ನಾಲ್ಕು ಚಿರತೆ ಮರಿಗಳ ರಕ್ಷಣೆ 
ರಾಜ್ಯ

ಬೆಂಗಳೂರಿನ ಹೊರವಲಯದಲ್ಲಿ ನಾಲ್ಕು ಚಿರತೆ ಮರಿಗಳ ರಕ್ಷಣೆ

ಸರಿಸುಮಾರು 5 ರಿಂದ–7 ದಿನದ ಈ ಮರಿಗಳಲ್ಲಿ ಮೂರು ಹೆಣ್ಣು ಮತ್ತು ಒಂದು ಗಂಡು ಮರಿ ಇದೆ.

ಬೆಂಗಳೂರು: ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ) ವನ್ಯಜೀವಿ ಆಸ್ಪತ್ರೆ ಮಂಗಳವಾರ ಬೆಂಗಳೂರಿನ ಹೊರವಲಯದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ನಾಲ್ಕು ಚಿರತೆ ಮರಿಗಳನ್ನು ರಕ್ಷಿಸಿದೆ.

ಪಿಎಫ್‌ಎ ಪ್ರಕಾರ, ಅದರ ಸ್ವಯಂಸೇವಕರಿಗೆ ಇಂದು ಬೆಳಗ್ಗೆ ಚಿರತೆ ಮರಿಗಳು ಇರುವ ಬಗ್ಗೆ ಕರೆ ಬಂದಿದ್ದು, ತಕ್ಷಣ ತ್ವರಿತ ರಕ್ಷಣಾ ಪ್ರತಿಕ್ರಿಯೆ ತಂಡ 30 ನಿಮಿಷಗಳಲ್ಲಿ ತಾವರೆಕೆರೆ ಹೋಬಳಿಯಲ್ಲಿರುವ ಸ್ಥಳಕ್ಕೆ ತಲುಪಿದೆ.

ಮರಿಗಳನ್ನು ವೈದ್ಯಕೀಯ ಆರೈಕೆಗಾಗಿ ಕೊಂಡೊಯ್ಯುವ ಮೊದಲು ತಾಯಿ ಚಿರತೆ ಹಿಂತಿರುಗಿದ ಚಿಹ್ನೆಗಳಿಗಾಗಿ ಪ್ರದೇಶವನ್ನು ಸಂಪೂರ್ಣವಾಗಿ ಪರಿಶೀಲಿಸಲಾಯಿತು.

ಸರಿಸುಮಾರು 5 ರಿಂದ–7 ದಿನದ ಈ ಮರಿಗಳಲ್ಲಿ ಮೂರು ಹೆಣ್ಣು ಮತ್ತು ಒಂದು ಗಂಡು ಮರಿ ಇದೆ.

ಮರಿಗಳು ನಿರ್ಜಲೀಕರಣಗೊಂಡಿರುವುದರಿಂದ ಅವುಗಳನ್ನು ಪಿಎಫ್‌ಎ ವನ್ಯಜೀವಿ ಆಸ್ಪತ್ರೆಗೆ ಸಾಗಿಸಲಾಯಿತು. ಅವುಗಳಿಗೆ ಯಾವುದೇ ಗಾಯಳಾಗಿಲ್ಲ. ಹೀಗಾಗಿ ವಯಸ್ಸಿಗೆ ಸೂಕ್ತವಾದ ಪೌಷ್ಠಿಕಾಂಶದ ಆಹಾರ ನೀಡಲಾಯಿತು ಎಂದು ಪಿಎಫ್‌ಎ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದು ರಾತ್ರಿ, ತಾಯಿಗೆ ತನ್ನ ಮರಿಗಳ ಬಳಿ ಮರಳಲು ಉತ್ತಮ ಅವಕಾಶ ನೀಡುವ ನಾವು ಕೆಲಸ ಮಾಡುತ್ತಿದ್ದೇವೆ" ಎಂದು ಪಿಎಫ್‌ಎ ವನ್ಯಜೀವಿ ಆಸ್ಪತ್ರೆಯ ಮುಖ್ಯ ವನ್ಯಜೀವಿ ಪಶುವೈದ್ಯ ಕರ್ನಲ್ ಡಾ. ನವಾಜ್ ಶರೀಫ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!