ಚಿಕ್ಕಬಳ್ಳಾಪುರ: ಮದುವೆಯಾಗಿ 6 ವರ್ಷದ ಮಗುವಿದ್ದರೂ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯೋರ್ವ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಬಾಪೂಜಿ ನಗರದಲ್ಲಿ 30 ವರ್ಷದ ಬಾಲಾಜಿ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಶಿಡ್ಲಘಟ್ಟ ಮೂಲದ ಮಹಿಳೆ ಜೊತೆ ಬಾಲಾಜಿ ಸಿಂಗ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನು. ಈ ವಿಚಾರ ತಿಳಿದ ಬಾಲಾಜಿ ಸಿಂಗ್ ಪತ್ನಿ ಜಗಳ ಮಾಡಿದ್ದಳು. ನಂತರ ಪೋಷಕರು ಬಾಲಾಜಿಗೆ ಬುದ್ಧಿ ಹೇಳಿದ್ದರು.
ಅದರಂತೆ ಮಹಿಳೆಯ ಸಹವಾಸ ಬಿಟ್ಟು ಬಾಲಾಜಿ ತಾನಾಯಿತು ತನ್ನ ಕುಟುಂಬ ಅಂತ ಸುಮ್ಮನಿದ್ದನು. ಆದರೆ ಮಹಿಳೆ ಮಾತ್ರ ಬಾಲಾಜಿಯನ್ನು ಬಿಡಲು ಇಚ್ಛಿಸಲಿಲ್ಲ. ಬಾಲಾಜಿ ಸಿಂಗ್ಗೆ ಹನಿಟ್ರಾಪ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದಳು. ಇದರಿಂದ ನೊಂದು ಬಾಲಾಜಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಬಾಲಾಜಿ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದ್ದು ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.