ಸಾಂದರ್ಭಿಕ ಚಿತ್ರ 
ರಾಜ್ಯ

ಬೆಳಗಾವಿ: ಕಾನ್ ಸ್ಟೇಬಲ್ ಗೆ ಚಾಕು ಇರಿತ; ಗ್ಯಾಂಗ್ ರೇಪ್ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

ಬಂಧಿಸಲು ತೆರಳಿದ್ದ ಕಾನ್ ಸ್ಟೇಬಲ್ ಷರೀಫ್ ಗೆ ಚಾಕು ಇರಿದು ರಮೇಶ್ ಪರಾರಿಯಾಗಲು ಯತ್ನಿಸಿದ್ದ.

ಬೆಳಗಾವಿ: ಪರಾರಿಯಾಗಲು ಯತ್ನಿಸಿದ ದರೋಡೆ, ಸಾಮೂಹಿಕ ಅತ್ಯಾಚಾರ ಮತ್ತು ಸುಲಿಗೆ ಸೇರಿದಂತೆ ಹಲವಾರು ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಹೊರವಲಯದಲ್ಲಿ ರಮೇಶ್ ಕಿಲ್ಲಾರ್ ಕಾಲಿಗೆ ಕಿತ್ತೂರು ಠಾಣೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಬಂಧಿಸಲು ತೆರಳಿದ್ದ ಕಾನ್ ಸ್ಟೇಬಲ್ ಷರೀಫ್ ಗೆ ಚಾಕು ಇರಿದು ರಮೇಶ್ ಪರಾರಿಯಾಗಲು ಯತ್ನಿಸಿದ್ದ.

ಆತ್ಮ ರಕ್ಷಣೆಗಾಗಿ ಪಿಎಸ್ಐ ಪ್ರವೀಣ್ ಗಂಗೊಳ್ಳಿ ಅವರು ರಮೇಶ್ ಮೇಲೆ ಫೈರಿಂಗ್ ನಡೆಸಿದ್ದಾರೆ ಗಾಯಗೊಂಡ ಆರೋಪಿ ರಮೇಶ್ ಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ದರೋಡೆ ಸಾಮೂಹಿಕ ಅತ್ಯಾಚಾರ ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರ ಸೇರಿದಂತೆ ಹಲವು ಪ್ರಕರಣಗಳಲ್ಲಿ ರಮೇಶ್ ಕಿಲ್ಲರ್ ಭಾಗಿಯಾಗಿದ್ದ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಗಾಯಗೊಂಡ ಆರೋಪಿ ಹಾಗೂ ಪೊಲೀಸರನ್ನು ಚಿಕಿತ್ಸೆಗಾಗಿ ಬೆಳಗಾವಿಯ ಬಿಐಎಂಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಘಟನೆ ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ ಹೇಳಿಕೆಗೆ ನಾನೂ ಈಗಲೂ ಬದ್ಧ, ಆದ್ರೆ ಸಿದ್ದರಾಮಯ್ಯ 5 ವರ್ಷ ಸಿಎಂ: ಯತೀಂದ್ರ

ರಾಜ್ಯದ ರೈತರಿಗೆ ವಂಚಿಸಿದವರ 'ಕೇಸ್' ಮುಚ್ಚಿಹಾಕಲು ಸಚಿವ ಜಮೀರ್ ಪ್ರಭಾವ! ಸ್ಪೋಟಕ Audio ವೈರಲ್

Love Jihad ಆರೋಪಿ ಕೊನೆಗೂ ಬಂಧನ: ಮತಾಂತರವಾಗದ್ದಕ್ಕೇ ಯುವತಿಗೆ ಕೈ ಕೊಟ್ಟಿದ್ದ ಮಹಮ್ಮದ್ ಇಶಾಕ್!

RJD ಬಿಹಾರವನ್ನು ಅಪಹರಣ, ಸುಲಿಗೆಯ ಕೇಂದ್ರವನ್ನಾಗಿ ಮಾಡಿದೆ: ಅಮಿತ್ ಶಾ

'4 ವರ್ಷ ಕಾದಿದ್ದೆವು.. ಆದ್ರೆ': ಪಾಕ್ ನಾಯಕಿಗೆ ಉಲ್ಟಾ ಹೊಡೆದ 6-0, ವಿಶ್ವಕಪ್ ನಿಂದ ಹೊರಬಿದ್ದ ಬೆನ್ನಲ್ಲೇ ICC ವಿರುದ್ಧ Fatima Sana ಆಕ್ರೋಶ!

SCROLL FOR NEXT