ಮದುವೆ ನಡೆಯುತ್ತಿದ್ದ ಮಂಟಪ  
ರಾಜ್ಯ

ಚಿಕ್ಕಮಗಳೂರು: ಬೇರೆ ಯುವತಿ ಜೊತೆ ವಿವಾಹ; ಕಲ್ಯಾಣ ಮಂಟಪಕ್ಕೆ ನುಗ್ಗಿ ಯುವಕನಿಗೆ ಶಾಕ್​ ಕೊಟ್ಟ ಲವರ್!

ನೇರವಾಗಿ ಮದುವೆ ಮಂಟಪಕ್ಕೆ ಬಂದ ಹಾಸನ ಜಿಲ್ಲೆ ಬೇಲೂರು ಮೂಲದ ಯುವತಿ ನೀನು ಮೋಸ ಮಾಡಿದ್ದೀಯಾ, ಈಗ ನನ್ನನ್ನು ಮದುವೆಯಾಗುತ್ತೀಯಾ ಇಲ್ಲವಾ ಎಂದು ರಂಪಾಟ ಮಾಡಿದ್ದಾಳೆ.

ಚಿಕ್ಕಮಗಳೂರು: ಸಿನಿಮಾಗಳಲ್ಲಿ ನೋಡುತ್ತಿದ್ದ ದೃಶ್ಯಗಳು ಇತ್ತೀಚೆಗೆ ನಿಜಜೀವನದಲ್ಲಿ ನಡೆಯುತ್ತಿವೆ. ಲವರ್​ಗೆ ಕೈಕೊಟ್ಟು ಬೇರೆ ಯುವತಿ ಜೊತೆಗೆ ಮದುವೆಯಾದ ಯುವಕನಿಂದ ಮೋಸ ಹೋದ ಅಶ್ವಿನಿ ಎಂಬ ಯುವತಿ ಮದುವೆ ಮಂಟಪಕ್ಕೆ ನೇರವಾಗಿ ಹೋಗಿ ರಂಪಾಟ ನಡೆಸಿರುವ ಘಟನೆ ಚಿಕ್ಕಮಗಳೂರಿನ ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಕಳೆದ 10 ವರ್ಷದಿಂದ ಶರತ್​ ಎಂಬಾತನನ್ನು ಯುವತಿ ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿ ಕೊನೆಗೆ ಮೋಸ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ನೇರವಾಗಿ ಮದುವೆ ಮಂಟಪಕ್ಕೆ ಬಂದ ಹಾಸನ ಜಿಲ್ಲೆ ಬೇಲೂರು ಮೂಲದ ಯುವತಿ ನೀನು ಮೋಸ ಮಾಡಿದ್ದೀಯಾ, ಈಗ ನನ್ನನ್ನು ಮದುವೆಯಾಗುತ್ತೀಯಾ ಇಲ್ಲವಾ ಎಂದು ರಂಪಾಟ ಮಾಡಿದ್ದಾಳೆ.

ಶರತ್​​ ಮೋಸ ಮಾಡಿರುವ ವಿಚಾರವಾಗಿ 8 ತಿಂಗಳ ಹಿಂದೆಯೇ ಆಲ್ದೂರು ಪೊಲೀಸ್ ‌ಠಾಣೆಗೆ ಯುವತಿ ದೂರು ನೀಡಿದ್ದಳು. ನಿನ್ನೆ ಶರತ್ ಮನೆಯ ಮುಂದೆ ಏಕಾಂಗಿ ಹೋರಾಟ ಕೂಡ ಮಾಡಿದ್ದಳು. ಅದರ ಮುಂದುವರಿದ ಭಾಗವಾಗಿ ಇಂದು ಮದುವೆ ಮಂಟಪಕ್ಕೆ ಬಂದು ನೊಂದ ಯುವತಿ ರಂಪಾಟ ನಡೆಸಿದ್ದಾಳೆ. ಮದುವೆ ಮಂಟಪದೊಳಗೆ ಧರಣಿ ಕುಳಿತಿದ್ದಾಳೆ. ಕೊನೆಗೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ನನಗೆ ಹಣ ಬೇಡ ಅವನು ಬೇಕು

ಮಾಧ್ಯಮಗಳ ಜೊತೆ ಮಾತಾಡಿದ ನೊಂದ ಯುವತಿ, ಇದೇ ಮಂಟಪದಲ್ಲಿ ನನ್ನ ಮದುವೆಯಾಗಬೇಕು. ಅಲ್ಲಿಯವರೆಗೂ ನಾನು ಹೋರಾಟ ಮಾಡುತ್ತೇನೆ. ನಾನು ಬರುವ ಮೊದಲೇ ಮದುವೆಯಾಗಿದೆ. ಈಗ ನನ್ನನ್ನು ಶರತ್ ಮದುವೆಯಾಗಬೇಕು. ಶರತ್ ಮನೆಯವರು ಹಣ ಕೊಡ್ತೀವಿ ಇಲ್ಲಿಂದ ಹೋಗು ಅಂದ್ರು. ನನಗೆ ಯಾವುದೇ ಹಣ ಬೇಡ, ಅವನೇ ನನ್ನನ್ನ ಮದುವೆ ಆಗಬೇಕು ಅಷ್ಟೇ ಎಂದು ಅಶ್ವಿನಿ ಹೇಳಿದ್ದಾರೆ.

ಹಲ್ಲೆ ಆರೋಪ, ಮಂಟಪ ಖಾಲಿ

ಅಶ್ವಿನಿ ಮಂಟಪದೊಳಗೆ ಪ್ರವೇಶಿಸುತ್ತಿದ್ದಂತೆ, ಹುಡುಗನ ಕಡೆಯವರು ಬಾಗಿಲು ಹಾಕಿಕೊಂಡರು. 'ಹುಡುಗನ ಕಡೆಯವರು ನನ್ನ ಮೇಲೆ ಹಲ್ಲೆ ಮಾಡಿ, ಎಳೆದಾಡಿದ್ದಾರೆ' ಎಂದು ಅಶ್ವಿನಿ ಆರೋಪಿಸಿದ್ದಾಳೆ. ಅಲ್ಲದೆ, ಸ್ಥಳದಲ್ಲಿದ್ದವರು ವಿಡಿಯೋ ಮಾಡದಂತೆ ಶರತ್ ಕುಟುಂಬದವರು ಕ್ಯಾಮರಾಗಳಿಗೆ ಅಡ್ಡ ಬಂದಿದ್ದಾರೆ. ಗಲಾಟೆ ತೀವ್ರವಾದ ಕಾರಣ, ಮದುವೆ ಮನೆಯವರು ದಿಢೀರನೆ ಕಲ್ಯಾಣ ಮಂಟಪವನ್ನು ಖಾಲಿ ಮಾಡಿ ಸ್ಥಳದಿಂದ ನಿರ್ಗಮಿಸಿದ್ದಾರೆ. ನ್ಯಾಯಕ್ಕಾಗಿ ಅಶ್ವಿನಿಯ ಹೋರಾಟ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹನೂರು ಶೂಟೌಟ್ ಪ್ರಕರಣ: ನಮ್ಮ ರಾಜ್ಯದ ಆಡಳಿತದಲ್ಲಿ ಮೂಗು ತೂರಿಸಬೇಡಿ, ನಿಮ್ಮ ಕೆಲಸ ನೋಡ್ಕೊಳ್ಳಿ; ತಮಿಳುನಾಡಿಗೆ ಸಿಎಂ ಡಿಕೆಶಿ ವಾರ್ನಿಂಗ್!

ಕೇರಳಿಗರದ್ದು ಇದೆಂಥ ಮನಸ್ಥಿತಿ: ನಟಿ ಮಾಳವಿಕಾಗೆ ಗೋಮಾಂಸ ಇಷ್ಟನಾ? ತಿಂತೀರಾ ಅಂತ ಕೇಳಿದ ಪತ್ರಕರ್ತ; ನೆಟ್ಟಿಗರ ಆಕ್ರೋಶ, Video!

Toxic: ಟಾಕ್ಸಿಕ್ ಬಿಡುಗಡೆಗೂ ಮುನ್ನವೇ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ರಾ ನಯನತಾರಾ? ಫೋಟೋ ವೈರಲ್!

‘ಆಕೆಯ ಹಿಂದಿನ ಚಟುವಟಿಕೆಗಳು ಹೇಗಿದ್ದವು?’: ಕಂಗನಾಗೆ ಬಾಬಾ ರಾಮ್​ದೇವ್ ತೀವ್ರ ತರಾಟೆ; ಸಂಸದೆ ವಿರುದ್ಧ ಕ್ರಮ ಕೈಗೊಳ್ಳುವಂತೆ BJPಗೆ ಆಗ್ರಹ

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​​ಗೆ ED ಶಾಕ್​: ಮನೆ, ಕಚೇರಿ ಸೇರಿದಂತೆ 13ಕ್ಕೂ ಹೆಚ್ಚು ಕಡೆ ದಾಳಿ