ಬೆಸ್ಕಾಂ ನ ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ನಾಳೆ (ಡಿ.22) ರಂದು ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತವಾಗಲಿದೆ.
ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಪ್ರೆಸ್ಟೀಜ್ ಫಾಲ್ಕಾನ್ ಸಿಟಿ ಉಪಕೇಂದ್ರ ಪ್ರದೇಶದಲ್ಲಿ ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಅಂಚೆ ಪಾಳ್ಯ ಪ್ರದೇಶದಲ್ಲಿಯೂ ವಿದ್ಯುತ್ ವ್ಯತ್ಯಯ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಶೋಭಾ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್, ಗ್ಲೋಬಲ್ ಮಾಲ್ ಕಂಬೀಪುರ, ಕಾರುಬೆಲೆ, ಹೆಚ್.ಗೊಲ್ಲಹಳ್ಳಿ, ಕಾಟನಾಯಕನಪುರ, ವರಹಸಂದ್ರ, ಸ್ವಾಮೀಜಿನಗರ, ಅಂಚೆಪಾಳ್ಯ, ಅಪ್ರಮೇಯನಗರ, ಕೃಷ್ಣ ಟೆಂಪಲ್ ಸರ್ಕಾರಿ ಶಾಲೆ, ಪ್ರಾವಿಡೆಂಡ್ ಅಪಾರ್ಟ್‌ಮೆಂಟ್, ವಿ.ಬಿ.ಹೆಚ್.ಸಿ ಅವಾಟೋಮೆಂಟೋ, ಇ.ಸಿ. ಎನೋ ಶಾಲಿಜೋ ರೂಡೋ, ಗುಡ್‌ಅರ್ಥ್, ಶ್ರೀನಿಧಿ ಗ್ರೀನ್ ಲೇಔಟ್, ದೇವಗೆರೆ, ಆನೆಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಪೋರಮ್ ಮಾಲ್, ಫ್ರೇಸ್ಟೀಜ್ ಪಾಲ್ಕಾನ್ ಸಿಟಿ ಅಪಾರ್ಟ್ಮೆಂಟ್, ದೊಡ್ಡಕಲ್ಲಸಂದ್ರ, ಕನಕಪುರ ಮೇನ್ ರೋಡ್, ನಾರಾಯಣ ನಗರ 3ನೇ ಬ್ಲಾಕ್, ಮುನಿ ರೆಡ್ಡಿ ಲೇಔಟ್, ಕುಮಾರನ್ಸ್ ಶಾಲೆ, ಜೋತಿ ಲೇಔಟ್, ಗಂಗಪತಿಪುರ, ಸುಪ್ರಜ ನಗರ, ಜೆಎಸ್ಎಸ್ ಶಾಲೆ ಸುತ್ತಮುತ್ತಲ ಪ್ರದೇಶಗಳು, ಕೋಣನಕುಂಟೆ ಸರ್ಕಾರಿ ಶಾಲೆ, ಜರಗನಹಳ್ಳಿ ರ‍್ಕ್, ಗಂಗಾಧರೇಶ್ವರ ದೇವಸ್ಥಾನ, ಬಸವರಾಜು ಲೇಔಟ್, ಶಾಂತಿ ಸ್ಹಾ ಮಿಲ್, ರಾಜೀವ್ ಗಾಂಧಿ ರಸ್ತೆ, ಸಾರಕ್ಕಿ ಕೆರೆ, ಸಾರಕ್ಕಿ ಸಿಗ್ನಲ್, ನಾಗರ್ಜುನ ಪ್ರೀಮಿಯರ್ , ಚುಂಚಗಟ್ಟ ವಿಲ್ಲೇಜ್, ಶ್ರೀನಿಧಿ ಲೇಔಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ.