ಪ್ರಿಯಾಂಕ್ ಖರ್ಗೆ 
ರಾಜ್ಯ

ದ್ವೇಷ ಭಾಷಣ ಕಾಯ್ದೆಗೆ ಬಿಜೆಪಿ ಮತ್ತು ಅಂಗಸಂಸ್ಥೆಗಳು ಏಕೆ ಭಯಭೀತರಾಗುತ್ತಿವೆ?: ಪ್ರಿಯಾಂಕ್ ಖರ್ಗೆ

'ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ - 2025' ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ವಿರೋಧ ಪಕ್ಷಗಳು ವಿರೋಧಿಸಿವೆ.

ಬೆಳಗಾವಿ: ರಾಜ್ಯ ವಿಧಾನಸಭೆಯಲ್ಲಿ ದ್ವೇಷ ಭಾಷಣ ಮಸೂದೆಯನ್ನು ಮಂಡಿಸುವುದಕ್ಕೆ ಭಾರತೀಯ ಜನತಾ ಪಕ್ಷ (BJP) ವಿರೋಧ ಮಾಡುತ್ತಿರುವುದು ಏಕೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ಪ್ರಶ್ನಿಸಿದ್ದಾರೆ.

ಸುದ್ದಿಸಂಸ್ಥೆ ಎಎನ್ಐ ಜೊತೆಗೆ ಮಾತನಾಡಿದ ಅವರು, 'ದ್ವೇಷ ಭಾಷಣ ಮಸೂದೆ ಕುರಿತು ವಿಧಾನಸಭೆಯಲ್ಲಿ ಚರ್ಚಿಸಲಾಗುವುದು. ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ಏಕೆ ಭಯಭೀತರಾಗುತ್ತಿವೆ? ಅದಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ' ಎಂದು ತಿಳಿಸಿದರು.

ಪ್ರಸ್ತಾವಿತ ಕಾನೂನು ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟುಗಳಿಗೆ ಅನುಗುಣವಾಗಿದೆ. ಎಲ್ಲದಕ್ಕೂ ಒಂದು ಕಾನೂನು ಇದೆ. ಆದ್ದರಿಂದ ದ್ವೇಷ ಭಾಷಣಕ್ಕೂ ಕಾನೂನು ಜಾರಿಯಾಗುತ್ತಿದೆ. ಅದರಲ್ಲಿ ತಪ್ಪೇನು?' ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು.

ಇದೇ ರೀತಿಯ ಅಭಿಪ್ರಾಯಗಳನ್ನು ಪ್ರತಿಧ್ವನಿಸುತ್ತಾ ಸಚಿವ ಮಧು ಬಂಗಾರಪ್ಪ, 'ಸಾಮಾಜಿಕ ಮಾಧ್ಯಮವನ್ನು ಸರಿಯಾಗಿ ಬಳಸಬೇಕು. ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿಯನ್ನು ಹರಡುವುದು ಶಿಕ್ಷಾರ್ಹವಾಗಿರಬೇಕು" ಎಂದು ಅವರು ಹೇಳಿದರು.

'ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ - 2025'ಕ್ಕೆ ಡಿಸೆಂಬರ್ 4 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ವಿರೋಧ ಪಕ್ಷಗಳು ಇದನ್ನು ವಿರೋಧಿಸಿವೆ.

ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ, ಲಿಂಗದ ಆಧಾರದಲ್ಲಿ ದ್ವೇಷದ ಭಾಷಣ ಮಾಡುವವರನ್ನು ನಿರ್ಬಂಧಿಸಲು ಮುಂದಾಗಿರುವ ರಾಜ್ಯ ಸರ್ಕಾರವು, ಕಾಯ್ದೆಯನ್ನು ಜಾರಿಗೆ ತರಲಿದೆ. ಹೀಗಾಗಿ, ದ್ವೇಷ ಭಾಷಣವನ್ನು ನಿಗ್ರಹಿಸಲು ರಾಜ್ಯ ಸರ್ಕಾರ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು (ಪ್ರತಿಬಂಧಕ) ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಲಾಗಿದೆ. ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ಬಿಸಿ ಚರ್ಚೆಯಾಗುತ್ತಿರುವ ಮಸೂದೆ ಇದು.

ಈ ಕಾಯ್ದೆಯ ಅನ್ವಯ ದ್ವೇಷಾಪರಾಧ ಎಸಗಿದವರಿಗೆ ಒಂದು ವರ್ಷದಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇದೇ ಮುಂದುವರಿದರೆ, 2 ವರ್ಷದಿಂದ 10 ವರ್ಷದವರೆಗೆ ಜೈಲು ಶಿಕ್ಷೆ ನೀಡಲಾಗುತ್ತದೆ ಹಾಗೂ 50 ಸಾವಿರದಿಂದ ಒಂದು ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲೋಕಾಯುಕ್ತ ದಾಳಿ: ನಾಲ್ವರು ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ ಸಿಕ್ಕಿದ್ದು 18.2 ಕೋಟಿ ರೂ. ಅಕ್ರಮ ಆಸ್ತಿ!

ಕೇಂದ್ರದ ಆದೇಶವನ್ನೇ ಧಿಕ್ಕರಿಸಿದ ಕೇರಳ: IFFK ಯಲ್ಲಿ ನಿರ್ಬಂಧಿತ ಎಲ್ಲಾ ಚಲನಚಿತ್ರಗಳನ್ನು ಪ್ರದರ್ಶಿಸಲು ಆದೇಶ!

ಕಾಂಗ್ರೆಸ್ ಸಂಸದರಿಗೆ 'ವಿಪ್' ಜಾರಿ: ಮುಂದಿನ ಮೂರು ದಿನ ಲೋಕಸಭೆಯಲ್ಲಿ ಕಡ್ಡಾಯ ಹಾಜರಿಗೆ ಸೂಚನೆ

2047 ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ; ತಂತ್ರಜ್ಞಾನ, ಮೌಲ್ಯಗಳನ್ನು ಬಲಪಡಿಸುವ ಅಗತ್ಯವಿದೆ: ರಾಷ್ಟ್ರಪತಿ ಮುರ್ಮು

Hijab ವಿವಾದ: 'ಅಪಾರ್ಥ ಬೇಡ.. ನಿತೀಶ್ ಕುಮಾರ್ ತಂದೆ ಸ್ವರೂಪ'; ಬಿಹಾರ ಮುಸ್ಲಿಂ ಸಚಿವ ಸ್ಪಷ್ಟನೆ

SCROLL FOR NEXT