ರಾಜ್ಯ

ಬೆಂಗಳೂರಿನಲ್ಲಿ 837 ಕೆರೆಗಳಲ್ಲಿ 730 ಅತಿಕ್ರಮಣ: BDA ವರದಿ

ಜಿಲ್ಲಾಧಿಕಾರಿ ಕಚೇರಿಯ ವರದಿಯ ಪ್ರಕಾರ, ಹೆಚ್ಚಿನ ಅತಿಕ್ರಮಣಗಳು ಯಲಹಂಕ ಮತ್ತು ಬೆಂಗಳೂರು ಉತ್ತರ ತಾಲ್ಲೂಕುಗಳಲ್ಲಿ ಆಗಿವೆ. ಯಲಹಂಕದಲ್ಲಿ 105 ಕೆರೆಗಳಲ್ಲಿ 1,147 ಎಕರೆ ಒತ್ತುವರಿಯಾಗಿದ್ದು, ಬೆಂಗಳೂರು ಉತ್ತರದಲ್ಲಿ 123 ಕೆರೆಗಳಲ್ಲಿ 1,183 ಎಕರೆ ಒತ್ತುವರಿಯಾಗಿದೆ. ಬೆಂಗಳೂರು ದಕ್ಷಿಣದಲ್ಲಿ 179 ಕೆರೆಗಳಲ್ಲಿ 825 ಎಕರೆ ಒತ್ತುವರಿಯಾಗಿದೆ.

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ 837 ಕೆರೆಗಳಲ್ಲಿ 730 ಕೆರೆಗಳು ಅತಿಕ್ರಮಣಗೊಂಡಿವೆ ಎಂದು ಜಿಲ್ಲಾಡಳಿತ ಪತ್ತೆಹಚ್ಚಿದೆ. ಬೆಂಗಳೂರು ಉತ್ತರ, ದಕ್ಷಿಣ ಮತ್ತು ಪೂರ್ವ ತಾಲ್ಲೂಕುಗಳ ತಹಶೀಲ್ದಾರ್‌ಗಳು ಮತ್ತು ಭೂಮಾಪಕರ ವರದಿಗಳ ಪ್ರಕಾರ, 4,554 ಎಕರೆ ಕೆರೆ ಭೂಮಿ ಅತಿಕ್ರಮಣ ಮಾಡಲಾಗಿದೆ.

ಬಿಬಿಎಂಪಿ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ನಿಗಮದ ವ್ಯಾಪ್ತಿಯಲ್ಲಿನ ಕೆರೆ ಭೂಮಿ ಮತ್ತು ಅವುಗಳ ಗಡಿಗಳ ಈ ಅತಿಕ್ರಮಣಗಳನ್ನು ನಿಭಾಯಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2022 ರಲ್ಲಿ ಭಾರೀ ಪ್ರವಾಹದ ನಂತರ, ಹಿಂದಿನ ಬಿಜೆಪಿ ಸರ್ಕಾರವು ಎಲ್ಲಾ ಜಲಮೂಲಗಳು ಮತ್ತು ರಾಜಕಾಲುವೆಗಳನ್ನು ಅತಿಕ್ರಮಣ ಮಾಡಲಾಗಿದೆಯೇ ಎಂದು ಪರಿಶೀಲಿಸಲು ಸಮೀಕ್ಷೆಗೆ ಆದೇಶಿಸಿತ್ತು. ಅತಿಕ್ರಮಣಗಳನ್ನು ತೆಗೆದುಹಾಕಲು ಮತ್ತು ಮಳೆನೀರು ಕಾಲುವೆಗಳಿಂದ ಕೆರೆಗಳಿಗೆ ಮತ್ತು ಒಂದು ಕೆರೆಯಿಂದ ಇನ್ನೊಂದು ಕೆರೆಗೆ ಅಡೆತಡೆಯಿಲ್ಲದೆ ಮುಕ್ತವಾಗಿ ಹರಿಯುವಂತೆ ಮಾಡಲು ಸಮೀಕ್ಷೆಯನ್ನು ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ವರದಿಯ ಪ್ರಕಾರ, ಹೆಚ್ಚಿನ ಅತಿಕ್ರಮಣಗಳು ಯಲಹಂಕ ಮತ್ತು ಬೆಂಗಳೂರು ಉತ್ತರ ತಾಲ್ಲೂಕುಗಳಲ್ಲಿ ಆಗಿವೆ. ಯಲಹಂಕದಲ್ಲಿ 105 ಕೆರೆಗಳಲ್ಲಿ 1,147 ಎಕರೆ ಒತ್ತುವರಿಯಾಗಿದ್ದು, ಬೆಂಗಳೂರು ಉತ್ತರದಲ್ಲಿ 123 ಕೆರೆಗಳಲ್ಲಿ 1,183 ಎಕರೆ ಒತ್ತುವರಿಯಾಗಿದೆ. ಬೆಂಗಳೂರು ದಕ್ಷಿಣದಲ್ಲಿ 179 ಕೆರೆಗಳಲ್ಲಿ 825 ಎಕರೆ ಒತ್ತುವರಿಯಾಗಿದೆ.

ಅದೇ ರೀತಿ, ಆನೇಕಲ್ ತಾಲ್ಲೂಕಿನಲ್ಲಿ 223 ಕೆರೆಗಳಲ್ಲಿ 719 ಎಕರೆ ಭೂಮಿ ಒತ್ತುವರಿಯಾಗಿದೆ. ಪೂರ್ವ ತಾಲ್ಲೂಕಿನಲ್ಲಿ 100 ಕೆರೆಗಳಲ್ಲಿ 667 ಎಕರೆ ಭೂಮಿ ಒತ್ತುವರಿಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ 700 ಕೆರೆಗಳಲ್ಲಿ 102 ಕೆರೆಗಳು ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 187 ಕೆರೆಗಳಿದ್ದು, ಅವುಗಳಲ್ಲಿ 167 ಕೆರೆಗಳನ್ನು ದೂರು ಬಂದ ನಂತರ ಸಮೀಕ್ಷೆ ಮಾಡಲಾಗಿದೆ. ಕಂದಾಯ ಇಲಾಖೆಯ ಭೂಮಾಪಕರ ವರದಿಯ ಆಧಾರದ ಮೇಲೆ, ನಾವು 102 ಕೆರೆಗಳಲ್ಲಿ ಒತ್ತುವರಿ ಗುರುತಿಸಿದ್ದೇವೆ. ಕೇವಲ 29 ಕೆರೆಗಳು ಮಾತ್ರ ಅತಿಕ್ರಮಣದಿಂದ ಮುಕ್ತವಾಗಿವೆ. 29 ಕೆರೆಗಳನ್ನು ಸರ್ಕಾರಿ ಸಂಸ್ಥೆಗಳು ಅತಿಕ್ರಮಣ ಮಾಡಿವೆ ದು ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್ ವಿಜಯಕುಮಾರ್ ಹರಿದಾಸ್ ತಿಳಿಸಿದ್ದಾರೆ.

ಕಂದಾಯ ಇಲಾಖೆಯಿಂದ ಉತ್ತಮ ಸಹಕಾರ ದೊರೆತರೆ, ಅತಿಕ್ರಮಣವನ್ನು ಗುರುತಿಸುವುದು ಮತ್ತು ಅತಿಕ್ರಮಣಗಳ ಬಗ್ಗೆ ಬಿಬಿಎಂಪಿಗೆ ವರದಿ ಮಾಡುವುದು, ಅತಿಕ್ರಮಣಗಳನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬಹುದು ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT