ಬೆಳಗಾವಿ: ಮರಾಠರು ಶಿವಾಜಿ ಮುಸ್ಲಿಂ ವಿರೋಧಿಯಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿರುವ ಸಂತೋಷ್ ಲಾಡ್, ಮರಾಠರು ಮುಸ್ಲಿಂ ವಿರೋಧಿ ಎಂದು ಬಿಂಬಿಸಿದ್ದೇವೆ. ನಾವು ಮೊಘಲರ ವಿರುದ್ಧ ಇದ್ದೆವು. ಆದರೆ ಮುಸ್ಲಿಂರ ವಿರೋಧಿಗಳಾಗಿರಲಿಲ್ಲ. ಯಾರು ಶಿವಾಜಿ ಮಹಾರಾಜರನ್ನು ಮುಸ್ಲಿಂ ವಿರೋಧಿ ಅಂತ ಹೇಳಬಾರದು. ಯಾರೂ ಇತಿಹಾಸದ ಬಗ್ಗೆ ಸುಳ್ಳು ಹೇಳಬಾರದು. ನಾನು ಮರಾಠ ಸಮುದಾಯದವನೇ ಎಂದು ಹೇಳಿದ್ದಾರೆ.
ಶಿವಾಜಿ ಮಹಾರಾಜರನ್ನು ಮುಸ್ಲಿಂ ವಿರೋಧಿ ಅಂತ ಯಾರು ಹೇಳಬಾರದು ಎಂಬ ಸಚಿವ ಸಂತೋಷ್ ಲಾಡ್ ಹೇಳಿಕೆ ಬೆನ್ನಲ್ಲೆ ಶಿವಾಜಿ ಬಗ್ಗೆ ಮಾತನಾಡಿರುವ ಶಾಸಕ ಯತ್ನಾಳ್, ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು. ಬಸನಗೌಡ ಇದ್ದವ ನಾನು ಬಷೀರ್ ಅಹ್ಮದ್ ಆಗಬೇಕಾಗುತ್ತಿತ್ತು ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದು, ಶಿವಾಜಿ ಮಹಾರಾಜರು ನಮ್ಮ ದೇಶದ ಆದರ್ಶ ವ್ಯಕ್ತಿ. ವಿಜಯಪುರದಲ್ಲಿ ಶಿವಾಜಿ ಪ್ರತಿಮೆ ಕೂರಿಸೋದು ಸುಲಭ ಅಲ್ಲ, ಏಕೆಂದರೆ ಅಲ್ಲಿ ಪಾಕಿಸ್ತಾನ ಮೇಡ್ ಬಹಳಷ್ಟಿದೆ ಎಂದು ಕಿಡಿಕಾರಿದರು ಒಂದು ಮುಂಜಾನೆ ಶಿವಾಜಿ ವಿಜಯಪುರಕ್ಕೆ ಹೊರಟಿದ್ದರು. ದೇಶದ್ರೋಹಿಗಳ ರುಂಡ ಕಡಿಯುವ ಕೆಲಸ ಈಗ ಆಗಬೇಕು. 2028ಕ್ಕೆ ನಾವೆಲ್ಲಾ ಈ ಕೆಲಸ ಮಾಡಬೇಕಿದೆ. ಮರಾಠ ಅಭಿವೃದ್ಧಿ ನಿಗಮ ವಿಚಾರವಾಗಿ ಚರ್ಚೆ ನಡೆಯಿತು. ಮರಾಠಿ ಭಾಷೆ ವಿರೋಧಿಸುತ್ತೀರಿ, ಉರ್ದು ಭಾಷೆ ಎಲ್ಲಿಯದ್ದು? ಮರಾಠಿ ಭಾಷೆ ವಿರೋಧಿಸುವವರು, ಉರ್ದು ಯಾಕೆ ವಿರೋಧಿಸಲ್ಲ. ಧಮ್, ತಾಕತ್ ಇದ್ದರೆ ಉರ್ದು ಭಾಷೆ ಬೋರ್ಡ್ ತೆಗೆಸಿರಿ. . ಎಲ್ಲರೂ ಯೋಗಿ ಆದಿತ್ಯನಾಥ್ ಆಗಬೇಕು ಎಂದು ಹೇಳಿದ್ದಾರೆ.