ಪಲ್ಸ್ ಪೋಲಿಯೋ' ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ 
ರಾಜ್ಯ

ಬೆಂಗಳೂರು: ರಾಷ್ಟ್ರೀಯ 'ಪಲ್ಸ್ ಪೋಲಿಯೊ ಲಸಿಕಾ' ಅಭಿಯಾನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ಗೃಹ ಕಚೇರಿ ಕೃಷ್ಣಾದಲ್ಲಿ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ರಾಷ್ಟ್ರೀಯ ಲಸಿಕಾ ದಿನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ 'ರಾಷ್ಟ್ರೀಯ ಪಲ್ಸ್ ಪೋಲಿಯೋ' ಲಸಿಕಾ ಕಾರ್ಯಕ್ರಮ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಯಾನಕ್ಕೆ ಚಾಲನೆ ನೀಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ರಾಷ್ಟ್ರೀಯ ಲಸಿಕಾ ದಿನವನ್ನು ಉದ್ಘಾಟಿಸಿದರು. ಗೃಹ ಸಚಿವ ಡಾ. ಜಿ. ಪರಮೇಶ್ವರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಪ್ರತಿಯೊಬ್ಬರೂ ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೊ ಲಸಿಕೆ ಹಾಕಿಸುವ ಮೂಲಕ "ಪೋಲಿಯೊ ಮುಕ್ತ ಭಾರತ"ದ ನಮ್ಮ ಅಭಿಯಾನಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.

ಇಂದು ನೀವು ಮಗುವಿಗೆ ಹಾಕಿಸುವ ಎರಡು ಹನಿ‌ ಲಸಿಕೆ, ಅದರ ಭವಿಷ್ಯವನ್ನು ಶಾಶ್ವತ ಅಂಗವೈಕಲ್ಯದಿಂದ ರಕ್ಷಿಸಲಿದೆ ಎಂದು ತಿಳಿಸಿದರು. ನಿಮ್ಮ ಮನೆಯಲ್ಲಿ 5 ವರ್ಷದೊಳಗಿನ ಪುಟ್ಟ ಮಕ್ಕಳಿದ್ದಲ್ಲಿ‌ ಇಂದಿನಿಂದ ಡಿಸೆಂಬರ್ 24ರ ಒಳಗಾಗಿ ತಪ್ಪದೇ ಸಮೀಪದ ಲಸಿಕಾ ಕೇಂದ್ರಕ್ಕೆ ತೆರಳಿ ಪೋಲಿಯೋ ಲಸಿಕೆ ಹಾಕಿಸಿ, ಪೋಲಿಯೋ ಮುಕ್ತ ಭಾರತ ಅಭಿಯಾನದ ಜೊತೆಯಾಗಿ ಎಂದು ಹೇಳಿದರು.

ಜಿಲ್ಲಾ ಕೇಂದ್ರಗಳಲ್ಲಿಯೂ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು, ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Pakistan: 17 ವರ್ಷ ಜೈಲು ಶಿಕ್ಷೆ ಹಿನ್ನೆಲೆ, ದೇಶಾದ್ಯಂತ ಬೀದಿಗಿಳಿದು ಹೋರಾಟಕ್ಕೆ ಸಜ್ಜಾಗಿ, ಇಮ್ರಾನ್ ಖಾನ್ ಕರೆ!

ರಾಜ್ಯದಲ್ಲಿ 'ಸೀಸನಲ್ ಫ್ಲೂ' ಹೆಚ್ಚಳ ಹಿನ್ನೆಲೆ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ!

video| ಹವಾಮಾನ ಬದಲಾವಣೆ: ಸುಡುವ ಮರಳುಗಾಡಲ್ಲಿ ಕಂಡು ಕೇಳರಿಯದ ಹಿಮಪಾತ!

Epstein files: ನ್ಯಾಯಾಂಗ ಇಲಾಖೆ ವೆಬ್‌ಪುಟದಿಂದ ಟ್ರಂಪ್ ಫೋಟೋ ಸೇರಿ ಕನಿಷ್ಠ 16 ದಾಖಲೆಗಳು ಕಣ್ಮರೆ..!

ಕೋಳಿ ಪಂದ್ಯ ಅಡ್ಡೆ ಮೇಲೆ ಪೊಲೀಸರ ದಾಳಿ: ಪುತ್ತೂರು MLA ಸೇರಿ 16 ಮಂದಿ ವಿರುದ್ಧ ಕೇಸ್ ದಾಖಲು!

SCROLL FOR NEXT