ಮ್ಯೂಸಿಕ್ ಮೈಲಾರಿ  
ರಾಜ್ಯ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಜನಪದ ಗಾಯಕ ಮ್ಯೂಸಿಕ್ ಮೈಲಾರಿ ಅರೆಸ್ಟ್

ಬೆಳಗಾವಿ ಜಿಲ್ಲೆಯ ಒಂದು ಗ್ರಾಮದಲ್ಲಿ ಹನುಮಂತ ದೇವರ ಓಕುಳಿ ಪ್ರಯುಕ್ತ ಆಯೋಜಿಸಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಹಾಡಲು ಮ್ಯೂಸಿಕ್ ಮೈಲಾರಿ ಬಂದಿದ್ದ. ಇದೇ ಆರ್ಕೆಸ್ಟ್ರಾದಲ್ಲಿ ನೃತ್ಯ ಮಾಡಲು ಅಪ್ರಾಪ್ತ ಬಾಲಕಿ ಸಹ ನೃತ್ಯ ಪ್ರದರ್ಶನಕ್ಕಾಗಿ ಬಂದಿದ್ದಾಳೆ.

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ ಸೇರಿ 6 ಜನ ಸಹಚರರ ಮೇಲೆ ಪೋಕ್ಸೋ ಕೇಸ್‌ ದಾಖಲಾಗಿದೆ. ಈ ಘಟನೆ ಅಕ್ಟೋಬರ್‌ 24 ರಂದು ಬೆಳಗಾವಿಯಲ್ಲಿ ನಡೆದಿದ್ದು, ಅಪ್ರಾಪ್ತ ಬಾಲಕಿ ಬೆಳಗಾವಿ ಮೂಲದವಳು ಎಂದು ತಿಳಿದುಬಂದಿದೆ.

ಅ. 24ರಂದು ಬೆಳಗಾವಿ ಜಿಲ್ಲೆಯ ಒಂದು ಗ್ರಾಮದಲ್ಲಿ ಹನುಮಂತ ದೇವರ ಓಕುಳಿ ಪ್ರಯುಕ್ತ ಆಯೋಜಿಸಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಹಾಡಲು ಮ್ಯೂಸಿಕ್ ಮೈಲಾರಿ ಬಂದಿದ್ದ. ಇದೇ ಆರ್ಕೆಸ್ಟ್ರಾದಲ್ಲಿ ನೃತ್ಯ ಮಾಡಲು ಅಪ್ರಾಪ್ತ ಬಾಲಕಿ ಸಹ ನೃತ್ಯ ಪ್ರದರ್ಶನಕ್ಕಾಗಿ ಬಂದಿದ್ದಾಳೆ.

ಕಾರ್ಯಕ್ರಮ ಮುಗಿದ ಬಳಿಕ ಆಕೆಯನ್ನು ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಲಾಗಿದ್ದು, ವಿಡಿಯೋ ಸಹ ಮಾಡಿಕೊಂಡಿದ್ದಾರೆ. ನಂತರ ಆತನ 6 ಜನ ಸಹಚರರು ಒಂದು ವೇಳೆ ಈ ಘಟನೆ ಬಗ್ಗೆ ಎಲ್ಲಿಯೂ ಬಾಯಿ ಬಿಡದಂತೆ ಎಂದು ವಿಡಿಯೋ ಮಾಡಿ ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ಬಾಲಕಿ ಗಂಭೀರ ಆರೋಪ ಮಾಡಿದ್ದಾಳೆ. ಡಿ.14 ರಂದು ಬಾಲಕಿ ಬೆಳಗಾವಿಯ ಚಿಕ್ಕೋಡಿ ಪೊಲೀಸ್‌ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾಳೆ. ಈ ಕುರಿತು ಚಿಕ್ಕೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಂತರ ಡಿ.15 ರಂದು ಬಾಗಲಕೋಟೆಯ ಮಹಾಲಿಂಗಪುರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಧಾನಸಭೆಯಲ್ಲಿ 'ಗೃಹ ಲಕ್ಷ್ಮಿ' ಕೋಲಾಹಲ: ಬಿಜೆಪಿ ಸಭಾತ್ಯಾಗ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಷಾದ.. ಇಷ್ಟಕ್ಕೂ ಆಗಿದ್ದೇನು? Video

ಪ್ರಚಾರಕ್ಕಾಗಿ ಕಾಂಗ್ರೆಸ್ ಬಿಜೆಪಿಗಿಂತ ಹೆಚ್ಚು ಖರ್ಚು ಮಾಡಿದೆ; ಗೆದ್ದ ಕ್ಷೇತ್ರಗಳು ಮಾತ್ರ ಶೂನ್ಯ: ADR

Video: ಡಾಲ್ಹೌಸಿ ಬಳಿ ಇಳಿಜಾರಿಗೆ ಉರುಳಿದ ವ್ಯಾನ್, ಪ್ರಯಾಣಿಕರ ನಾಟಕೀಯ ಪಾರು!

15 ವರ್ಷ ಮೀರಿದ ವಾಹನಗಳು ಗುಜುರಿಗೆ, ಸರ್ಕಾರದಿಂದ ಅನುಮೋದನೆ: ಸಚಿವ ರಾಮಲಿಂಗಾರೆಡ್ಡಿ

ಭಾರತಕ್ಕೆ NCP ಧಮ್ಕಿ: ಭದ್ರತಾ ಕಾರಣ ಢಾಕಾದಲ್ಲಿರುವ ವೀಸಾ ಕೇಂದ್ರ ಮುಚ್ಚಿದ ಭಾರತ!

SCROLL FOR NEXT