ಪ್ರಮೋದಾ ದೇವಿ 
ರಾಜ್ಯ

ಸರ್ಕಾರದ ದಸರಾ ನಮ್ಮ ಪರಂಪರೆಯ ಭಾಗವಲ್ಲ; ನಮ್ಮ ದಸರಾ ಖಾಸಗಿಯಾಗಿ ನಡೆಯುತ್ತೆ: ಪ್ರಮೋದಾ ದೇವಿ

ಚಾಮುಂಡಿ ಯದುವಂಶದ ಮನೆ ದೇವರು. ನಮ್ಮ ಕುಲದೇವಿ. ಯದುವಂಶಕ್ಕೆ ಚಾಮುಂಡಿ ದೇವಿ ಧಾರ್ಮಿಕ ತಾಯಿ ಇದ್ದಂತೆ. ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ವಿಧಿ-ವಿಧಾನದಂತೆಯೇ ಪೂಜೆ ನಡೆಯುತ್ತದೆ ಎಂದರು.

ಮೈಸೂರು: ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದು. ಚಾಮುಂಡೇಶ್ವರಿ ಹಿಂದೂ ದೇವರು. ಹೀಗಿದ್ದರೂ ದೇವಾಲಯವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಕ್ಕೆ ಬೇಸರವಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, ಚಾಮುಂಡಿ ಯದುವಂಶದ ಮನೆ ದೇವರು. ನಮ್ಮ ಕುಲದೇವಿ. ಯದುವಂಶಕ್ಕೆ ಚಾಮುಂಡಿ ದೇವಿ ಧಾರ್ಮಿಕ ತಾಯಿ ಇದ್ದಂತೆ. ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ವಿಧಿ-ವಿಧಾನದಂತೆಯೇ ಪೂಜೆ ನಡೆಯುತ್ತದೆ ಎಂದರು. ರಾಜಕಾರಣಿಗಳು ಏನು ಬೇಕಾದರೂ ಹೇಳಲಿ. ಏನೆಂದು ಬೇಕಾದರೂ ಕರೆಯಲಿ. ಅವರು ಹೇಳಿದಂತೆಲ್ಲಾ ಆಗುವುದಿಲ್ಲ ಎಂದರು.

ನಮ್ಮ ಮನೆತನ ಹಾಗೂ ದೇವಸ್ಥಾನದ ವಿಚಾರದಲ್ಲಿ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದೇವೆ. ಚಾಮುಂಡಿ ಬೆಟ್ಟದ ದೇವಸ್ಥಾನಕ್ಕೆ ಸಂಬಂಧಿಸಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದರೂ ಅದು ಅಧಿಕೃತವಲ್ಲ.

ನ್ಯಾಯಾಲಯದ ಆದೇಶ ಬಂದ ಮೇಲಷ್ಟೆ ಎಲ್ಲವೂ ಸ್ಪಷ್ಟ ಆಗುತ್ತದೆ ಎಂದು ಹೇಳಿದರು. 70 ವರ್ಷಗಳಿಂದ ಈ ಹೋರಾಟ ನಡೆದಿದ್ದು, ಎಲ್ಲವೂ ನ್ಯಾಯಾಲಯದಲ್ಲಿದೆ ಎಂದರು.

ದಸರಾ ಉದ್ಘಾಟಕರ ವಿಚಾರದಲ್ಲಿ ನನ್ನ ಅಭಿಪ್ರಾಯವೇನೂ ಇಲ್ಲ. ಕರೆದವರು, ಕರೆಸಿಕೊಂಡವರಿಗಷ್ಟೇ ಅದು ಗೊತ್ತು. ಸರ್ಕಾರದ ದಸರಾ ನಮ್ಮ ಪರಂಪರೆಯ ಭಾಗವಲ್ಲ. ನಮ್ಮ ದಸರಾ ಖಾಸಗಿಯಾಗಿಯೇ ನಡೆಯುತ್ತದೆ. ಸರ್ಕಾರದವರು ಅವರಿಗೆ ಬೇಕಾದ ರೀತಿ ದಸರಾ ಮಾಡುತ್ತಾರೆ.

ಅದಕ್ಕೂ-ನಮಗೂ ಸಂಬಂಧ ಇಲ್ಲ ಎಂದರು. ವಿಜಯದಶಮಿಯಂದು ದಿನ ನಾನು ಅಂಬಾರಿ ಕಡೆ ಗಮನ ಕೊಡುವ ಕಾರಣ ನಾನು ಮೆರವಣಿಗೆಗೆ ಹೋಗುವುದಿಲ್ಲ. ನಮ್ಮ ಮನೆಯಿಂದ ಒಬ್ಬರು ಹೋಗುತ್ತಾರಷ್ಟೆ ಎಂದು ಪ್ರತಿಕ್ರಿಯಿಸಿದರು. ದಸರಾ ವಿಚಾರದಲ್ಲಿ ಇಲ್ಲಿಯವರೆಗೆ ಆಗಿರುವ ರಾಜಕೀಯವೇ ಸಾಕು. ಆ ವಿಚಾರವನ್ನು ಮುಂದುವರಿಸುವುದು ಬೇಡ ಎಂದು‌ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಮತಗಳ್ಳತನ': ಆಳಂದ ಮಾಜಿ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಮನೆ ಮೇಲೆ SIT ದಾಳಿ; Video

ನೀನು ನೇರವಾಗಿ ನನ್ನನ್ನೇ ಕೇಳಬೇಕಿತ್ತು: BCCI ಆಯ್ಕೆ ಸಮಿತಿ ವಿರುದ್ಧ ಮೊಹಮ್ಮದ್ ಶಮಿ ಆರೋಪಕ್ಕೆ ಮೌನ ಮುರಿದ ಅಜಿತ್ ಅಗರ್ಕರ್!

ಚಾಮರಾಜನಗರ: 27 ತಿಂಗಳಿಂದ ಸಿಗದ ಸಂಬಳ, ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ 'ವಾಟರ್ ಮ್ಯಾನ್' ಆತ್ಮಹತ್ಯೆ!

ಶ್ರೀಲಂಕಾ ಪ್ರಧಾನಿಯಿಂದ ಮೋದಿ ಭೇಟಿ; ಭಾರತೀಯ ಮೀನುಗಾರರ ಸಮಸ್ಯೆ ಬಗ್ಗೆ ಚರ್ಚೆ

ರಾಯಚೂರು: RSS ಪಥಸಂಚಲನದಲ್ಲಿ ಭಾಗಿ, PDO ಅಮಾನತು!

SCROLL FOR NEXT