ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ 
ರಾಜ್ಯ

ಬೆಳಗಾವಿ: ಕಿಯೋಸ್ಕ್‌‌ನಿಂದ ಎಟಿಎಂ ಯಂತ್ರ ಕಳ್ಳತನ; ಒಡೆಯಲು ಆಗದೆ ಬಿಸಾಡಿ ಹೋದ ಖದೀಮರು! Video

ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಇಂಡಿಯಾ ಬ್ಯಾಂಕ್‌ ಎಟಿಎಂ ಯಂತ್ರವನ್ನೇ ಕಳ್ಳರು ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿರುವ ಕಿಯೋಸ್ಕ್‌ನಲ್ಲಿ ಸೋಮವಾರ ರಾತ್ರಿ ಕಳ್ಳತನ ನಡೆದಿದ್ದು, ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿದೆ ಎಂದು ಅವರು ಹೇಳಿದರು.

ದುಷ್ಕರ್ಮಿಗಳು ಎಟಿಎಂ ಯಂತ್ರವನ್ನು ಕಿಯೋಸ್ಕ್‌ನಿಂದ ಹೊರತೆಗೆದುಕೊಂಡು ಬಂದು, ಅದನ್ನು ತಳ್ಳುವ ಗಾಡಿಯಲ್ಲಿಟ್ಟುಕೊಂಡು ಸುಮಾರು 200 ಮೀಟರ್ ದೂರ ತಳ್ಳಿಕೊಂಡು ಹೋಗಿದ್ದಾರೆ. ಬಳಿಕ ತಮ್ಮ ವಾಹನದಲ್ಲಿ ಯಂತ್ರವನ್ನು ಇರಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಗಳಲ್ಲಿ ಒಂದರಲ್ಲಿ, ಇಬ್ಬರು ವ್ಯಕ್ತಿಗಳು ಖಾಲಿ ಗಾಡಿಯನ್ನು ಕಿಯೋಸ್ಕ್ ಕಡೆಗೆ ತಳ್ಳಿಕೊಂಡು ಬರುತ್ತಿರುವುದು ಕಂಡುಬಂದಿದೆ.

ಪ್ರಾಥಮಿಕ ತನಿಖೆಗಳ ಆಧಾರದ ಮೇಲೆ, 1 ಲಕ್ಷ ರೂ.ಗೂ ಹೆಚ್ಚು ಹಣ ಹೊಂದಿದ್ದ ಯಂತ್ರವನ್ನು ಶಂಕಿತರು ತೆರೆಯಲು ಯತ್ನಿಸಿದ್ದಾರೆ. ಆದರೆ, ವಿಫಲವಾದಾಗ ಕೆಲವು ಮೀಟರ್ ದೂರದಲ್ಲಿ ಅದನ್ನು ಬಿಟ್ಟು ಹೋಗಿದ್ದಾರೆ. ನಂತರ ಅದನ್ನು ವಶಪಡಿಸಿಕೊಳ್ಳಲಾಗಿದ್ದು, ನಗದು ಹಾಗೆಯೇ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳ್ಳತನ ನಡೆದ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿ ಸುಮಾರು 15 ದಿನಗಳ ಹಿಂದೆ ಹೊಸ ಎಟಿಎಂ ಅನ್ನು ತೆರೆಯಲಾಗಿದ್ದರಿಂದ, ಈ ಕಿಯೋಸ್ಕ್ ಅನ್ನು ಮುಚ್ಚಲಾಗಿತ್ತು ಮತ್ತು ಎಲ್ಲ ಸೆನ್ಸಾರ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು ಎಂದು ಅಧಿಕಾರಿ ಹೇಳಿದರು.

ಹಳೆಯ ಕಿಯೋಸ್ಕ್‌ಗೆ ಕಾವಲುಗಾರ ಇರಲಿಲ್ಲ, ಇದು ಕಳ್ಳತನ ಮಾಡಲು ದುಷ್ಕರ್ಮಿಗಳಿಗೆ ಸುಲಭವಾಯಿತು.

ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ದಾವೋಸ್ ಪ್ರಯಾಣ: ಆಗಸದಲ್ಲಿ ಆಚ್ಚರಿಯ​ ಬೆಳವಣಿಗೆ; ಇದ್ದಕ್ಕಿದ್ದಂತೆ ಆಗಿದ್ದೇನು?

27 ವರ್ಷದಲ್ಲಿ 3 ಗಗನ ಯಾತ್ರೆ: 608 ದಿನಗಳ ಬಾಹ್ಯಾಕಾಶ ವಾಸ; ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್​ ನಿವೃತ್ತಿ!

ಅಯೋಧ್ಯೆಯ ರಾಮ ಕಥಾ ವಸ್ತುಸಂಗ್ರಹಾಲಯಕ್ಕೆ 233 ವರ್ಷ ಹಳೆಯ ಅಪರೂಪದ ವಾಲ್ಮೀಕಿ ರಾಮಾಯಣ ಹಸ್ತಪ್ರತಿ ಉಡುಗೊರೆ!

ಪಾಲಿಕೆ ಚುನಾವಣೆಯಲ್ಲಿ ಬ್ಯಾಲಟ್ ಪೇಪರ್ ಬಳಕೆ: GBA ಅಧಿಕಾರಿಗಳಿಗೆ ಗ್ರಾಮ ಪಂಚಾಯತ್ ಸಿಬ್ಬಂದಿಯಿಂದ ತರಬೇತಿ

Heritage boom: ಲಕ್ಕುಂಡಿಯಲ್ಲಿ ಭೂಮಿಗೆ ಬಂಗಾರದ ಬೆಲೆ; ನಿಧಿ ಪತ್ತೆ ನಂತರ ಖರೀದಿಗೆ ಮುಗಿಬೀಳುತ್ತಿರುವ ರಿಯಲ್ ಎಸ್ಟೇಟ್ ಕಂಪನಿಗಳು!

SCROLL FOR NEXT