ರೈಲು ಓಡಲಿದೆ: ಜಪಾನ್‌ನಲ್ಲಿ ಪ್ರಧಾನಿ ಮೋದಿ ಘೋಷಣೆ

ಹಿಂದೂ ಮಹಿಳೆಯರ ಮೇಲೆ '3 ಮಕ್ಕಳ ಸಿದ್ಧಾಂತ'ದ ಹೊರೆ ಹೇರಬೇಡಿ: RSS ಮುಖ್ಯಸ್ಥ ಮೋಹನ್ ಭಾಗವತ್‌ಗೆ ಓವೈಸಿ

ಡಿಸೆಂಬರ್‌ನಲ್ಲಿ ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ

ಭಾರತದ ಜಿಡಿಪಿ ಪ್ರಬಲ ಜಿಗಿತ: ಮೊದಲ ತ್ರೈಮಾಸಿಕದಲ್ಲಿ ಶೇ. 7.8 ರಷ್ಟು ಬೆಳವಣಿಗೆ

ವಿಶ್ವ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದ PV Sindhu: ಇಂಡೋನೇಷ್ಯಾದ ಶಟ್ಲರ್ ಕುಸುಮಾ ವಿರುದ್ಧ ಸೋಲು!

SCROLL FOR NEXT