ಸುದ್ದಿ ಮುಖ್ಯಾಂಶಗಳು  online desk
ರಾಜ್ಯ

News headlines 31-08-2025 | Mysuru Dasara ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ- CM ಸಮರ್ಥನೆ; ಸೌಜನ್ಯ ಕೇಸ್ ನಲ್ಲಿ ಸಾಕ್ಷಿ ಹೇಳಲು ಸಿದ್ಧ-SITಗೆ ಮಹಿಳೆ ಪತ್ರ!; ಇಂದಿನಿಂದ ಆಸ್ತಿ ನೋಂದಣಿ ಶುಲ್ಕ ದುಪ್ಪಟ್ಟು!

Dharmasthala Case: ಸೌಜನ್ಯ ಕೇಸ್ ನಲ್ಲಿ ಸಾಕ್ಷಿ ಹೇಳು ಸಿದ್ಧ- SIT ಗೆ ಮಹಿಳೆ ಪತ್ರ!

ಧರ್ಮಸ್ಥಳ ಪ್ರಕರಣದ ಸಂಬಂಧ ವಿಶೇಷ ತನಿಖಾ ತಂಡದ ಎದುರು ಹೊಸ ಸಾಕ್ಷಿಯೊಬ್ಬರು ಸಾಕ್ಷಿ ಹೇಳಲು ಮುಂದೆ ಬಂದಿದ್ದಾರೆ. ಮಂಡ್ಯದ ಚಿಕ್ಕಕೆಂಪಮ್ಮ ಎಂಬ 62 ವರ್ಷದ ಮಹಿಳೆ ಎಸ್‌ಐಟಿಗೆ ಪತ್ರ ಬರೆದಿದ್ದು, ಕೆಲವು ಪುರುಷರು ಸೌಜನ್ಯಳನ್ನು ಎಳೆದುಕೊಂಡು ಹೋಗಿ ಕಾರಿನಲ್ಲಿ ಅಪಹರಿಸುವುದನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.

ಧರ್ಮಸ್ಥಳದ ಸುತ್ತಮುತ್ತ ನಡೆದಿದೆ ಎನ್ನಲಾಗುತ್ತಿರುವ ಹಲವಾರು ಅಪಹರಣ, ಅತ್ಯಾಚಾರ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿದ್ದು, ಇಲ್ಲಿನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸಾಕ್ಷಿಗಳು ಇದ್ದರೆ ಬಂದು ಹೇಳಿಕೆ ನೀಡಬಹುದು ಎಂದು ತಿಳಿಸಿರುವುದು ಸ್ವಾಗತಾರ್ಹ ವಿಚಾರ ಹಾಗೂ ನನಗೆ ಹೆಚ್ಚು ಧೈರ್ಯವನ್ನು ಕೊಟ್ಟಿದೆ. ಹಾಗಾಗೀ ನಾನು ಒಂದು ಸಾಕ್ಷಿಯಾಗಿ ತಮ್ಮ ಮುಂದೆ ಬರಲು ಇಚ್ಚಿಸುತ್ತೇನೆ ಎಂದು ಹೇಳಿದ್ದಾರೆ. ಚಿಕ್ಕಕೆಂಪಮ್ಮ ನೀಡಿರುವ ದೂರು ಸ್ವೀಕರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಎಸ್‌ಐಟಿ ಇನ್ನೂ ದೃಢಪಡಿಸಿಲ್ಲ.

Mysuru Dasara ಉದ್ಘಾಟನೆಗೆ ಬಾನು ಮುಸ್ತಾಕ್ ಆಯ್ಕೆ: Siddaramaiah ಸಮರ್ಥನೆ

ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್ ಆಯ್ಕೆಯನ್ನು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ದಸರಾ ನಾಡಹಬ್ಬ ಧರ್ಮಾತೀತ, ಜಾತ್ಯಾತೀತ ಹಬ್ಬ, ಈ ಹಬ್ಬವನ್ನು ಇಂಥವರೇ ಉದ್ಘಾಟನೆ ಮಾಡಬೇಕೆಂಬುದಿಲ್ಲ ಎಲ್ಲಾ ಧರ್ಮದವರು ನಾಡ ಹಬ್ಬ ಆಚರಿಸುತ್ತಾರೆ. ಹಾಗಾಗಿ ದಸರಾ ಉದ್ಘಾಟನೆಗೆ ಸಾಹಿತಿ ಭಾನು ಮುಸ್ತಾಕ್ ಅವರನ್ನು ಕರೆದಿರುವುದು ಸೂಕ್ತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಧರ್ಮಾಂಧರು ಮಾತ್ರ ಬಾನು ಮುಸ್ತಾಕ್ ಹೆಸರನ್ನು ವಿರೋಧಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದಾರೆ. ಇದೇ ವೇಳೆ ಬಾನು ಮುಷ್ತಾಕ್ ದನದ ಮಾಂಸ ತಿಂದು ದಸರಾ ಉದ್ಘಾಟಿಸಿ ಬಿಡುತ್ತಾರೇನೋ? ಎಂಬ ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಅವರು ದನ ತಿನ್ನುವುದನ್ನು ಬಿಜೆಪಿಯವರು ನೋಡಿದ್ದಾರಾ? ಈ ಡೋಂಗಿ ಮಾತಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Dharmasthalaದ ವಿರುದ್ಧ ಷಡ್ಯಂತ್ರ: ಪ್ರಕರಣದ ಕುರಿತು ಎನ್ಐಎ ತನಿಖೆಗೆ ಆಗ್ರಹಿಸಿ BJP4 Janata Dal ಧರ್ಮ ಸಮಾವೇಶ

ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ವಿರೋಧಿಸಿ ಧರ್ಮಸ್ಥಳ ಪ್ರಕರಣದ ಎನ್ಐಎ ತನಿಖೆಗೆ ಆಗ್ರಹಿಸಿ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಪ್ರತ್ಯೇಕ ಹೋರಾಟಕ್ಕೆ ಮುಂದಾಗಿದ್ದು, ಜೆಡಿಎಸ್ ಇಂದು ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡಿದ್ದರೆ, ನಾಳೆ ಬಿಜೆಪಿ ಧರ್ಮ ಸಮಾವೇಶವನ್ನು ಹಮ್ಮಿಕೊಂಡಿದೆ. ಈ ಸಮಾವೇಶದಲ್ಲಿ ಜೆಡಿಎಸ್ ಸಹ ಭಾಗಿಯಾಗಲಿದೆ. ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಹಾಸನದಿಂದ ಜೆಡಿಎಸ್ ಯಾತ್ರೆ ನಡೆದಿದ್ದು, ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು ಕಾರ್ಯಕರ್ತರು ಭಾಗಿಯಾಗಿದ್ದಾರೆ. ಹಿಂದೂಗಳ ಅಸ್ಮಿತೆ, ನಂಬಿಕೆ ಹಾಗೂ ಭಾವನೆಗಳಿಗೆ ಘಾಸಿ ಮಾಡುತ್ತಿರುವ ಧರ್ಮ ದ್ರೋಹಿಗಳಿಗೆ, ಹಿಂದೂ ವಿರೋಧಿಗಳಿಗೆ ಕಠಿಣ ಎಚ್ಚರಿಕೆ ನೀಡುವ ಜತೆಗೆ ಧಾರ್ಮಿಕ ಕ್ಷೇತ್ರಗಳ ರಕ್ಷಣೆಗೆ ಬದ್ಧತೆಯನ್ನು ತೋರುವುದು ಈ ಅಭಿಯಾನದ ಉದ್ದೇಶವಾಗಿದೆ.

ಇಂದಿನಿಂದ ಆಸ್ತಿ ನೋಂದಣಿ ಶುಲ್ಕ ದುಪ್ಪಟ್ಟು!; ಜನತೆಗೆ ಮತ್ತೊಂದು ಬೆಲೆ ಏರಿಕೆ ಬರೆ!

ಜನರಿಗೆ ದಿನನಿತ್ಯದ ಬೆಲೆ ಏರಿಕೆಯ ಒತ್ತಡದ ನಡುವೆ ರಾಜ್ಯ ಸರ್ಕಾರ ಮತ್ತೊಂದು ಆರ್ಥಿಕ ಆಘಾತವನ್ನು ಒಡ್ಡಿದೆ. ಆಗಸ್ಟ್ 31 ರಿಂದ ರಾಜ್ಯದ ಆಸ್ತಿ ನೋಂದಣಿ ಶುಲ್ಕವನ್ನು ದುಪ್ಪಟ್ಟುಗೊಳಿಸಲಾಗಿದ್ದು, ಈ ಕ್ರಮದಿಂದ ಜನರಿಗೆ ಮತ್ತೊಂದು ಹೊರೆ ಬಿದ್ದಂತಾಗಿದೆ. ಈವರೆಗೆ ರಾಜ್ಯದಲ್ಲಿ ಭೂಮಿ, ನಿವೇಶನ, ಫ್ಲ್ಯಾಟ್, ಮನೆ ಸೇರಿದಂತೆ ಸ್ಥಿರಾಸ್ತಿ ಖರೀದಿಯ ಸಂದರ್ಭದಲ್ಲಿ ಶೇ.1ರಷ್ಟು ನೋಂದಣಿ ಶುಲ್ಕ ಮತ್ತು ಶೇ.5.6ರಷ್ಟು ಮುದ್ರಾಂಕ ಶುಲ್ಕವಿತ್ತು, ಒಟ್ಟಾರೆ ಶೇ.6.6ರಷ್ಟು ಶುಲ್ಕವನ್ನು ಖರೀದಿದಾರರು ಪಾವತಿಸಬೇಕಿತ್ತು. ಆದರೆ, ಈಗ ಈ ಶುಲ್ಕವನ್ನು ಶೇ.7.6ಕ್ಕೆ ಏರಿಸಲಾಗಿದೆ, ಇದರಿಂದ ಆಸ್ತಿ ಖರೀದಿದಾರರಿಗೆ ಹೆಚ್ಚಿನ ಆರ್ಥಿಕ ಭಾರವಾಗಲಿದೆ.

ಗಣಪತಿ ಮೆರವಣಿಗೆ ವೇಳೆ ಸ್ಫೋಟ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಪಟಾಕಿಗೆ ಬೆಂ.ಗ್ರಾಮಾಂತರ ಜಿಲ್ಲಾಡಳಿತ ನಿಷೇಧ!

ಗಣಪತಿ ಮೆರವಣಿಗೆ ವೇಳೆ ನಡೆದ ಸ್ಫೋಟದಲ್ಲಿ 10ನೇ ತರಗತಿ ವಿದ್ಯಾರ್ಥಿ ಮೃತಪಟ್ಟು, ಒಂಬತ್ತು ಮಂದಿ ಗಾಯಗೊಂಡ ಘಟನೆ ಬೆನ್ನಲ್ಲೇ ಗಣೇಶ ಮೂರ್ತಿ ವಿಸರ್ಜನೆ ಧಾರ್ಮಿಕ ಕಾರ್ಯಕ್ರಮಗಳು ಮತ್ತು ರಾಜಕೀಯ ಕಾರ್ಯಕ್ರಮಗಳಲ್ಲಿ ಪಟಾಕಿ ಸಿಡಿಸುವುದನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ನಿಷೇಧಿಸಿದೆ. ದೊಡ್ಡಬಳ್ಳಾಪುರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಮತ್ತೂರು ಗ್ರಾಮದಲ್ಲಿ ಗಣಪತಿ ಮೆರವಣಿಗೆ ವೇಳೆ ನಡೆದ ಸ್ಫೋಟದಲ್ಲಿ 15 ವರ್ಷದ ಧನುಷ್ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಗಣೇಶ ಮೂರ್ತಿಯನ್ನು ಫೋರ್ಕ್ ಲಿಫ್ಟ್ ನಲ್ಲಿ ಇಡಲಾಗಿತ್ತು. ನಿಮಜ್ಜನಕ್ಕೆ ತೆರಳುತ್ತಿದ್ದಾಗ ಚಾಲಕನ ಸೀಟಿನ ಹಿಂದೆ ಇರಿಸಲಾಗಿದ್ದ ಪಟಾಕಿಗಳ ಪ್ಲಾಸ್ಟಿಕ್ ಚೀಲ ಸ್ಫೋಟಗೊಂಡಿದೆ. ಇಂಜಿನ್ ಬಿಸಿಯಿಂದಾಗಿ ಪಟಾಕಿಗಳು ಸ್ಪೋಟಗೊಂಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ. ಬಸವರಾಜ ಬಿಎನ್‌ಎಸ್‌ಎಸ್ ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ "ಐತಿಹಾಸಿಕ ನಿರ್ಧಾರ"; ಐದು ಪಾಲಿಕೆಗೆ ಆಯುಕ್ತರ ನೇಮಕ

ದಶಕಗಳ ಪ್ರಯತ್ನಕ್ಕೆ Trump ಕೊಳ್ಳಿ ಇಟ್ಟಿದ್ದಾರೆ: ಅಧ್ಯಕ್ಷನ ಆತುರ ನಿರ್ಧಾರಗಳೇ ಭಾರತ-ರಷ್ಯಾ-ಚೀನಾ ದೋಸ್ತಿಗೆ ಕಾರಣ!

ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್?: ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ವರ್ಲ್ಡ್ ಟ್ರಾನ್ಸ್‌ಪ್ಲಾಂಟ್ ಗೇಮ್ಸ್: 63 ಪದಕ ಪಡೆದು ಮಿಂಚಿದ ಭಾರತದ ಕ್ರೀಡಾಪಟುಗಳು!

Cricket: 'Alcohol, Pornography...': ಡ್ರೀಮ್11 ಹೊರಕ್ಕೆ, ಜೆರ್ಸಿ ಸ್ಪಾನ್ಸರ್‌ಗೆ BCCI ಅರ್ಜಿ ಆಹ್ವಾನ, ಡೆಡ್‌ಲೈನ್ ನಿಗದಿ, ಅರ್ಹತೆ ಏನು?

SCROLL FOR NEXT