ಸಾಂದರ್ಭಿಕ ಚಿತ್ರ 
ರಾಜ್ಯ

ತಮ್ಮ ಸೇವೆ ಖಾಯಂಗೊಳಿಸುವಂತೆ ವಿಶ್ವವಿದ್ಯಾಲಯಗಳ ಅತಿಥಿ ಉಪನ್ಯಾಸಕರು ಆಗ್ರಹ

ಬೆಂಗಳೂರು ವಿಶ್ವವಿದ್ಯಾಲಯವು 1998 ರಿಂದ ಖಾಲಿ ಇರುವ ಪ್ರಾಧ್ಯಾಪಕ ಅಥವಾ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಯಾವುದೇ ನೇಮಕಾತಿಯನ್ನು ನಡೆಸಿಲ್ಲ ಎಂದು ಸಂಘದ ಅಧ್ಯಕ್ಷ ಡಾ. ಗಂಗಾಧರ ರೆಡ್ಡಿ ಎನ್ ಅವರು ಹೇಳಿದ್ದಾರೆ.

ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳ ಅತಿಥಿ ಉಪನ್ಯಾಸಕರ ಸಂಘದ ಸದಸ್ಯರು ತಮ್ಮ ಸೇವೆಯನ್ನು ಆದಷ್ಟು ಬೇಗ ಕಾಯಂಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯವು 1998 ರಿಂದ ಖಾಲಿ ಇರುವ ಪ್ರಾಧ್ಯಾಪಕ ಅಥವಾ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಯಾವುದೇ ನೇಮಕಾತಿಯನ್ನು ನಡೆಸಿಲ್ಲ ಎಂದು ಸಂಘದ ಅಧ್ಯಕ್ಷ ಡಾ. ಗಂಗಾಧರ ರೆಡ್ಡಿ ಎನ್ ಸೋಮವಾರ ಹೇಳಿದ್ದಾರೆ.

ಇದು ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಗುಣಮಟ್ಟ ಕುಸಿಯಲು ಕಾರಣವಾಗುತ್ತದೆ ಎಂದು ಅವರು ಹೇಳಿದರು.

ಮೈಸೂರು, ತುಮಕೂರು, ಹಂಪಿ, ಗುಲ್ಬರ್ಗ ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಸೇರಿದಂತೆ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿಯೂ "ಅತಿಥಿ ಉಪನ್ಯಾಸಕರೇ ಶೇ. 94 ರಷ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ(NIRF) ಅಡಿಯಲ್ಲಿ ಉತ್ತಮ ಶ್ರೇಯಾಂಕಕ್ಕಾಗಿ ಮತ್ತು ಕೇಂದ್ರ ನಿಧಿಯನ್ನು ಪಡೆಯಲು, ವಿಶ್ವವಿದ್ಯಾಲಯವು ಅತಿಥಿ ಉಪನ್ಯಾಸಕರ ಪಟ್ಟಿಯನ್ನು ಸಲ್ಲಿಸಿದೆ. ಅತಿಥಿ ಉಪನ್ಯಾಸಕರು SLET, NET ಮತ್ತು PhD ಸೇರಿದಂತೆ ಯುಜಿಸಿ ಮಾನದಂಡಗಳ ಪ್ರಕಾರ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ ಮತ್ತು 15 ವರ್ಷಗಳ ಬೋಧನಾ ಅನುಭವವನ್ನು ಹೊಂದಿದ್ದಾರೆ. ಈ ಅರ್ಹತೆಗಳ ಹೊರತಾಗಿಯೂ, ಅವರ ಸೇವೆಗಳನ್ನು ಕಾಯಂಗೊಳಿಸಲಾಗಿಲ್ಲ. ಅವರಿಗೆ ರೂ. 25,000 ರಿಂದ ರೂ. 50,000 ರವರೆಗೆ ಮಾತ್ರ ವೇತನ ನೀಡಲಾಗುತ್ತದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕೋರ್ಟ್‌ನಲ್ಲಿ ಮುಟ್ಟಿನ ರಜೆ ಸಮರ್ಥಿಸಿಕೊಂಡ ಸರ್ಕಾರ; ವಿಚಾರಣೆ ಜನವರಿ 20 ಕ್ಕೆ ಮುಂದೂಡಿಕೆ

ಕೇಂದ್ರ ಅರಣ್ಯ ಇಲಾಖೆಯಿಂದ ಸಿಗದ ಅನುಮತಿ: ಎತ್ತಿನ ಹೊಳೆ ಯೋಜನೆ ಮತ್ತಷ್ಟು ವಿಳಂಬ

ರಾಜ್ಯದ ಯುವ ಉದ್ಯೋಗಾಕಾಂಕ್ಷಿಗಳ ತಾಳ್ಮೆ ಪರೀಕ್ಷಿಸಬೇಡಿ: ಸರ್ಕಾರಕ್ಕೆ ವಿಜಯೇಂದ್ರ ಎಚ್ಚರಿಕೆ

ಭಾರತ ಬ್ರಿಕ್ಸ್ ಕರೆನ್ಸಿ ಬೇಡ ಎಂದದ್ದೇಕೆ? (ಹಣಕ್ಲಾಸು)

'BJP– RSS ಭಿನ್ನಾಭಿಪ್ರಾಯದಿಂದ ಪಿತೂರಿ: ವೀರೇಂದ್ರ ಹೆಗ್ಗಡೆ ಅವರ ಮೇಲೆ ಷಡ್ಯಂತ್ರ; ನನ್ನ ನಿರ್ಧಾರಕ್ಕೆ ಜೈನ ಸಮುದಾಯದಿಂದ ಮೆಚ್ಚುಗೆ'

SCROLL FOR NEXT